
ಬಾಲಿವುಡ್ ಸ್ಟಾರ್ ಜೋಡಿ ಕಾಜೋಲ್ ಮತ್ತು ಅಜಯ್ ದೇವಗನ್ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರೂ ತಮ್ಮದೇ ಆದ ಸಿನಿಮಾ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಜಯ್ ದೇವಗನ್ ಸದ್ಯ ದೃಶ್ಯ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಕಾಜೋಲ್ ಸದ್ಯ ಸಲಾಮ್ ವೆಂಕಿ ಪ್ರಮೋಷನ್ ನಲ್ಲಿದ್ದಾರೆ. ಇತ್ತೀಚಿಗಷ್ಟೆ ಸಲಾಂ ವೆಂಕಿ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಸ್ಟಾರ್ ಜೋಡಿಯ ಮಗಳು ನಿಸಾ ದೇವಗನ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ನಿಸಾ ಇನ್ನೂ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ಸ್ಟಾರ್ ಕಿಡ್ ಅಂದ್ಮೇಲೆ ಫ್ಯಾನ್ಸ್, ಫಾಲೋವರ್ಸ್ ಏನ್ ಕಮ್ಮಿ ಇರಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ನಿಸಾ ಇತ್ತೀಚೆಗೆ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದರು. ನಿಸಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಸಾ ಶೇರ್ ಮಾಡಿರುವ ಫೋಟೋಗಳಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಕಾಣಿಸುತ್ತಿದೆ. ಹಾಗಾಗಿ ನೆಟ್ಟಿಗರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ನಿಸಾ ಗುರುತೇ ಸಿಗದಷ್ಟು ಮಟ್ಟಕ್ಕೆ ಬದಲಾಗಿದ್ದಾರೆ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಟಿ, ನಿಸಾ ತಾಯಿ ಕಾಜೋಲ್ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕಾಜೋಲ್ ಮಗಳ ಬಗ್ಗೆ ಮಾತನಾಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ವದಂತಿ ತಳ್ಳಿ ಹಾಕಿದ ನಟಿ ಟ್ರೋಲ್ ಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 'ನಿಸಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವಳಿಗೆ ಸೌಂದರ್ಯ ಮತ್ತು ಆರೋಗ್ಯದ ಬಗ್ಗೆ ತುಂಬಾ ತಿಳಿದಿದೆ. ಅವರು ವಾರಕ್ಕೆ ಮೂರು ಬಾರಿ ಫೇಸ್ ಮಾಸ್ಕ್ ಅನ್ನು ಹಾಕುತ್ತಾರೆ ಮತ್ತು ಹಾಗೆ ಮಾಡು ಎಂದು ನನಗೂ ಸಲಹೆ ನೀಡುತ್ತಾಳೆ. ತನ್ನ ತಂದೆಯಂತೆಯೇ ನಿಸಾ ಕೂಡ ಫಿಟ್ನೆಸ್ ಫ್ರೀಕ್' ಎಂದು ಹೇಳಿದರು.
Salaam Venky Trailer; 'ಲಾಲ್ ಸಿಂಗ್ ಚಡ್ಡಾ' ಸೋಲಿನ ಬಳಿಕ ಫ್ಯಾನ್ಸ್ ಮುಂದೆ ಆಮೀರ್, ವಾವ್ ಎಂದ ನೆಟ್ಟಿಗರು
ಇನ್ನು ಫಿಟ್ನೆಸ್ ಬಗ್ಗೆ ಹೇಳಿದ ಕಾಜೋಲ್, ನಿಸಾ ಆರೋಗ್ಯಕರವಾದ ಡಯಟ್ ಫಾಲೋ ಮಾಡುತ್ತಾರೆ. ಖಾಲಿ ಹೊಟ್ಟೆಯಲ್ಲಿ 2-3 ಗ್ಲಾಸ್ ಬಿಸಿ ನೀರನ್ನು ಕುಡಿಯುವ ಮೂಲಕ ತಮ್ಮ ಬೆಳಿಗ್ಗೆ ಪ್ರಾರಂಭಿಸುತ್ತಾಳೆ. ನಂತರ ಅವಳು ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆಗಳು, ತಾಜಾ ಹಣ್ಣುಗಳು ಮತ್ತು ಓಟ್ಸ್ ಮೀಲ್ ಅನ್ನು ತಿನ್ನುತ್ತಾಳೆ' ಎಂದರು.
ಹಿಟ್ ಸಿನಿಮಾಗಳಿಗಷ್ಟೇ ಅಲ್ಲ ವಿವಾದಗಳಿಗೂ ಫೇಮಸ್ ಬಾಲಿವುಡ್‌ನ ನಟಿ ಕಾಜೋಲ್
ಕಾಜೋಲ್-ಅಜಯ್ ದಂಪತಿ ಮಗಳು ನಿಸಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾಳೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಈ ಬಗ್ಗೆ ಮಾತನಾಡಿದ ಕಾಜೋಲ್ ಅವಳಿಗೆ ಒತ್ತಾಯ ಏನು ಇಲ್ಲ, ಅವಳ ಇಷ್ಟ ಎಂದು ಹೇಳಿದರು. ಮತ್ತೊಂದು ಸಂದರ್ಶನದಲ್ಲಿ ಕಾಜೇಲ್, ನಿಸಾ ಸ್ವತಃ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಎಂದು ನಾನು ಭಾವಿಸುತ್ತೇನೆ. ನಾನು ಅವಳನ್ನು ಸಿನಿಮಾದಿಂದ ದೂರ ತಳ್ಳುತ್ತಿಲ್ಲ. ನಾನು ಅವಳನ್ನು ಆ ಕಡೆಗೆ ತಳ್ಳುತ್ತಿಲ್ಲ, ಅದು ಅವಳಿಗೆ ಬಿಟ್ಟಿದ್ದು. ಆಕೆಗೆ 18 ವರ್ಷ, ಅವಳು ದೊಡ್ಡವಳಾಗಿದ್ದಾಳೆ' ಎಂದು ಕಾಜೋಲ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.