ಮಲೈಕಾ ಅರೋರಾಗೆ ಕೊರೋನಾ ಬಂದಾಗ ಏನಾಯ್ತು ಗೊತ್ತಾ?

By Suvarna NewsFirst Published Sep 25, 2020, 4:47 PM IST
Highlights

ಬಾಲಿವುಡ್ ನಟಿ, ಐಟಂ ಸಾಂಗುಗಳ ಸರದಾರಿಣಿ ಮಲೈಕಾ ಅರೋರಾ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಅವರ ಅನುಭವ ಅವರದೇ ಮಾತುಗಳಲ್ಲಿ.

ನನ್ನ ಪರಿಸ್ಥಿತಿಯೇನೂ ಗಂಭೀರ ಆಗಿರಲಿಲ್ಲ, ಹಾಗಾಗಿ ಮನೆಯಲ್ಲೇ ಇರಬಯಸಿದ್ದೆ. ಸಣ್ಣ ಜ್ವರ, ಕೆಮ್ಮು, ಬಳಲಿಕೆ ಇತ್ತು. ಇದನ್ಬು ನಿರೀಕ್ಷಿಸಿದ್ದೆ. ಯಾಕಂದ್ರೆ ನಾನು ಶೂಟಿಂಗ್‌ನಲ್ಲಿ ತೊಡಗಿಸಿಕೊಂಡ ವೇಳೆ ಜತೆಗಿದ್ದ ಇಬ್ಬರಿಗೆ ಪಾಸಿಟಿವ್ ಆಗಿತ್ತು.

ಆರಂಭದ ದಿನಗಳು ಶಾಕಿಂಗ್ ಆಗಿದ್ದವು. ಸ್ಟ್ರಾಂಗ್ ಮೆಡಿಸಿನ್ ಕೊಟ್ಟಿದ್ದರು. ಹೀಗಾಗಿ ಅದರ ಪವರ್‌ನಡಿ ದಿನವಿಡೀ ಕೆಲವೊಮ್ಮೆ ಮಲಗಿರುತ್ತಿದ್ದುದು ಇತ್ತು. ರೆಸ್ಟ್ ತಗೊಳೋಕೆ ಹಾಗು ಸಾಕಷ್ಟು ದ್ರವಾಹಾರ ತಗೊಳೋಕೆ ಡಾಕ್ಟರ್ ಹೇಳಿದ್ದರು. ನಾನು ಜೀವನಪೂರ್ತಿ ವೇಗನ್ ಆಗಿದ್ದವಳು. ಆದರೆ ಈಗ ಬಾಡಿ ಸ್ಟ್ರೆಂತ್ ಮರಳಿ ಗಳಿಸಿಕೊಳ್ಳೋಕೆ ಹಾಲು ಮೊದಲಾದ ಡೇರಿ ಸೇವಿಸತೊಡಗಿದೆ. ಆಹಾರ ನಾನಿದ್ದ ಕೋಣೆಯ ಹೊರಗೆ ಇಡಲಾಗುತ್ತಿತ್ತು.ಮೊದಲು ಯಾವಾಗ್ಲೂ ಯೋಗ ಮಾಡ್ತಿದ್ದೆ. ಈಗ ದೇಹದಲ್ಲಿ ಶಕ್ತಿ ಇರಲಿಲ್ಲವಾದ್ರಿಂದ ಮಾಡಬೇಡಿ ಎಂದಿದ್ದರು ಡಾಕ್ಟರ್. ಉಳಿದಂತೆ ಕಷಾಯ ಕುಡಿಯುವುದು, ಗಂಟಲು ಗಾರ್ಗ್ಲಿಂಗ್ ಮಾಡುವುದು ಎಲ್ಲಾ ಮಾಡುತ್ತಿದ್ದೆ. ಹೇಳೋಕೆ ಎಲ್ಲರತ್ರಾನೂ ಒಂದೊಂದು ಮದ್ದು ಇದ್ದೇ ಇರುತ್ತಿತ್ತು.

ಅರ್ಜುನ್‌ ಕಪೂರ್‌ರಿಂದ ಅಥಿಯಾ ಶೆಟ್ಟಿಯನ್ನು ದೂರ ಮಾಡಿದ್ದು ಮಲೈಕಾನಾ?

ಕ್ವಾರಂಟೇನ್ ಆಗಿದ್ರೂ ಮಾಡೋಕೆ ಸಾಕಷ್ಟು ಕೆಲಸ ಇದ್ದೇ ಇರುತ್ತದೆ. ನಮ್ಮ ಕೋಣೆ ನಾವೇ ಸ್ಯಾನಿಟೈಸ್ ಮಾಡಿಕೊಳ್ಳಬೇಕಲ್ಲ. ಇನ್ಯಾರೂ ಬರುವುದು ಸರಿಯಲ್ಲ. ಹಾಗೇ ಕೊಳಕಿನಲ್ಲಿ ಇರುವುದು ಕೂಡ ಸರಿಯಲ್ಲ. ಈ ವೈರಸ್ ನಿಮ್ಮನ್ನು ಪೂರ್ತಿಯಾಗಿ ಮಣಿಸಬಲ್ಲದು, ದೈಹಿಕವಾಗಿ ಹಾಗೂ ಮಾನಸಿಕವಾಗಿ- ಎಂಬುದು ಈ ಅವಧಿಯಲ್ಲಿ ರುಜುವಾತು ಆಯಿತು. ಯೋಗ ವ್ಯಾಯಾಮ ಡ್ಯಾನ್ಸ್ ಅಂತ ಮಾಡ್ತಾ ಸದಾ ಆಕ್ಟಿವ್ ಆಗಿ ಇರ್ತಿದ್ದ ನಾನು ಸದಾ ಜಡವಾಗಿ ಹಾಸಿಗೆ ಮೇಲಿರೋದನ್ನ ಊಹಿಸಲಾದರೂ ಸಾಧ್ಯವೇ? ಕೆಲವೊಮ್ಮೆ ಹಾಸಿಗೆಯಿಂದ ಏಳೋದನ್ನೂ ಮರೆತುಬಿಡುತ್ತಿದ್ದೆ. ಹೀಗಾಗೇ ಕೊರೋನಾ ಪೇಷೆಂಟ್‌ಗಳಲ್ಲಿ ಚೈತನ್ಯ ತುಂಬುವ ವಾರಿಯರ್‌ಗಳು ದೇವತೆಗಳ ಹಾಗೆ. ಈ ದಿನಗಳಲ್ಲಿ ನಾನು ಪಡೆದ ಪ್ರೀತಿ ಹಾಗೂ ಎಲ್ಲರ ಸಪೋರ್ಟ್ ಮರೆಯಲಾಗದ್ದು. ಅಪಾರ್ಟ್‌ಮೆಂಟ್‌ನ ಹಲವು ಮಂದಿ ನಂಗೆ ಫುಡ್, ಬೊಕೆ ಕಳಿಸಿದರು. ಈ ದಿನಗಳಲ್ಲಿ ನಾನು ತುಂಬಾ ಓದಿದೆ. ಎಷ್ಟೋ ವರ್ಷಗಳಿಂದ ಓದುವುದು ಬಿಟ್ಟೇಬಿಟ್ಟಿದ್ದೆ. ಈಗ ಅದು ಸಾಧ್ಯವಾಯಿತು. ವಿಡಿಯೋ  ಕಾಲ್‌ಗಳು ತುಂಬಾ ಹೆಲ್ಪ್ ಆದವು.

ಡ್ರಗ್ಸ್ ಪಾರ್ಟಿ: ದೀಪಿಕಾ, ಮಲೈಕಾ ಸೇರಿ ಹಲವರ ವಿರುದ್ಧ NCBಗೆ ದೂರು

ಪ್ರತಿಯೊಬ್ಬನೂ ತಾನೀಗ ಡಾಕ್ಟರ್ ಅಂತ್ಲೇ ಅಂದುಕೊಳ್ತಾನೆ. ಗೂಗಲ್‌ನಲ್ಲಿ ಬೇಕಾದ ಇನ್‌ಫಾರ್ಮೇಶನ್ ಸಿಗುತ್ತೆ ಅಂತ. ಹುಡುಕಿದರೆ ಎಷ್ಟೋ ಪರಿಹಾರ, ಔಷಧ ಸಿಗ್ತವೆ. ಹಾಗೇ ರೋಗ ಇಲ್ಲದವರಲ್ಲೂ ಅನಾರೋಗ್ಯ ಸೃಷ್ಟಿಸುವ ಸಾಧ್ಯತೆ ಅದಕ್ಕಿದೆ. ಹೀಗಾಗಿ ಎಷ್ಟು ಬೇಕೋ ಅಷ್ಟೇ, ಅಂದ್ರೆ ಬೇಸಿಕ್ ತಿಳಿದುಕೊಂಡು ಸುಮ್ಮನಿರುವುದು ಒಳ್ಳೆಯದು. ಅತಿ ಮಾಹಿತಿ ಅಪಾಯಕಾರಿ.

ಎಲ್ಲರಿಗೂ ನಾನು ಈ ಕುರಿತು ಎಚ್ಚರಿಕೆಯಿಂದ ಇರೋಕೆ ಹೇಳ್ತೀನಿ. ಯಾಕಂದ್ರೆ ಈ ಜ್ವರ ಯಾರಿಗೂ ಬರಬಹುದು. ಹಾಗೇ ಇದು ಒಬ್ಬೊಬ್ಬರಿಗೆ ಒಂದೊಂಥರ ಇರಬಹುದು. ವೈರಸ್ ಹದಿನಾಲ್ಕು ದಿನ ದೇಹದಲ್ಲಿದ್ರೆ ತಾನಾಗಿಯೇ ದುರ್ಬಲವಾಗುತ್ತೆ. ನಂತರ ಮೂರು ತಿಂಗಳು ಬಾಡಿಯಲ್ಲಿ ಇಮ್ಯುನಿಟಿ ಇರುತ್ತೆ. ನಂತರ ಮತ್ತೆ ಬಂದರೂ ಬರಬಹುದು. ವೈದ್ಯಲೋಕ ಇದರ ಬಗ್ಗೆ ಇನ್ನೂ ತಿಳಿಯೋಕೆ ಸಾಕಷ್ಟಿದೆ. ನನಗೆ ಉಸಿರಾಟದ ಸಮಸ್ಯೆ ಇತ್ಯಾದಿಗಳು ಬಾಧಿಸಲಿಲ್ಲ. ನಾನು ಪ್ರತಿದಿನ ಮಾಡ್ತಿದ್ದ ಯೋಗ ಪ್ರಾಣಾಯಾಮ ಇತ್ಯಾದಿಗಳು ಖಂಡಿತವಾಗಿಯೂ ಹೆಲ್ಪ್ ಆಗಿರುತ್ತೆ.

ಮಹೇಶ್ ಬಾಬು ಪತ್ನಿ ನಮ್ರತಾ‌ಗೆ 'ಮೀನ್‌' ಎಂದ ಮಲೈಕಾ! 

ನಾವೆಲ್ಲರೂ ಎದ್ದು ಒಂದಲ್ಲ ಒಂದು ದಿನ ಕೆಲಸಕ್ಕೆ ಹೋಗ್ಲೇಬೇಕಲ್ಲ. ಆಗ ನಮ್ಮ ಎಚ್ಚರ ನಾವು ತಗೊಳ್ಲೇಬೇಕು. ಯಾಕಂದ್ರೆ ಕೊರೋನಾ ಕೇಸುಗಳು ಲೆಕ್ಕ ತಪ್ಪಿ ಸಿಕ್ಕಾಪಟ್ಟೆ ಹೆಚ್ತಾ ಇವೆ. ಎಲ್ಲರಿಗು ಒಂದ್ಸಲ ಈ ವೈರಸ್ ಬಂದು ಹೋಗ್ಲೇಬೇಕು ಅನ್ಸುತ್ತೆ. ಇದರಿಂದ ಬಿಡುಗಡೆ ಸದ್ಯಕ್ಕಂತೂ ಇಲ್ಲ.

click me!