ಯಶ್ ರಾಮಾಯಣ ಚಿತ್ರೀಕರಣ ಯಾವಾಗ? ಸನ್ನಿ ಡಿಯೋಲ್ ಪಾತ್ರವೇನು? ಹೊರಬಿತ್ತು ಮಹತ್ವದ ಮಾಹಿತಿ

By Gowthami K  |  First Published Sep 10, 2024, 9:48 PM IST

ರಣ್‌ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಯಶ್ ಮತ್ತು ಸನ್ನಿ ಡಿಯೋಲ್ ಕೂಡ ಚಿತ್ರೀಕರಣಕ್ಕೆ ಸೇರಿಕೊಳ್ಳಲು ಸಿದ್ಧರಾಗಿದ್ದಾರೆ. ಸನ್ನಿ ಡಿಯೋಲ್ 2025 ರಲ್ಲಿ ಸೇರಿಕೊಳ್ಳಲಿದ್ದಾರೆ. ಯಶ್ ಯಾವಾಗ?


ಬೆಂಗಳೂರು (ಸೆ.10): ನಿರ್ದೇಶಕ ನಿತೇಶ್ ತಿವಾರಿ ಅವರ ಮುಂಬರುವ ಚಿತ್ರ 'ರಾಮಾಯಣ'ದ ಬಗ್ಗೆ ಪ್ರತಿದಿನ ರೋಮಾಂಚಕಾರಿ ಸುದ್ದಿಗಳು ಹೊರಬರುತ್ತಿವೆ. ಇತ್ತೀಚಿನ ಸುದ್ದಿ ಚಿತ್ರದ ಚಿತ್ರೀಕರಣದ ಬಗ್ಗೆ. ಚಿತ್ರದ ಪ್ರಮುಖ ನಟ ರಣ್‌ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಈಗಾಗಲೇ ಚಿತ್ರೀಕರಣ ಆರಂಭಿಸಿದ್ದಾರೆ. ಅರುಣ್ ಗೋವಿಲ್ ಮತ್ತು ಲಾರಾ ದತ್ತಾ ಸೇರಿದಂತೆ ಹಲವರಿದ್ದಾರೆ. ಈಗ ಈ ಚಿತ್ರದಲ್ಲಿ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಿರುವ ಇಬ್ಬರು ದೊಡ್ಡ ತಾರೆಯರಾದ ಕನ್ನಡ ಸೂಪರ್‌ಸ್ಟಾರ್ ಯಶ್ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಸನ್ನಿ ಡಿಯೋಲ್ ಕೂಡ ಚಿತ್ರೀಕರಣ ಆರಂಭಿಸಲು ಸಿದ್ಧರಾಗಿದ್ದಾರೆ.  

ಯಶ್ ರಾಮಾಯಣದ ಚಿತ್ರೀಕರಣ ಯಾವಾಗ ಆರಂಭ: ನಟ ಯಶ್ 'ರಾಮಾಯಣ'ದಲ್ಲಿ ಮುಖ್ಯ ಖಳನಾಯಕ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಯಶ್ 2024 ರ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ.   “ಯಶ್ ರಾಮಾಯಣದಲ್ಲಿ ತಮ್ಮ ಪಾತ್ರಕ್ಕಾಗಿ ಹಲವಾರು ಲುಕ್ ಟೆಸ್ಟ್‌ಗಳನ್ನು ನೀಡಿದ್ದಾರಂತೆ. ಪ್ರಸ್ತುತ ಯಶ್ ನಿರ್ದೇಶಕ ಗೀತು ಮೋಹನ್‌ದಾಸ್ ಅವರ 'ಟಾಕ್ಸಿಕ್‌' ಚಿತ್ರೀಕರಣದಲ್ಲಿದ್ದಾರೆ. ಇದನ್ನು ಪೂರ್ಣಗೊಳಿಸಿದ ನಂತರ ಅವರು 'ರಾಮಾಯಣ'ದಲ್ಲಿ ಕೆಲಸ ಮಾಡುತ್ತಾರೆ. 

Tap to resize

Latest Videos

undefined

ದರ್ಶನ್ ಪತ್ನಿ ವಿಜಯಲಕ್ಷ್ಮೀ ಜತೆ ಸಿಎಂ ಸಿದ್ದರಾಮಯ್ಯ ಸೊಸೆ ಸ್ಮಿತಾ ಪಾರ್ಟಿ, ಕುತೂಹಲ ಕೆರಳಿಸಿದ ಫೋಟೋ!

ಸನ್ನಿ ಡಿಯೋಲ್  ಚಿತ್ರೀಕರಣ  ಯಾವಾಗ:   “ಯಶ್ 'ರಾಮಾಯಣ ಭಾಗ ಒಂದು' ಚಿತ್ರೀಕರಣವನ್ನು 2025 ರ ಮೊದಲ ತ್ರೈಮಾಸಿಕದವರೆಗೆ ನಿರಂತರವಾಗಿ ಮಾಡುತ್ತಾರೆ, ಆದರೆ ಸನ್ನಿ ಡಿಯೋಲ್ 2025 ರ ಬೇಸಿಗೆಯಲ್ಲಿ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಾರೆ. ಸನ್ನಿ ಡಿಯೋಲ್ ಪ್ರಸ್ತುತ 'ಬಾರ್ಡರ್ 2' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದು ಪೂರ್ಣಗೊಂಡ ನಂತರ ಅವರು 'ರಾಮಾಯಣ' ಚಿತ್ರೀಕರಣ ಆರಂಭಿಸುತ್ತಾರೆ. ರಣ್‌ಬೀರ್ ಕಪೂರ್ ಅವರಂತೆ ಸನ್ನಿ ಡಿಯೋಲ್ ಕೂಡ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಡೇಟ್ಸ್ ನೀಡಿದ್ದಾರೆ. ” 2025 ರ ಮಧ್ಯದಲ್ಲಿ ನಿತೇಶ್ ತಿವಾರಿ ರಣ್‌ಬೀರ್ ಕಪೂರ್ ಜೊತೆಗೆ ಯಶ್ ಮತ್ತು ನಂತರ ಸನ್ನಿ ಡಿಯೋಲ್ ಅವರ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ ಎಂದು ವರದಿಯಾಗಿದೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ರೈಲು ಜಾಲ ಹೊಂದಿದ ಭಾರತದ ರೈಲ್ವೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

 ಶೇ.90ರಷ್ಟು ಚಿತ್ರೀಕರಣ ಪೂರ್ಣ: ರಣ್‌ಬೀರ್ ಕಪೂರ್ 'ರಾಮಾಯಣ ಭಾಗ ಒಂದು' ಚಿತ್ರದ ಶೇ.90ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಅವರು ತಮ್ಮ ಪಾತ್ರದ ಚಿತ್ರೀಕರಣಕ್ಕಾಗಿ ನಿತೇಶ್ ತಿವಾರಿ ಮತ್ತು ನಮಿತ್ ಮಲ್ಹೋತ್ರಾ ಅವರಿಗೆ ತುಂಬಾ ದಿನ ಡೇಟ್ಸ್ ನೀಡಿದ್ದರು. ರಣ್‌ಬೀರ್ 'ರಾಮಾಯಣ ಭಾಗ 1' ಚಿತ್ರೀಕರಣದ ನಂತರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರುವ ಚಿತ್ರ 'ಲವ್ ಅಂಡ್ ವಾರ್'ಗಾಗಿ ತಯಾರಿ ನಡೆಸುತ್ತಿದ್ದಾರೆ, ಇದರ ಚಿತ್ರೀಕರಣವನ್ನು ಅವರು ಅಕ್ಟೋಬರ್ ಮೊದಲ ವಾರದಲ್ಲಿ ಆರಂಭಿಸಲಿದ್ದಾರೆ.  

ಈ ಮಧ್ಯೆ, ನಿತೇಶ್ ತಿವಾರಿ ಪ್ರಸ್ತುತ ಚಿತ್ರದ ಎಡಿಟಿಂಗ್‌ ನಲ್ಲೂ ಕೆಲಸ ಮಾಡುತ್ತಿದ್ದಾರೆ. ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇದಕ್ಕೂ ಮೊದಲು, ಅಮಿತಾಬ್ ಬಚ್ಚನ್ ಚಿತ್ರದ ತಾರಾಬಳಗಕ್ಕೆ ಸೇರಿದ್ದಾರೆ ಎಂಬ ಸುದ್ದಿ ಬಂದಿತ್ತು. ಅವರು ಚಿತ್ರದಲ್ಲಿ ಜಟಾಯು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ರಣ್‌ಬೀರ್ ಕಪೂರ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ಅವರು ರಾಮನ ಜೊತೆಗೆ ಪರಶುರಾಮನ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 839 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ 2026 ರಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ರವಿ ದುಬೆ, ಹರ್ಮನ್,  ಶಿಶಿರ್ ಶರ್ಮಾ, ರಕುಲ್ ಪ್ರೀತ್ ಸಿಂಗ್ ಮತ್ತು ಸೋನಿಯಾ ಬಾಲಾನಿ ಸೇರಿದಂತೆ ಹಲವು ತಾರೆಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ. 

click me!