ಮಗಳಿಗಾಗಿ ಧೂಮಪಾನ ತ್ಯಜಿಸಿದ್ದ ಎಸ್‌ಪಿಬಿ/ ಬರ್ಮನ್ ಅವರಂಥವರ ಸ್ನೇಹದಿಂದ ಅಂಟಿಕೊಂಡಿದ್ದ ಚಟ/ ಸಿನಿಮಾದಲ್ಲಿ ಹಾಡುವಾಗಲೂ ಧೂಮಪಾನ ಸಾಮಾನ್ಯವಾಗಿತ್ತು/ ಮಗಳು ಪಲ್ಲವಿ ಕಾರಣಕ್ಕೆ ಎಸ್‌ಬಿಬಿ ಚಟ ತ್ಯಜಿಸಿದ್ದರು
ಚೆನ್ನೈ(ಸೆ. 25) ಗಾನ ಗಂಧರ್ವ ಸಂಗೀತ ಲೋಕವನ್ನು ಅಗಲಿದ್ದಾರೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಜೀವನದ ಈ ಘಟನೆಯನ್ನು ನಿಮ್ಮ ಮುಂದೆ ಇಡಲೇಬೇಕು.
ಸಾಮಾನ್ಯವಾಗಿ ಗಾಯಕರು ಎಂದರೆ ಅವರಿಗೆ ಅವರದ್ದೇ ಆದ ನಿಯಮಗಳಿರುತ್ತವೆ. ಸುಮಧುರ ಕಂಠ ಕಾಪಾಡಿಕೊಳ್ಳಲು ನಿಯಮಗಳ ಪಾಲನೆ ಮಾಡುತ್ತಿರುತ್ತಾರೆ. ಆದರೆ ಎಸ್‌ಪಿಬಿ ಇದೆಲ್ಲದಕ್ಕೆ ಹೊರತಾಗಿದ್ದರು.
SPB ಲವ್ ಸ್ಟೋರಿ; ಕಿಡ್ನಾಪ್ ಮಾಡಿ ಸಾವಿತ್ರಿ ವಿವಾಹವಾಗಿದ್ದರು!
ದಿಗ್ಗಜ ಆರ್‌ಡಿ ಬರ್ಮನ್ ಅಂಥವರ ಸ್ನೇಹ ಎಸ್ ಪಿಬಿ ಅವರನ್ನು ಧೂಮಪಾನದ ಕಡೆ ಕರೆದುಕೊಂಡು ಹೋಗಿತ್ತು. ಒಂದು ಹಂತದಲ್ಲಿ ಧೂಮಪಾನ ಅವರನ್ನು ಆವರಿಸಿಕೊಂಡಿತ್ತು. ಸಿನಿಮಾಗಳಲ್ಲಿ ಹಾಡುವಾಗಲೂ ಧೂಮಪಾನ ಸಾಮಾನ್ಯ ಅಭ್ಯಾಸವಾಗಿಬಿಟ್ಟಿತ್ತು.
ಆದರೆ ಮಗಳು ಪಲ್ಲವಿಗಾಗಿ ಎಸ್‌ಪಿಬಿ ಧೂಮಪಾನವನ್ನು ಸಂಪೂರ್ಣ ನಿಲ್ಲಿಸುತ್ತಾರೆ. ಮಗಳಿಗೋಸ್ಕರ ವ್ಯಸನದಿಂದ ಹೊರಬರುತ್ತಾರೆ.
ಪುತ್ರ ಚರಣ್ ಮತ್ತು ಎಸ್‌ಪಿಬಿ ಸ್ನೇಹಿತರೆಂತೆ ಇದ್ದರು. ಒಬ್ಬರು ಜೋಕ್ ಮಾಡಿದರೆ ಇನ್ನೊಬ್ಬರು ಅದಕ್ಕೆ ಕೌಂಟರ್ ಕೊಡುತ್ತಿದ್ದರು. ನಲವತ್ತು ಸಾವಿರ ಗೀತೆಗಳನ್ನು ನೀಡಿದ ಗಾಯಕ ಇನ್ನು ನೆನಪು ಮಾತ್ರ