
ನಟಿ ತಮನ್ನಾ ಭಾಟಿಯಾ ಸದ್ಯ ಲಸ್ಟ್ ಸ್ಟೋರಿ-2 ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಲಸ್ಟ್ ಸ್ಟೋರಿಗಾಗಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಈ ಸೀರಿಸ್‌ಗಾಗಿ ತಮನ್ನಾ ತನ್ನ 18 ವರ್ಷದ ನೋ ಕಿಸ್ಸಿಂಗ್ ಸೀನ್ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಡ್ ರೂಮ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ತಮನ್ನಾ ಅವರನ್ನು ಈ ಪರಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿಜಯ್ ವರ್ಮಾ ಜೊತೆಗಿನ ಸಂಬಂಧ ಅಧಿಕೃತ ಗೊಳಿಸಿರುವ ತಮನ್ನಾ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ವಿಜಯ್ ವರ್ಮಾ ಕೂಡ ಮೊದಲ ಬಾರಿಗೆ ತಮನ್ನಾ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಿಜಯ್, ತಮನ್ನಾ ಅವರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ ಎಂದು ವಿವರಿಸಿದ್ದಾರೆ. 'ಮೊದಲ ಬಾರಿಗೆ ನಾನು ತಮನ್ನಾ ಅವರನ್ನು ಸುಜಯ್ ಘೋಷ್ ಅವರ ಆಫೀಸ್‌ನಲ್ಲಿ ಭೇಟಿಯಾದೆ. ಸ್ಕ್ರಿಪ್ಟ್ ಓದುವ ವಿಚಾರವಾಗಿ ಭೇಟಿ ಆದೆವು. ನಾವು ಅಲ್ಲಿ ನಮ್ಮ ಪಯಣದ ಬಗ್ಗೆ ಮಾತನಾಡಿದೆವು. ಕಳೆದ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಕಾಂಟ್ರಾಕ್ಟ್‌ನಲ್ಲಿ ನೋ ಕಿಸ್ಸಿಂಗ್ ಸೀನ್ ಪಾಲಿಸ್ ಇತ್ತು. ನಾನು ಈ ಹಿಂದೆ ತೆರೆ ಮೇಲೆ ಏನು ಮಾಡಿಲ್ಲ' ಎಂದು ಹೇಳಿದರು. ಬಳಿಕ, 'ತೆರೆಮೇಲೆ ಕಿಸ್ ಮಾಡುತ್ತಿರುವುದು ಮೊದಲು ನಿಮಗೆ' ಎಂದು ಹೇಳಿದರು. ಆಗ ನಾನು ಧನ್ಯವಾದ ಎಂದುಹೇಳಿದೆ' ಅಂತ ನಟ ವಿಜಯ್ ವರ್ಮಾ ಬಹಿರಂಗ ಪಡಿಸಿದ್ದಾರೆ.
ತಮನ್ನಾ ತೊಡೆಮೇಲೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ: ರೊಮ್ಯಾಂಟಿಕ್ ಫೋಟೋ ವೈರಲ್
ಹಾಟ್ ಬಗ್ಗೆ ತಮನ್ನಾ ರಿಯಾಕ್ಷನ್
ಲಸ್ಟ್ ಸ್ಟೋರಿ 2ನಲ್ಲಿ ಹಾಟ್ ಸೀನ್ ಮಾಡುವಾಗ ಹೇಗನಿಸಿತು ಎಂದು ತಮನ್ನಾ ಈ ಮೊದಲು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು. ವಿಜಯ್ ವರ್ಮಾ ತುಂಬಾ ಸೇಫ್ ಫೀಲ್ ನೀಡಿದ್ರು ಎಂದು ಹೇಳಿದ್ದರು ತಮನ್ನಾ ಹೇಳಿದ್ದರು. 'ನಟರ ಜೊತೆ ನಟಿಸುವಾಗ ನನಗೆ ಯಾವಾಗಲೂ ತುಂಬಾ ಸೇಫ್ ಅಂತ ಅನಿಸುತ್ತಿರಲಿಲ್ಲ. ಕಲಾವಿದರಿಗೆ ನಿಜವಾಗಿಯೂ ಇದು ಮುಖ್ಯ. ನೀವು ನಿಜಕ್ಕೂ ಅಂತ ಸುರಕ್ಷತತೆಯನ್ನು ಅನುಭವಿಸಬೇಕು. ಇದು ವಿಶೇಷವಾಗಿ ಇಂತಹ ಚಿತ್ರದಲ್ಲಿ ನೀವು ತೆಗೆದುಕೊಳ್ಳುವ ಜಂಪ್ ಆಗಿದೆ. ನಾನು ಏನನ್ನೂ ಹೇಳಲು, ಏನನ್ನೂ ಮಾಡಲು, ಒಂದು ನಿರ್ದಿಷ್ಟ ರೀತಿಯಲ್ಲಿ ಭಾವೋದ್ರಿಕ್ತನಾಗಲು ಹೆದರಿಲ್ಲ ನನಗೆ ತುಂಬಾ ಸೇಫ್ ಫೀಲ್ ಮಾಡಿದ್ರು. ತುಂಬಾ ಸುಲಭ ಎನ್ನುವ ಭಾವನೆ ಮುಡಿಸಿದ್ರು. ಅದು ತುಂಬಾ ಇಷ್ಟವಾಯಿತು' ಎಂದು ವಿಜಯ್ ವರ್ಮಾ ಬಗ್ಗೆ ಹೇಳಿದ್ದರು.
ವಿಜಯ್ ವರ್ಮಾ ಜೊತೆ ಬೆಡ್‌ರೂಮ್ ದೃಶ್ಯ ಮಾಡುವಾಗ ಸೇಫ್ ಫೀಲ್ ಆಗ್ತಿತ್ತು: ನಟಿ ತಮನ್ನಾ
ವಿಜಯ್ ನನ್ನ ಪ್ರೀತಿಯ ಖಜಾನೆ
ಲಸ್ಟ್ ಸ್ಟೋರೀಸ್ 2 ಸೆಟ್‌ಗಳಲ್ಲಿ ವಿಜಯ್ ವರ್ಮಾ ಜೊತೆ ಪ್ರೀತಿ ಶುರುವಾಯಿತಾ ಎಂದು ಕೇಳಿದ ಪ್ರಶ್ನೆಗೆ ತಮನ್ನಾ, 'ಹೌದು' ಎಂದು ಹೇಳಿದರು. ಬಳಿಕ ವಿಜಯ್ ವರ್ಮರನ್ನು ವಿವರಿಸಿದರು. ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ ಎಂದು ಹೇಳಿದರು. 'ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು' ಎಂದು ಹೇಳುವ ಮೂಲಕ ಮೊದಲ ಬಾರಿಗೆ ಪ್ರೀತಿ ವಿಚಾರ ಬಹಿರಂಗ ಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.