
ಓರ್ರಿ ಎಂದು ಪ್ರಸಿದ್ಧರಾಗಿರುವ ಓರ್ಹಾನ್ ಅವತ್ರಮಣಿ ಅಂಬಾನಿ ಕುಟುಂಬಕ್ಕೆ ಬಹಳ ಆಪ್ತ. ಅಷ್ಟೇ ಏಕೆ, ಬಾಲಿವುಡ್ ಬಳಗಕ್ಕೆಲ್ಲ ತೀರಾ ಕ್ಲೋಸ್. ಇನ್ನು ಅಂಬಾನಿ ಕುಟುಂಬದ ಕಿರಿಸೊಸೆಯಾಗಲಿರುವ ರಾಧಿಕಾ ಮರ್ಚೆಂಟ್ಗೆ ಕೂಡಾ 2015ರಿಂದಲೇ ಸ್ನೇಹಿತನಾಗಿರುವ ಓರಿ ಸದಾ ಸುದ್ದಿಯಲ್ಲಿರುತ್ತಾನೆ.
ಈ ಬಾರಿ ರಾಧಿಕಾ ಮರ್ಚೆಂಟ್ ಜೊತೆ ಜಾಮ್‌ನಗರದಲ್ಲಿ ಗರ್ಬಾ ಪ್ರದರ್ಶನ ನೀಡುತ್ತಿರುವ ವೀಡಿಯೊವನ್ನು ಓರಿ ಹಂಚಿಕೊಂಡಿದ್ದು, ಇವರಿಬ್ಬರ ಈ ನೃತ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುಮಾರು 1 ಮಿಲಿಯನ್ ಲೈಕ್ಸ್ ಪಡೆದಿದ್ದು, ವೀಕ್ಷಣೆ ಸಂಖ್ಯೆ ಬಹಳಷ್ಟು ಹೆಚ್ಚಿದೆ. ಹಲವು ಕಾರಣಗಳಿಗಾಗಿ ವಿಡಿಯೋ ಹೆಚ್ಚು ಶೇರ್ ಆಗುತ್ತಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ಮೂರು ದಿನಗಳ ಪೂರ್ವ-ವಿವಾಹ ಕಾರ್ಯಕ್ರಮದಲ್ಲಿ ಜೋರು ಓಡಾಟ ನಡೆಸಿಕೊಂಡಿದ್ದ ಓರಿ, ಅಂದಿನಿಂದಲೂ ಸಮಾರಂಭದ ಕೆಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಇದೀಗ 'ರಿದಂ ಆ್ಯಂಡ್ ರಾಧಿಕಾ ಮರ್ಚೆಂಟ್' ಎಂದು ಓರಿ ಹಂಚಿಕೊಂಡಿರುವ ವಿಡಿಯೋದಲ್ಲಿ ವೇದಿಕೆ ಮೇಲೆ ಕೆಲವರು ಗರ್ಭಾ ನೃತ್ಯ ಮಾಡುತ್ತಿದ್ದರೆ, ವೇದಿಕೆಯ ಕೆಳಗೆ ಓರಿ ಮತ್ತು ವಧು ರಾಧಿಕಾ ಕೋಲಿಲ್ಲದೆಯೇ ಗರ್ಭಾ ಸ್ಟೆಪ್ಸ್ ಹಾಕುತ್ತಿದ್ದಾರೆ.
ಅಂಬಾನಿ ಸೊಸೆಯಾಗಲಿರುವ ರಾಧಿಕಾ ಹೇಳೀ ಕೇಳೀ ಭರತನಾಟ್ಯ ನೃತ್ಯಗಾರ್ತಿ. ಈಕೆಯ ನೃತ್ಯ ಎಲ್ಲರನ್ನೂ ಸೆಳೆಯುತ್ತಿದೆ. ಇನ್ನು ಓರಿ ಕೂಡಾ ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಿದ್ದು, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
'ಅವನು ಉತ್ತಮ ನೃತ್ಯಗಾರ' ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು, 'ಇಬ್ಬರು ಮುದ್ದಾದ ಶಾಲಾ ಮಕ್ಕಳು ಗರ್ಭಾವನ್ನು ಪ್ರದರ್ಶಿಸುತ್ತಿರುವಂತಿದೆ' ಎಂದಿದ್ದಾರೆ.
'ಓರ್ರಿ ಮತ್ತು ರಾಧಿಕಾ ಇಬ್ಬರೂ ಮುದ್ದಾಗಿ ಕಾಣುತ್ತಾರೆ' ಎಂದು ಮೂರನೆಯವರು ಹೇಳಿದ್ದಾರೆ.
'ಓರ್ರಿ ದಿ ಕ್ಯೂಟೆಸ್ಟ್. ಸದಾ ಸಂತೋಷವಾಗಿರುತ್ತಾನೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇಲ್ಲಿದೆ ವಿಡಿಯೋ
ಈ ಹಿಂದೆ, ಓರಿ ಮತ್ತು ರಿಹಾನ್ನಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೀಡಿಯೊದಲ್ಲಿ, ರಿಹಾನ್ನಾ ಓರಿಯ ಕಿವಿಯೋಲೆಗಳಲ್ಲಿ ಒಂದನ್ನು ಹಿಡಿದಿಟ್ಟುಕೊಂಡು ಮೆಚ್ಚಿಕೊಳ್ಳುವುದನ್ನು ಕಾಣಬಹುದಿತ್ತು. ನಂತರ, ಓರಿ ತನ್ನ ಕಿವಿಯೋಲೆಗಳು 'ಜಾಮ್‌ನಗರದಲ್ಲಿ ಪ್ರೀತಿಯನ್ನು ಕಂಡುಕೊಂಡಿವೆ' ಮತ್ತು 'ಈಗ ಉತ್ತಮ ಸ್ಥಳದಲ್ಲಿವೆ' ಎಂದು ವ್ಯಕ್ತಪಡಿಸುವ ಪೋಸ್ಟ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.