
ನಟಿ ಸಿಲ್ಕ್ ಸ್ಮಿತಾ ಯಾರಿಗೆ ಗೊತ್ತಿಲ್ಲ? 80-90ರ ದಶಕದಲ್ಲಿ ತಮ್ಮ ಮಾದಕ ಮೈಮಾಟ ಪ್ರದರ್ಶನ, ಸೆಕ್ಸಿ ಲುಕ್ ಹಾಗೂ ಕ್ಯಾಬರೆ ಡಾನ್ಸ್ ಮೂಲಕ ಹದಿಹರೆಯದವರ ನಿದ್ದೆಗೆಡಿಸಿದ್ದ ನಟಿ. ಯಾವುದೇ ಸ್ಟಾರ್ ಅಥವಾ ಹೊಸಬರ ಚಿತ್ರವಿರಲಿ, ಊಟಕ್ಕೆ ಉಪ್ಪಿನಕಾಯಿ ಇರುತ್ತೆ ಎಂಬಂತೆ ಸಿಲ್ಕ್ ಸ್ಮಿತಾ ಎಲ್ಲಾ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, 1996ರಲ್ಲಿ ಸಿಲ್ಕ್ ಸ್ಮಿತಾ (Silk smitha)ಖ್ಯಾತಿಯ ನಟಿ ವಿಜಯಲಕ್ಷ್ಮೀ ಅಪಾರ್ಟ್‌ಮೆಂಟ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ನಟಿ ಬಹಳಷ್ಟು ಆಲ್ಕೋಹಾಲ್ ಸೇವಿಸಿದ್ದಾಳೆ, ಅದರಂದಲೇ ಸಾವು ಸಂಭವಿಸಿರಬಹುದು ಎಂದಿದ್ದಾರಂತೆ. ಪೊಲೀಸರ ಪ್ರಕಾರ, ಆಕೆಯೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ, ಸಿಲ್ಕ್ ಸ್ಮಿತಾರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಆಕೆಗೆ ಹೊಟ್ಟೆತುಂಬಾ ಕುಡಿಸಿ ಏನು ಮಾಡಬೇಕಿತ್ತೋ ಅದನ್ನು ಮಾಡಿ ಬಳಿಕ ಆಕೆಯಿಂದ ಡೆತ್ ನೋಟ್ ಬರೆಸಿ, ಆತ್ಮಹತ್ಯೆಗೆ ಪ್ರಚೋದನೆ ಕೊಡಲಾಗಿದೆ. ಇದು ಪ್ಲಾನ್ಡ್ ಕೊಲೆ ಎಂದಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬಂದ 'ಕೃಷ್ಣ ಸುಂದರಿ' ಮಾಲಾಶ್ರೀ ಮೀಟ್ ಆಗಿದ್ರು; ಮೂಡುತ್ತಿದ್ಯಾ 'ಹೊಸ ಬೆಳಕು'..!?
ಹಾಗಿದ್ದರೆ, ನಟಿ ಸಿಲ್ಕ್ ಸ್ಮಿತಾರದ್ದು ಕೊಲೆಯೇ ಅಥವಾ ಆತ್ಮಹತ್ಯೆಯೇ? ಯಾರೂ ಹೇಳಲು ಅಸಾಧ್ಯ. ಖುದ್ದು ನಟಿ ಸಿಲ್ಕ್ ಸ್ಮಿತಾ ಅವರೇ ಮತ್ತೆ ವಾಪಸ್ ಭೂಮಿಗೆ ಬಂದು ಹೇಳಬೇಕಷ್ಟೇ. ಎಕೆಂದರೆ, ಆತ್ಮಹತ್ಯೆ ಎಂದೇ ಕೇಸ್ ಕ್ಲೋಸ್ ಆದಮೇಲೆ ಇನ್ನೇನು ಮಾಡಲು ಸಾಧ್ಯ ಎನ್ನುತ್ತಿದ್ದಾರೆ ಅವರ ಸಂಬಂಧಿಕರು. ಅದೇನೇ ಇದ್ದರೂ ನಟಿ ಜೀವಿಸಿದ್ದಷ್ಟು ಕಾಲ ಜನರನ್ನು ಸೂಜಿಗಲ್ಲಿನಂತೆ ಸೆಳೆದು ತಮ್ಮ ಲುಕ್, ಮೈಮಾಟ ಹಾಗೂ ಡಾನ್ಸ್ ಮೂಲಕ ಭರಪೂರ ಮನರಂಜನೆಯನ್ನಂತೂ ನೀಡಿದ್ದಾರೆ.
ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?
ನಟಿ ಹಾಗು ಡಾನ್ಸರ್ ಸಿಲ್ಕ್ ಸ್ಮಿತಾ ಬಗ್ಗೆ ಒಂದು ಮಾತಿದೆ. ವೇದಿಕೆಗಳಲ್ಲಿ ಆಕೆ ಒಮ್ಮೆ ಕುಣಿದು ಹೋದರೂ ಮತ್ತೆ ಮತ್ತೆ ನೋಡಬೇಕು ಎಂದು ಜನರು ಆಯೋಜಕರಿಗೆ ದುಂಬಾಲು ಬೀಳುತ್ತಿದ್ದರಂತೆ. ಸಿನಿಮಾದಲ್ಲೂ ಅಷ್ಟೇ, ಸಿಲ್ಕ್‌ಗಾಗಿ ಒಂದು ಕ್ಯಾಬರೆ ಡಾನ್ಸ್ ಮೀಸಲಿಡುತ್ತಿದ್ದರಂತೆ. ಆಕೆಯ ಡಾನ್ಸ್‌ಗೆ ಜನರನ್ನು ಥಿಯೇಟರ್‌ಗೆ ಕರೆಸುವ ಶಕ್ತಿಯಿದೆ ಎಂದೇ ಅಂದಿನ ನಿರ್ಮಾಪಕರು ಮತ್ತು ನಿರ್ದೇಶಕರು ಮಾತನಾಡಿಕೊಳ್ಳುತಿದ್ದರು ಎಂಬುದು ಗುಟ್ಟಾಗಿಯೇನೀ ಇರಲಿಲ್ಲ. ಒಟ್ಟಿನಲ್ಲಿ, ಸಿಲ್ಕ್ ಸ್ಮಿತಾ ಖ್ಯಾತಿಯ ನಟಿ ವಿಜಯಲಕ್ಷ್ಮೀ ನಮ್ಮಿಂದ ಬಹುಬೇಗ ಮರೆಯಾದರು.
ಅಪರಾಧ ಎಸಗಿದವರಿಗೆ ತಕ್ಕ ಶಾಸ್ತಿ ಆಯ್ತು; ಖುಷಿಯಿಂದ 'ಧನ್ಯವಾದ' ತಿಳಿಸಿದ ರಶ್ಮಿಕಾ ಮಂದಣ್ಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.