ತಮಿಳು ಚಿತ್ರರಂಗದಲ್ಲಿ ಹಿಂದೊಮ್ಮೆ ಸ್ಟಾರ್ ನಟರಾಗಿ ಮೆರೆದಿದ್ದ ಶಿವಕಾರ್ತಿಕೇಯನ್ ಬಳಿಕ ಸ್ವಲ್ಪ ಮಟ್ಟಿಗಿನ ಹಿನ್ನಡೆ ಅನುಭವಿಸಿದರು ಎನ್ನಬಹುದು. ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ಜಗಜ್ಜಾಹೀರಾಗಿಲ್ಲ.
ತಮಿಳು ನಟ ಶಿವಕಾರ್ತಿಕೇಯನ್ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿದೆ. ದಶಕದ ಹಿಂದೆ ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿದ್ದ ನಟ ಶಿವಕಾರ್ತಿಕೇಯನ್ (Sivakarthikeyan),ಬಳಿಕ ವೃತ್ತಿಜೀವನದಲ್ಲಿ ಅಷ್ಟೇನೂ ಮೇಲಕ್ಕೆ ಏರಲಿಲ್ಲ. ಈ ಬಗ್ಗೆ ಸ್ವತಃ ನಟ ಶಿವಕಾರ್ತಿಕೇಯನ್ ಮಾತನಾಡಿದ್ದಾರೆ. ಅಚ್ಚರಿ ಎಂಬಂತೆ ಅವರು, ಅವರಿಗೆ ಸತ್ಯ ಎನಿಸಿದ್ದನ್ನು ಹೇಳಿದ್ದಾರೆ. ಆದರೆ, ಬೇರೆ ಯಾರೇ ಆಗಿದ್ದರೂ ಅದನ್ನು ಹೇಳಲು ಮುಜುಗರ ಅಥವಾ ಅಧೈರ್ಯ ತೋರಿಸುತ್ತಿದ್ದರೇನೋ!
ಆದರೆ, ನಟ ಶಿವಕಾರ್ತಿಕೇಯನ್ ಮಾತ್ರ ಹೆಚ್ಚು ತಲೆ ಕೆಡಿಸಿಕೊಳ್ಳದೇ ಆ ಬಗ್ಗೆ ಹೇಳಿಕೊಂಡಿದ್ದಾರೆ. ಡಾನ್, ರೆಮೋ, ಹೀರೋ ಹಾಗು ಪ್ರಿನ್ಸ್ ಸೇರಿದಂತೆ ಬಹಳಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಟ ಶಿವಕಾರ್ತಿಕೇಯನ್, ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹಿಂದೊಮ್ಮೆ ಸ್ಟಾರ್ ನಟರಾಗಿ ಮೆರೆದಿದ್ದ ಶಿವಕಾರ್ತಿಕೇಯನ್ ಬಳಿಕ ಸ್ವಲ್ಪ ಮಟ್ಟಿಗಿನ ಹಿನ್ನಡೆ ಅನುಭವಿಸಿದರು ಎನ್ನಬಹುದು.
ಕತ್ರಿನಾ ಕೈಫ್ ತುಂಬಾ ಸೆನ್ಸಿಬಲ್ & ಬ್ಯೂಟಿಫುಲ್ ಅಂದ್ರು ವಿಜಯ್ ಸೇತುಪತಿ; ಯಡವಟ್ಟಾಗಿದ್ದು ಎಲ್ಲಿ?
ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ಜಗಜ್ಜಾಹೀರಾಗಿಲ್ಲ. ಆದರೆ, ಊಹಾಪೋಹಗಳು ಸಾಕಷ್ಟು ಹರಿದಾಡಿವೆ. ಕೆಲವರಂತೂ ದೊಡ್ಡ ದೊಡ್ಡ ಸ್ಟಾರ್ ನಟರುಗಳು ಹೆಸರುಗಳನ್ನು ಹೇಳಿ, ಅವರು ಶಿವಕಾರ್ತಿಕೇಯನ್ ಅವರಿಗೆ ಬೆಳೆಯಲು ಬಿಡುತ್ತಿಲ್ಲ, ಕಾಲೆಳೆಯುತ್ತಿದ್ದಾರೆ ಎಂದು ಭಾರೀ ಸುದ್ದಿ ಹಬ್ಬಿಸಿದ್ದರು. ಆದರೆ, ಸತ್ಯ ಸಂಗತಿ ಏನು ಎಂಬುದು ಸರಿಯಾಗಿ ಯಾರಿಗೂ ಗೊತ್ತಿಲ್ಲ ಎನ್ನಬಹುದು. ನಟ ಶಿವಕಾರ್ತಿಕೇಯನ್ ಕೂಡ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ.
ಬೇಬಿ ಶ್ಯಾಮಿಲಿಗೆ 'ಕರ್ಮ' ಅನುಭವಿಸಲೇಬೇಕು, ಮಾಡಿದ್ದುಣ್ಣೋ ಮಾರಾಯ ಅಂತಿರೋದ್ಯಾಕೆ?
ಆದರೆ, ಸ್ವತಃ ನಟ ಶಿವಕಾರ್ತಿಕೇಯನ್ ಅವರೇ ಮಾತನಾಡಿರುವ ಕೆಲವು ಮಾತುಗಳಲ್ಲಿ ಈ ಬಗ್ಗೆ ಕೂಡ ಸ್ವಲ್ಪ ಮಟ್ಟಿಗಿನ ಕ್ಲಾರಿಫಿಕೇಶನ್ ಸಿಗುತ್ತದೆ. ವೈರಲ್ ಆಗಿರುವ ವೀಡಿಯೋದಲ್ಲಿ ನಟ ಆಡಿರುವ ಮಾತುಗಳಲ್ಲಿ ಏನಿವೆ? ಹಾಗಿದ್ದರೆ ಶಿವಕಾರ್ತಿಕೇಯನ್ ಏನು ಹೇಳಿದ್ದಾರೆ, ನೋಡೋಣ ಬನ್ನಿ. 'ನನಗೆ ಬೇರೆ ಹೀರೋಗಳ ಸಿನಿಮಾಗಳಲ್ಲಿ ನಟಿಸುವುದು ಸುಲಭ ಎನಿಸುತ್ತದೆ. ನಾನೇ ಹೀರೋ ಆದಾಗ ಅದ್ಯಾಕೋ ಗೊತ್ತಿಲ್ಲ, ನನಗೆ ಸಕ್ಸಸ್ ಸಿಗುವುದು ಸ್ವಲ್ಪ ಕಷ್ಟವೇ ಎನಿಸುತ್ತದೆ.
ಇಂದು ನಾರ್ತ್-ಸೌತ್ ಸಿನಿಮಾ ಭೇದಭಾವವಿಲ್ಲ, ಭಾರತದ ಸಿನಿಮಾ ಎನ್ನಲಾಗುತ್ತಿದೆ; ಅಲ್ಲು ಅರ್ಜುನ್
ನಾನೇ ಹೀರೋ ಆದಾಗ ಬಹುಶಃ ನಾನು ಒತ್ತಡಕ್ಕೆ ಒಳಗಾಗುತ್ತೇನೆ. ಸಿನಿಮಾ ನನ್ನ ಮೇಲೆ ನಿಂತಿದೆ, ನನ್ನ ಮೇಲೆ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ, ಅವರಿಗೆ ಅದು ವಾಪಸ್ ಬರುತ್ತೋ ಅಥವಾ ಮೋಸವಾಗಿ ಬಿಡುತ್ತಾ? ಎಂಬೆಲ್ಲ ಪ್ರಶ್ನೆಗಳು ತಲೆಯಲ್ಲಿ ಬರುತ್ತವೆ. ಆದರೆ, ನಾನು ಪೋಷಕ ಪಾತ್ರದಲ್ಲಿ ನಟಿಸುತ್ತಿರುವಾಗ ನನಗೆ ಯಾವುದೇ ಚಿಂತೆ, ಒತ್ತಡ ಕಾಡುವುದಿಲ್ಲ, ಕೂಲ್ ಆಗಿ ನಟಿಸಲು ಸಾಧ್ಯವಾಗುತ್ತದೆ' ಎಂದಿದ್ದಾರೆ ನಟ ಶಿವಕಾರ್ತಿಕೇಯನ್.
ಪ್ರಶ್ನೆ ಕೇಳಿದ ಪುಟ್ಟ ಬಾಲಕಿಗೆ ನಟ ರಣ್‌ಬೀರ್ ಕಪೂರ್ ಕೊಟ್ಟ ಉತ್ತರ ಕೇಳಿ ಶಾಕ್ ಆಗ್ಬೇಡಿ!
ಅಂದಹಾಗೆ, ನಟ ಶಿವಕಾರ್ತಿಕೇಯನ್ ಅವರು ಸದ್ಯ ಎಸ್‌ಕೆ 23 (SK 23) ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಈ ಚಿತ್ರವನ್ನು ಎಆರ್ ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೈ ಬಜೆಟ್ ಸಿನಿಮಾ ಆಗಿರುವ ಎಸ್‌ಕೆ 23, ತೆರೆಗೆ ಬರಲು ಸ್ವಲ್ಪ ಸಮಯ ಹಿಡಿಯಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ನಟ ಶಿವಕಾರ್ತಿಕೇಯನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.