ಇಂಥ ನಟಿ ಸರಿತಾ ಈಗೆಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದುಬೈನಲ್ಲಿದ್ದಾರೆ. ಬಾಲ್ಯದಲ್ಲೇ ವೆಂಕಟಸುಬ್ಬಯ್ಯ ಎನ್ನವವರೊಂದಿಗೆ ವಿವಾಹವಾಗಿದ್ದ ಸರಿತಾ ಅವರಿಂದ ದೂರವಾದ ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಮುಖೇಶ್ ಎಂಬ ವ್ಯಕ್ತಿಯ ಜತೆ ಮದುವೆ ಮಾಡಿಕೊಂಡರಾದರೂ ಅವರಬ್ಬರ ಸಂಸಾರ ಬಹುಕಾಲ ಬಾಳಲಿಲ್ಲ.
ಹಲವು ದಶಕಗಳ ಹಿಂದಿನ ಬಹುಭಾಷಾ ನಟಿ ಸರಿತಾ ಈಗೆಲ್ಲಿದ್ದಾರೆ ಎಂಬ ಕುತೂಹಲ ಖಂಡಿತವಾಗಿಯೂ ಹಲವರಲ್ಲಿ ಇದೆ. ನಟಿ ಸರಿತಾ ಎಂದರೆ ಥಟ್ಟನೆ ನೆನಪಾಗುವುದು ಸಹಜಾಭಿನಯ ಹಾಗೂ ಭಾವಪೂರ್ಣತೆಯ ಪ್ರತೀಕ ಎನ್ನಬಹುದು. ಕೃಷ್ಣಸುಂದರಿ ಎಂದು ಕರೆಸಿಕೊಂಡಿದ್ದ ನಟಿ ಸರಿತಾ ಮೈ ಬಣ್ಣ ಕಪ್ಪು ಎಂಬುದು ಎಲ್ಲರಿಗೂ ಗೊತ್ತು. ಆದರೂ ಸರಿತಾ ತಮ್ಮ ಅಮೋಘ ಅಭಿನಯ ಹಾಗೂ ಕಥೆಯ ಆಯ್ಕೆಯ ಪರಿಪಕ್ವತೆ ಮೂಲಕ ಅಂದಿನ ಕಾಲದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದರು.
ಸರಿತಾ (Saritha)ತಮಿಳು ನಿರ್ದೇಶಕ ಬಾಲಚಂದರ್ (Balachandar)ಅವರ ಹಲವಾರು ಸಿನಿಮಾಗಳಲ್ಲಿ ಮಿಂಚಿದವರು. ಸಾಂಸಾರಿಕ, ಭಾವನಾತ್ಮ ಸನ್ನಿವೇಶಗಳಲ್ಲಿ ಅವರ ಮಹಾನ್ ಅಭಿನಯ ಕಂಡು ಆಯಾ ಚಿತ್ರದ ನಿರ್ದೇಶಕರುಗಳೇ ಅಚ್ಚರಿಗೊಳ್ಳುತ್ತಿದ್ದರಂತೆ. ಅಷ್ಟರಮಟ್ಟಿಗೆ ದೃಶ್ಯಗಳಲ್ಲಿ ತಲ್ಲೀನತೆ ಅನುಭವಿಸುವ ತಾಕತ್ತು ನಟಿ ಸರಿತಾರಿಗೆ ಇತ್ತು ಎನ್ನಲಾಗಿದೆ. ಈ ಮಾತುಗಳಿಗೆ ಸಂಶಯ ಪಡಬೇಕಾದುದೇ ಇಲ್ಲ, ಏಕೆಂದರೆ ಅವರು ಅಭಿನಯಿಸಿರುವ ಚಿತ್ರಗಳೇ ಅದಕ್ಕೆ ಸಾಕ್ಷಿ ಒದಗಿಸುತ್ತವೆ.
ಕನ್ನಡದಲ್ಲಿ ಡಾ ರಾಜ್‌ಕುಮಾರ್, ವಿಷ್ಣವರ್ಧನ್ (Dr Vishnuvardhan), ಅನಂತ್ ನಾಗ್ (Ananthnag)ಮುಂತಾದ ನಟರುಗಳೊಂದಿಗೆ ಸರಿತಾ ನಟಿಸಿದ್ದಾರೆ. ಡಾ ರಾಜ್ (Dr Rajkumar)ಜತೆ ಸರಿತಾ ನಟಿಸಿರುವ 'ಹೊಸಬೆಳಕು' ಚಿತ್ರದ 'ತೆರೆದಿದೆ ಮನೆ ಓ ಬಾ ಅತಿಥಿ' ಎಂಬ ಹಾಡು ಅಂದು, ಇಂದು ಹಾಗೂ ಎಂದಿಂದಿಗೂ ಯಾರೂ ಮರೆಯಲು ಅಸಾಧ್ಯ ಎಂಬಂತಿದೆ. ಎಸ್ ಜಾನಕಿ ಹಾಗು ವಾಣಿ ಜಯರಾಂ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸರಿತಾರ ಅಭಿನಯ ಮೇಳೈಸಿ ಆ ಹಾಡನ್ನು ಅಮೋಘ ಸ್ಥಾನಕ್ಕೆ ಏರಿಸಿಬಿಟ್ಟಿದೆ.
ಮಾಲಾಶ್ರೀ ಜತೆ ಬಡಿದಾಡಿದ್ದ ನಟ ಅರ್ಧ ಸೆಂಚುರಿಗೂ ಮೊದಲೇ ಯಾಕೆ ವಿಧಿವಶರಾಗ್ಬಿಟ್ರು!
ಇಂಥ ನಟಿ ಸರಿತಾ ಈಗೆಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದುಬೈನಲ್ಲಿದ್ದಾರೆ. ಬಾಲ್ಯದಲ್ಲೇ ವೆಂಕಟಸುಬ್ಬಯ್ಯ ಎನ್ನವವರೊಂದಿಗೆ ವಿವಾಹವಾಗಿದ್ದ ಸರಿತಾ ಅವರಿಂದ ದೂರವಾದ ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಮುಖೇಶ್ ಎಂಬ ವ್ಯಕ್ತಿಯ ಜತೆ ಮದುವೆ ಮಾಡಿಕೊಂಡರಾದರೂ ಅವರಬ್ಬರ ಸಂಸಾರ ಬಹುಕಾಲ ಬಾಳಲಿಲ್ಲ. ಮಕ್ಕಳು ಚಿಕ್ಕವರಿದ್ದಾಗಲೇ ಗಂಡ ಮುಖೇಶ್ ಸರಿತಾಗೆ ಡಿವೋರ್ಸ್ ಕೊಟ್ಟರು. ಬಳಿಕ, ನಟಿ ಸರಿತಾ ದುಬೈಗೆ (Dubai)ಶಿಫ್ಟ್ ಆಗಿ ಸದ್ಯ ಅಲ್ಲಿಯೇ ನೆಲೆಸಿದ್ದಾರೆ ಎನ್ನಲಾಗಿದೆ.
ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?
ಅಂದಹಾಗೆ, ಬಹಳ ಕಾಲದ ಬಳಿಕ ನಟಿ ಸರಿತಾ 2023ರಲ್ಲಿ ಬೆಂಗಳೂರಿಗೆ ಭೇಟಿ ಕೊಟ್ಟಿದ್ದರು. ನಟಿ ಮಾಲಾಶ್ರೀ (Malashri)ಹಾಗೂ ಸರಿತಾ ಭೇಟಿಯಾಗಿ ಮಾಧ್ಯಮಗಳ ಜತೆ ಒಟ್ಟಿಗೇ ಮಾತನಾಡಿದ್ದಾರೆ. ಈಗ ಮತ್ತೆ ಸರಿತಾ ನಟನೆಗೆ ಮರಳುತ್ತಿದ್ದಾರೆ ಎನ್ನಲಾಗಿದೆ.