Radhe Shyam: ಪ್ರಭಾಸ್-ಪೂಜಾ ಹೆಗ್ಡೆ ಕಾಂಬಿನೇಷನ್‌ನ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಧ್ವನಿ!

By Suvarna News  |  First Published Feb 24, 2022, 10:34 PM IST

'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರವು ಈಗಾಗಲೇ ಹಲವು ಕಾರಣಗಳಿಂದ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರಕ್ಕೆ ಬಾಲಿವುಡ್‌ನ ಸೂಪರ್ ಸ್ಟಾರ್ ಜತೆಯಾಗಿದ್ದಾರೆ.


'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' (Radhe Shyam) ಚಿತ್ರವು ಈಗಾಗಲೇ ಹಲವು ಕಾರಣಗಳಿಂದ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಪೋಸ್ಟರ್, ಟೀಸರ್ ಮೊದಲಾದವುಗಳು ಈಗಾಗಲೇ ಕುತೂಹಲ ಹೆಚ್ಚಿಸಿದ್ದು, ಹಾಡುಗಳು ಕೂಡ ಅಭಿಮಾನಿಗಳ ಮನಗೆದ್ದಿದೆ. ಸದ್ಯ 'ರಾಧೆ ಶ್ಯಾಮ್' ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಚಿತ್ರಕ್ಕೆ ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಜತೆಯಾಗಿದ್ದಾರೆ.
 
'ಪ್ರಾಜೆಕ್ಟ್ ಕೆ' (Project K) ಎಂಬ ಇನ್ನೂ ಹೆಸರಿಡದ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ (Deepika Padukone) ಹಾಗೂ ಪ್ರಭಾಸ್ ಜತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ತಿಳಿದಿದ್ದು, ಬಿಗ್​ಬಿ ಹಾಗೂ ಪ್ರಭಾಸ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ 'ರಾಧೆ ಶ್ಯಾಮ್' ಚಿತ್ರದಲ್ಲಿ ಅಮಿತಾಭ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಅಮಿತಾಭ್​ ಬಚ್ಚನ್​ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆದರೂ ಸಿನಿಮಾ ಪೂರ್ತಿ ಇರುತ್ತಾರೆ. ಅಮಿತಾಭ್ ಚಿತ್ರತಂಡಕ್ಕೆ ಜತೆಯಾಗಿರುವುದು ತಮ್ಮ ಧ್ವನಿಯ ಮೂಲಕ. ಹೌದು! 'ರಾಧೆ ಶ್ಯಾಮ್' ಚಿತ್ರವನ್ನು ಅಮಿತಾಭ್ ನಿರೂಪಿಸಲಿದ್ದಾರೆ. ಈ ಕುರಿತು ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಬಿಗ್​​ಬಿ ಧ್ವನಿ ನೀಡಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದೆ.

Prabhas-Amitabh Bachchan: 'ಪ್ರಾಜೆಕ್ಟ್​​ ಕೆ' ಶೂಟಿಂಗ್ ಬಳಿಕ ಪರಸ್ಪರ ಹೊಗಳಿಕೊಂಡ ಪ್ರಭಾಸ್-ಅಮಿತಾಭ್

Tap to resize

Latest Videos

'ರಾಧೆ ಶ್ಯಾಮ್' ಚಿತ್ರವು ಬಿಗ್ ಬಜೆಟ್​​ನಲ್ಲಿ ತಯಾರಾಗಿದ್ದು, ಮಾರ್ಚ್​ 11ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಇಡೀ ಚಿತ್ರದ ಪ್ರೇಮಕತೆಯನ್ನು ಬಿಗ್​​ಬಿ ನಿಭಾಯಿಸಿದ್ದಾರೆ. ಅಮಿತಾಭ್​ ಬಚ್ಚನ್​ ಅವರು 'ರಾಧೆ ಶ್ಯಾಮ್​' ಸಿನಿಮಾಗೆ ಧ್ವನಿ ನೀಡಿರುವುದಕ್ಕೆ ಚಿತ್ರತಂಡ ಅವರಿಗೆ ಧನ್ಯವಾದ ತಿಳಿಸಿದ್ದು, 'ನಿಮ್ಮ ವಾಯ್ಸ್​ ನಮ್ಮ ಚಿತ್ರಕ್ಕೆ', ಧನ್ಯವಾದ ಎಂದು ಬರೆದುಕೊಂಡು ಅಮಿತಾಭ್​ ಪೋಟೋ ಇರುವ ಚಿತ್ರವನ್ನು ಯುವಿ ಕ್ರಿಯೇಷನ್ಸ್​ ಟ್ವೀಟ್ಟರ್‌ನಲ್ಲಿ (Twitter) ಪೋಸ್ಟ್ ಮಾಡಿದೆ. ಈ ಚಿತ್ರವು 1970ರ ಕಾಲಘಟ್ಟದಲ್ಲಿ ನಡೆಯುವ ಕತೆಯಾಗಿದ್ದು, ಯುರೋಪ್ ಭೂಮಿಕೆಯಲ್ಲಿ ಚಿತ್ರ ಮೂಡಿಬರಲಿದೆ. ಇಟಲಿ, ಜಾರ್ಜಿಯಾ ಮತ್ತು ಹೈದರಾಬಾದ್​ನಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ.



'ರಾಧೆ ಶ್ಯಾಮ್' ಚಿತ್ರದ ಬಿಡುಗಡೆಯ ಡಿಜಿಟಲ್‌ ಹಕ್ಕುಗಳು (Digital Rights) 250 ಕೋಟಿ ರೂ ಗೆ ಮಾರಾಟವಾಗಿದೆ. ದಕ್ಷಿಣ ಭಾರತದ ಭಾಷೆಗಳಾದ- ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಚಿತ್ರವು ಜೀ-5 (Zee5) ವೇದಿಕೆಯಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾಗಲಿದೆ. 'ರಾಧೆ ಶ್ಯಾಮ್' ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ (Radha Krishna Kumar) ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಪೂಜಾ ಹೆಗ್ಡೆ ಪ್ರೇರಣಾ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಪ್ರಭಾಸ್ ವಿಕ್ರಮಾದಿತ್ಯ ಎಂಬ ಹಸ್ತಸಾಮುದ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Puneeth James Teaser: 'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತೆ' ಎಂದ ಡಾರ್ಲಿಂಗ್ ಪ್ರಭಾಸ್!

ಈ ಹಿಂದೆ 'ರಾಧೆ ಶ್ಯಾಮ್' ಟ್ರೇಲರ್ ಬಿಡುಗಡೆಯಾಗಿದ್ದು, ಹಸ್ತ ಸಾಮುದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮಕತೆ ಇದು. ಆದರೆ, ಟ್ರೇಲರ್‌ನಲ್ಲಿ ಬಿಟ್ಟಿರುವ ಡೈಲಾಗ್‌ಗಳು ಅಭೂತ ಪೂರ್ವ ಪ್ರೇಮಕತೆಯೊಂದನ್ನು ತೆರೆದಿಡಲಿದೆ ಎನ್ನಬಹುದು. 'ನಿನ್ನ ಪ್ರೀತಿ ನನಗೆ ಒಂದು ವರ, ಅದನ್ನ ಪಡೆಯಕ್ಕೆ ಯುದ್ಧಾನೇ ಮಾಡಬೇಕು', 'ನೀನು ರೋಮಿಯೋ ಅಲ್ಲದೆ ಇರಬಹುದು. ಆದ್ರೆ, ನಾನು ಜೂಲಿಯೇಟ್. ನನ್ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತಿಯಾ' ಎನ್ನುವಂತಹ ಡೈಲಾಗ್‌ಗಳು ಪ್ರೇಮ ಯುದ್ಧದ ಕತೆ ಹೇಳುವಂತಿದೆ. ಇನ್ನು ಹಿರಿಯ ನಟ ಕೃಷ್ಣಂರಾಜು, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. 
 

Thank you Shahenshah for the voiceover of . pic.twitter.com/pxpuF6hfMn

— UV Creations (@UV_Creations)
click me!