ಅಮ್ಮನ ವಿರುದ್ಧವೇ ಹೋಗಿದ್ದೇಕೆ ಪ್ರಭಾಸ್; ಅತಿರೇಕಕ್ಕೆ ಹೋಗುವುದು ನನಗಿಷ್ಟ ಅಂದ್ಬಿಟ್ರು ಯಾಕೋ!

By Shriram Bhat  |  First Published Mar 16, 2024, 12:31 PM IST

ನಾನು ಚಿಕ್ಕ ಹುಡುಗನಾಗಿ ಇರುವಾಗಿನಿಂದಲೂ ಅತಿರೇಕಕ್ಕೆ ಹೋಗುವುದು ನನಗೆ ಇಷ್ಟ. ನಾನು ತುಂಬಾ ಲೇಜಿ ಪರ್ಸನ್ ಆಗಿದ್ದರೂ ಏನಾದ್ರೂ ಮಾಡಿದರೆ ನಾನು ಯಾವತ್ತೂ ಅದನ್ನು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋಗಲು ಇಷ್ಟಪಡುತ್ತೇನೆ.


ತೆಲುಗು ಮೂಲದ ಪ್ಯಾನ್ ಇಂಡಿಯಾ ಸ್ಟಾರ್ ನಟ 'ಡಾರ್ಲಿಂಗ್ ಪ್ರಭಾಸ್' ತಮ್ಮ ತಾಯಿ ಬಗ್ಗೆ ಮಾತನಾಡಿದ್ದಾರೆ. 'ನನ್ನ ತಾಯಿಗೆ ನಾನು ಸಿನಿಮಾ ನಟ ಆಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆಕೆಯ ಪ್ರಕಾರ ನಾನು ಕೊಟ್ಟಷ್ಟು ಹಣದಲ್ಲಿ ಚೆನ್ನಾಗಿ ತಿಂದುಂಡು, ಹಾಯಾಗಿ ಮನೆಯಲ್ಲಿ ಇದ್ದು ನೆಮ್ಮದಿಯ ಜೀವನ ನಡೆಸಿದರೆ ಸಾಕು. ಸಿನಿಮಾ, ನಟನೆ ಅಂಥವೆಲ್ಲ ನನ್ನ ತಾಯಿ ಪ್ರಕಾರ ಟಾರ್ಚರ್. ಆದರೆ ನನಗೆ ಯಾವತ್ತೂ ಆರಾಮವಾಗಿದ್ದು, ಹಾಯಾಗಿ ಕಾಲ ಕಳೆಯುವುದು ಸಾಧ್ಯವೇ ಇಲ್ಲ. ಏಕೆಂದರೆ ನಾನು ಯಾವತ್ತೂ ಎಕ್ಸ್‌ಟ್ರೀಮ್‌ಗೆ ಹೋಗಲು ಇಷ್ಟಪಡುತ್ತೇನೆ. 

ನನ್ನ ಅಪ್ಪ ಪ್ರೊಡ್ಯೂಸರ್, ಹಣಕ್ಕೆ ನಮ್ಮ ಮನೆಯಲ್ಲಿ ಯಾವುದೇ ಕೊರತೆ ಇಲ್ಲ. ನಿರ್ಮಾಪಕರ ಮಗನಾಗಿರುವುದರಿಮದ ಮನೆಯಲ್ಲಿ ನನಗೆ ಸಾಕಷ್ಟು ಹಣ ಸಿಗುತ್ತದೆ. ಅದನ್ನು ಬಳಸಿಕೊಂಡು ಮನೆಯಲ್ಲಿ ನೆಮ್ಮದಿಯಿಂದ ಊಟ-ನಿದ್ದೆ ಮಾಡಿಕೊಂಡಿದ್ದರೆ ಸಾಕು. ಆ ಸಿನಿಮಾ ಉದ್ಯಮ, ನಟನೆ ಅವುಗಳ ಸಹವಾಸವೆಲ್ಲಾ ಯಾಕೆ ಎಂಬುದು ನಮ್ಮಮ್ಮನ ಆಸೆ. ಆದರೆ ನನಗೆ ನಟನಾ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಹೋಗುವ ಆಸೆ. ಹೌಸ್‌ವೈಫ್ ಆಗಿರುವ ನನ್ನ ಅಮ್ಮನಿಗೆ ನಾನು ಅವಳ ಕಣ್ಮುಂದೆ ಸದಾ ಇರಬೇಕು ಎಂ ಭಾವನೆ ತುಂಬಾ ಬಲವಾಗಿದೆ. ಆದರೆ, ಅದು ನನ್ನಿಂದ ಸಾಧ್ಯವಿಲ್ಲ.

Tap to resize

Latest Videos

ಬೇಬಿ ಶ್ಯಾಮಿಲಿಗೆ 'ಕರ್ಮ' ಅನುಭವಿಸಲೇಬೇಕು, ಮಾಡಿದ್ದುಣ್ಣೋ ಮಾರಾಯ ಅಂತಿರೋದ್ಯಾಕೆ?

ನಾನು ಚಿಕ್ಕ ಹುಡುಗನಾಗಿ ಇರುವಾಗಿನಿಂದಲೂ ಅತಿರೇಕಕ್ಕೆ ಹೋಗುವುದು ನನಗೆ ಇಷ್ಟ. ನಾನು ತುಂಬಾ ಲೇಜಿ ಪರ್ಸನ್ ಆಗಿದ್ದರೂ ಏನಾದ್ರೂ ಮಾಡಿದರೆ ನಾನು ಯಾವತ್ತೂ ಅದನ್ನು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋಗಲು ಇಷ್ಟಪಡುತ್ತೇನೆ. ಸಿನಿಮಾ ವಿಷಯದಲ್ಲೂ ಅಷ್ಟೇ, ನನಗೆ ಸದಾ ಉತ್ತುಂಗದಲ್ಲಿ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅತಿರೇಕದಲ್ಲಿ ಇರುವುದು ನನಗೆ ತುಂಬಾ ಇಷ್ಟ. ಹಾಯಾಗಿರುವುದು ಎಂದರೆ ನನಗೆ ಅಲರ್ಜಿ' ಎಂದಿದ್ದಾರೆ ಡಾರ್ಲಿಂಗ್ ಖ್ಯಾತಿಯ ಪ್ಯಾನ್ ಇಂಡಿಯಾ ನಟ ಪ್ರಭಾಸ್. 

ಕೆಜಿಎಫ್‌ ನಿರ್ದೇಶಕರಿಗೆ ಗನ್ ಬಗ್ಗೆ ಶಾಕಿಂಗ್ ಪ್ರಶ್ನೆ ಕೇಳಿದ ರಾಜಮೌಳಿ; ಏನಂದ್ರು ಪ್ರಶಾಂತ್ ನೀಲ್?

ಒಟ್ಟಿನಲ್ಲಿ, ಅದೆಷ್ಟೋ ಜನರು ಸ್ವಲ್ಪ ದುಡ್ಡು ದುಡಿದು ಹಾಯಾಗಿ ಬದುಕಲು ಇಷ್ಟಪಟ್ಟರೆ ನಟ ಪ್ರಭಾಸ್ ಈ ಕೆಟಗರಿಗೆ ಸೇರಿದವರಲ್ಲ. ಅವರಿಗೆ ಹಣದ ಕೊರತೆ ಎನ್ನುವುದು ಇಲ್ಲವೇ ಇಲ್ಲ. ಅಪ್ಪ ಕೋಟ್ಯಾಧೀಶ್ವರರು. ಆದರೆ, ಪ್ರಭಾಸ್ ಅವರಿಗೆ ಸದಾ ಏನಾದರೂ ಒಂದನ್ನು ವಿಭಿನ್ನವಾಗಿ ಮಾಡುವ ಬಯಕೆ. ಅದಕ್ಕೆ ಪ್ರಭಾಸ್ ಅಪ್ಪ ಬೆಂಬಲವಾಗಿ ನಿಂತರೆ ಅಮ್ಮ ಮಾತ್ರ ಆರಾಮವಾಗಿರು ಎನ್ನುತ್ತಾರೆ. ಮಗ ನಟನಾಗುವುದು ಅವರಿಗೆ ಸುತಾರಾಂ ಇಷ್ಟವಿಲ್ಲವಂತೆ. 

ಕತ್ರಿನಾ ಕೈಫ್ ಬಗ್ಗೆ ವಿಜಯ್ ಸೇತುಪತಿ ಅದ್ಯಾಕೋ ಹಾಗೆ ಹೇಳ್ಬಿಟ್ರು; ಯಡವಟ್ಟಾಗಿದ್ದು ಎಲ್ಲಿ ?

click me!