ಕಂಗನಾ ಹಾದಿ ತುಳಿಯಲಿದ್ದಾರಾ ಸೈಫ್​ ಅಲಿ ಪುತ್ರಿ? ರಾಜಕೀಯ ಎಂಟ್ರಿಗೆ ಸುಳಿವು ನೀಡಿದ ನಟಿ ಹೇಳಿದ್ದೇನು?

By Suvarna News  |  First Published Mar 28, 2024, 5:09 PM IST

ಸೈಫ್​ ಅಲಿ ಖಾನ್​ ಪುತ್ರಿ, ನಟಿ ಸಾರಾ ಅಲಿ ಖಾನ್​ ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದಾರೆ. ಅವರು ಹೇಳಿದ್ದೇನು?
 


ನಟಿ ಕಂಗನಾ ರಣಾವತ್​ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.  ಕಳೆದ  25ರಂದು  ಬಿಜೆಪಿ  5ನೇ ಪಟ್ಟಿ ಘೋಷಣೆ ಮಾಡಿದ್ದು, ಅದರಲ್ಲಿ ನಟಿ ಕಂಗನಾ ರಣಾವತ್​ ಹೆಸರು ಇದೆ. ಇವರು ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲಿದ್ದಾರೆ.  ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ನಡಿ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು, ಮಂಡಿ ಪ್ರವಾಸ ಕೈಗೊಂಡಿದ್ದಾರೆ.  ಮಂಡಿ ಕ್ಷೇತ್ರದ ಮುಖಂಡರ ಜೊತೆ ಭೇಟಿ, ಸಭೆ ನಡೆಯುತ್ತಿದೆ.  ಈಗ ಇದರ ಬೆನ್ನಲ್ಲೇ ಸೈಫ್​ ಅಲಿ ಖಾನ್​ ಪುತ್ರ ಸಾರಾ ಅಲಿ ಖಾನ್​ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಕುರಿತು ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದೆ.

ಅಷ್ಟಕ್ಕೂ ಸಾರಾ ಅಲಿ ಖಾನ್​ ಸದಾ ಸುದ್ದಿಯಲ್ಲಿ ಇರುವುದು ಹಿಂದೂ ದೇವಾಲಯಗಳಿಗೆ ಭೇಟಿ ಕೊಡುವುದರಿಂದ. ಕೆಲ ತಿಂಗಳ ಹಿಂದೆ ಇವರ ಅಮರನಾಥ ಯಾತ್ರೆ ಕೈಗೊಂಡಿದ್ದರು.  ‘ಹರ ಹರ ಮಹದೇವ’ ಎಂದು  ಜೈಕಾರ ಕೂಗಿದ್ದರು, ಈ ಮಾತನ್ನು ಕೇಳಿ ಕೆಲವರು ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ನೀವೂ ಹಿಂದೂ ಧರ್ಮಕ್ಕೆ ಬಂದು ಬಿಡಿ ಎಂದಿದ್ದರು.  ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದರು, ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದರು. ಸಾರಾ ಅಲಿ ಖಾನ್​ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಅಮರನಾಥ ಯಾತ್ರೆಗೆ ಹೋದ ಮೇಲೆ ಹಲವರು ಬಾಯಿ ಮುಚ್ಚಿದ್ದಾರೆ.  ಅಂದಹಾಗೆ ವಿಕ್ಕಿ ಕೌಶಲ್​ ಅವರ ಜೊತೆ ನಟಿ ಸಾರಾ ಅಲಿ ಖಾನ್​ ನಟನೆಯ  ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ರಿಲೀಸ್​ ಆಯಿತು. ಈ ಸಿನಿಮಾ ಸಕತ್​ ಹಿಟ್​ ಆಗಿದೆ.  87 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. 

Latest Videos

undefined

ಸೈಫ್​ ಪುತ್ರಿ ಸಾರಾ ಹೊಟ್ಟೆಯ ಮೇಲೆ ಸುಟ್ಟಗಾಯ! ಎದೆಗುಂದದೇ ಮಾರ್ಜಾಲ ನಡಿಗೆ ಮಾಡಿದ ನಟಿಗೆ ಜೈಜೈಕಾರ...

ಇಂತಿಪ್ಪ ನಟಿ,  ರಾಜಕೀಯ ಪ್ರವೇಶದ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಅದೀಗ ವೈರಲ್​ ಆಗಿದೆ.  ಇತ್ತೀಚೆಗೆ ಬಿಡುಗಡೆಯಾಗಿರುವ 'ಮರ್ಡರ್ ಮುಬಾರಕ್' ಮತ್ತು 'ಏ ವತನ್ ಮೇರೆ ವತನ್' ಚಿತ್ರಗಳ ಯಶಸ್ಸಿನ ಬಳಿಕ ಸಾರಾ ಅವರು, ತಾವು  ರಾಜಕೀಯಕ್ಕೆ ಬರಲು ರೆಡಿಯಾಗಿರುವುದಾಗಿ ತಿಳಿಸಿದ್ದಾರೆ.  ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುಭವ್ ಸಿಂಗ್ ಬಸ್ಸಿ ಅವರ ಜೊತೆಗಿನ ಸಂದರ್ಶನದ ಸಮಯದಲ್ಲಿ ರಾಜಕೀಯದ ಕುರಿತು ನಟಿ ಮಾತನಾಡಿದ್ದಾರೆ.   ‘ನೀವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ನಟಿ, ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಜೊತೆ ಈಚೆಗೆ ಆಂಗ್ಲ ಮಾಧ್ಯಮವೊಂದು ಮಾಡಿದ ಸಂದರ್ಶನದ ಸಂದರ್ಭದಲ್ಲಿಯೂ ರಾಜಕೀಯ ಎಂಟ್ರಿ ಕುರಿತು ನಟಿ ಹೇಳಿದ್ದಾರೆ.

 'ನಾನು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ. ಅದಕ್ಕಾಗಿಯೇ ನಾನು ಜೀವನದಲ್ಲಿ ನಂತರ ರಾಜಕೀಯಕ್ಕೆ ಪ್ರವೇಶಿಸಲು ಬಯಸುತ್ತೇನೆ, ಆದರೆ ಇದು ಬ್ಯಾಕಪ್ ಯೋಜನೆ ಅಲ್ಲ' ಎಂದು ಸಾರಾ ಹೇಳಿದ್ದಾರೆ.  ಅಂದಹಾಗೆ,   ಸೈಫ್​  ಅಲಿ ಖಾನ್​ (Saif Ali Khan) ಅವರ ಎರಡೂ ಪತ್ನಿಯರು ಹಿಂದೂಗಳೇ. ಮೊದಲನೆಯ ಪತ್ನಿ ಅಮೃತಾ ಸಿಂಗ್​. ಅವರ ಮಗಳು ಸಾರಾ ಅಲಿ ಖಾನ್​. ಸೈಫ್​ ಅವರ ಎರಡನೆಯ ಪತ್ನಿ ಕರೀನಾ ಕಪೂರ್​. ಈ ಜೋಡಿಗೆ ಇಬ್ಬರು ಮಕ್ಕಳು. 

ಹಿಮಾಚಲ ಪ್ರದೇಶದಿಂದ ಸ್ಪರ್ಧಿಸಲ್ಲ: ಕಂಗನಾ ರಣಾವತ್​ ವಿಡಿಯೋ ವೈರಲ್​- ನಟಿ ಹೇಳಿದ್ದೇನು?
 

click me!