ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಜೊತೆ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಲವ್ ಸ್ಟೋರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರೂ ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ಇಬ್ಬರ ಹುಟ್ಟುಹಬ್ಬ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಬ್ಬರೂ ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಯಾವುದೇ ಕಾರ್ಯಕ್ರಮ, ಈವೆಂಟ್ ಅಥವ ಹಬ್ಬಗಳಲ್ಲಿ ಹೃತಿಕ್ ಜೊತೆಯೇ ಇರುತ್ತಾರೆ ಸಬಾ. ಇಬ್ಬರೂ ಸದ್ಯದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಈ ನಡುವೆ ಹೃತಿಕ್ ಗರ್ಲ್‌ಫ್ರೆಂಡ್ ಜೊತೆ ಹೊಸ ಅಪಾಟ್ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಮೂಲಗಳ ಪ್ರಕಾರ ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಇಬ್ಬರೂ ಒಟ್ಟಿಗೆ ಇರಲು ಬಯಸಿದ್ದು ಹೊಸ ಮನೆಗೆ ಹೋಗುತ್ತಿದ್ದಾರಂತೆ. ಮನ್ನತ್ ಎನ್ನುವ ಅಪಾರ್ಟ್ಮೆಂಟ್‌ಗೆ ಇಬ್ಬರೂ ಶಿಫ್ಟ್ ಆಗುತ್ತಿದ್ದಾರೆ. ಈಗಾಗಲೇ ಹೊಸ ಮನೆಯ ನವೀಕರಣ ಕೆಲಸ ಪ್ರಾರಂಭವಾಗಿದ್ದು ಸದ್ಯದಲ್ಲೇ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. 3 ಫ್ಲೋರ್ ಇರುವ ಅಪಾರ್ಟ್ಮೆಂಟ್‌ಗೆ ಅದಾಗಿದ್ದು ಬರೋಬ್ಬರಿ 100 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರಂತೆ ಹೃತಿಕ್. ಹೊಸ ಅಪಾರ್ಟ್‌ಮೆಂಟ್ ಸಮುದ್ರದ ಅದ್ಭುತ ನೋಟವನ್ನು ಹೊಂದಿದ್ದು 15 ಮತ್ತು 16 ನೇ ಫ್ಲೋರ್ ಡ್ಯುಪ್ಲೆಕ್ಸ್ ಹಾಗೂ ಮತ್ತೊಂದು ಫ್ಲೋರ್ ಇದೆಯಂತೆ. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ ಎಂದರೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಅದ್ದೂರಿಯಾಗಿ ಪ್ರೇಯಸಿ ಜನ್ಮದಿನ ಆಚರಿಸಿದ ಹೃತಿಕ್; ಗೆಳೆಯನಿಗೆ ಪ್ರೀತಿಯ ಸಾಲು ಬರೆದ ಸಬಾ
ಸಬಾ ಬಗ್ಗೆ ಹೇಳುವುದಾದರೇ ಗಾಯಕಿ, ಸಂಗೀತಗಾರ್ತಿಯಾಗಿ ಖ್ಯಾತಿ ಗಳಿಸಿದ್ದಾರೆ. ಗಾಯನದ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ವೆಬ್ ಸರಣಿಯಲ್ಲಿ ಮಿಂಚಿದ್ದಾರೆ. ಕೊನೆಯದಾಗಿ ಸಬಾ ರಾಕೆಟ್ ಬಾಯ್ಸ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಹೃತಿಕ್ ರೋಷನ್ ಬಗ್ಗೆ ಹೇಳುವುದಾದರೆ ಕೊನೆಯದಾಗಿ ವಿಕ್ರಮ್ ವೇದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಸೈಪ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದು 2017ರಲ್ಲಿ ರಿಲೀಸ್ ಆಗಿದ್ದ ತಮಿಳಿನ ಸೂಪರ್ ಹಿಟ್ ವಿಕ್ರಮ್ ವೇದಾ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಅಲಿ - ರಿಚಾ ಮದುವೆ ರಿಸೆಪ್ಷನ್: ಗರ್ಲ್‌ಫ್ರೆಂಡ್ ಜೊತೆ ಪೋಸ್ ನೀಡಿದ ಹೃತಿಕ್ ರೋಷನ್
ಹೃತಿಕ್ ಸದ್ಯ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇನ್ನು ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸದ್ಯ ಸಂಕಷ್ಟದಲ್ಲಿದೆ. ಯಾವ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಸ್ಟಾರ್ ಕಲಾವಿದರ ಸಿನಿಮಾಗಳು, ಬಿಗ್ ಬಜೆಟ್ ಸಿನಿಮಾಗಳು ಸಹ ನೆಲಕಚ್ಚುತ್ತಿವೆ. ಹೃತಿಕ್ ನಟನೆಯ ವಿಕ್ರಮ್ ವೇದಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ದೊಡ್ಡ ಮಟ್ಟದ ಹಿಟ್ ಕಾಣುವಲ್ಲಿ ವಿಫಲವಾಗಿದೆ.