ಗರ್ಲ್‌ಫ್ರೆಂಡ್ ಘಟನೆ ನಿಜ ಜೀವನದಲ್ಲೂ ನಡೆದಿತ್ತೆಂದ ರಶ್ಮಿಕಾ, ರಕ್ಷಿತ್‌ಗ್ಯಾಕೆ ಕನೆಕ್ಟ್ ಮಾಡ್ತಿದ್ದಾರೆ ಫ್ಯಾನ್ಸ್?

Published : Nov 13, 2025, 04:58 PM IST
Rashmika

ಸಾರಾಂಶ

ದಿ ಗರ್ಲ್ ಫ್ರೆಂಡ್ ಸಕ್ಸಸ್ ಮೀಟ್ ವಿಡಿಯೋ ಎಲ್ಲ ಕಡೆ ವೈರಲ್ ಆಗ್ತಿದೆ. ವಿಜಯ್ ದೇವರಕೊಂಡ ರಶ್ಮಿಕಾ ಕೈಗೆ ಮುತ್ತಿಟ್ಟಿದ್ದು ಮಾತ್ರವಲ್ಲ, ರಶ್ಮಿಕಾ ಎಮೋಷನಲ್ ಆಗಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಹೇಳಿಕೆಯೊಂದು ಕನ್ನಡಿಗರ ಕಣ್ಣು ಕೆಂಪು ಮಾಡಿದೆ.

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ವಿಷ್ಯ ಮುಗಿದು ಹೋಗಿದ್ದು. ಆದ್ರೂ ಅದ್ರ ಬಗ್ಗೆ ಆಗಾಗ ಚರ್ಚೆ ಆಗ್ತಿರುತ್ತೆ. ಕನ್ನಡಿಗರು, ರಶ್ಮಿಕಾ, ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಮಾಡ್ತಾ ಬಂದಿದ್ದಾರೆ. ಅದ್ರ ಬಗ್ಗೆ ರಕ್ಷಿತ್ ಶೆಟ್ಟಿಯಾಗ್ಲಿ, ರಶ್ಮಿಕಾ ಮಂದಣ್ಣ ಆಗ್ಲಿ ಇವರೆಗೆ ಮಾತನಾಡಿಲ್ಲ. ಆದ್ರೀಗ ರಶ್ಮಿಕಾ, ದಿ ಗರ್ಲ್ ಫ್ರೆಂಡ್ ಸಕ್ಸಸ್ ಮೀಟ್ ನಲ್ಲಿ ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಮಾತನ್ನು ರಕ್ಷಿತ್ ಶೆಟ್ಟಿ ಜೊತೆ ಲಿಂಕ್ ಮಾಡಲಾಗಿದೆ.

ಬ್ರೇಕ್ ಅಪ್ ನೋವು ತೋಡಿಕೊಂಡ್ರಾ ರಶ್ಮಿಕಾ ಮಂದಣ್ಣ ? : 

ದಿ ಗರ್ಲ್ ಫ್ರೆಂಡ್ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿದ್ರು. ಇದೇ ವೇಳೆ ತಮ್ಮ ಹಳೆ ದಿನಗಳನ್ನು ಸಿನಿಮಾಕ್ಕೆ ಲಿಂಕ್ ಮಾಡಿದ್ದಾರೆ. ಸ್ಕ್ರಿಫ್ಟ್ ನೋಡ್ದಾಗ ಈ ಕಥೆ ಎಲ್ಲೋ ಕೇಳಿದ್ದೇನೆ ಅಂತ ಭಾಸವಾಗಿತ್ತು. ನನ್ನ ಇಡೀ ಜೀವನದಲ್ಲಿ ನಡೆದ ಘಟನೆಯನ್ನೇ ಈ ಸಿನಿಮಾ ಹೊಂದಿದೆ. ಎಲ್ಲದೂ ನಂದೇ ತಪ್ಪು ಅಂತ ನಾನು ಆಗ ಅಂದ್ಕೊಂಡಿದ್ದೆ. ಆಗ ನನಗೆ ಯಾರೂ ಸಲಹೆ ನೀಡೋರು ಇರಲಿಲ್ಲ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಕೈ ಚುಂಬಿಸಿ ನನಗೆ 'ಗರ್ಲ್‌ಫ್ರೆಂಡ್' ರೋಹಿಣಿ ಇಷ್ಟ ಅಂದ 'ರಶಿ' ಬಾಯ್‌ಫ್ರೆಂಡ್ ವಿಜಯ್ ದೇವರಕೊಂಡ!

ಅಷ್ಟಕ್ಕೂ ರಕ್ಷಿತ್ ಶೆಟ್ಟಿ ವಿಲನ್ ಮಾಡಿದ್ರಾ ರಶ್ಮಿಕಾ? : 

ದಿ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಹೀರೋ, ತನ್ನ ಪ್ರೇಮಿಯನ್ನು ಅತಿಯಾಗಿ ಪ್ರೀತಿ ಮಾಡ್ತಾನೆ. ಅವಳಿಗೆ ತನ್ನ ಪ್ರೀತಿಯನ್ನು ಬಲವಂತವಾಗಿ ಹೇರ್ತಾನೆ. ಮನಸ್ಸಿನಲ್ಲಿ ಪ್ರೀತಿ ಇಲ್ದೆ ಹೋದ್ರೂ ಬಲವಂತಕ್ಕೆ ಹೀರೋಯಿನ್ ನಗ್ತಾಳೆ. ಆ ರಿಲೇಶನ್ಶಿಪ್ ನಿಂದ ಹೊರಗೆ ಬರಲು ಸಾಕಷ್ಟು ಕಷ್ಟಪಡ್ತಾಳೆ. ಕಣ್ಣೀರು, ನೋವು, ಕಿರುಚಾಟ ಎಲ್ಲವನ್ನೂ ಸಿನಿಮಾದಲ್ಲಿ ಕಾಣಬಹುದು. ಸಿನಿಮಾ ನನ್ನ ಜೀವನಕ್ಕೆ ಹೊಂದಿಕೆ ಆಗುತ್ತೆ ಎಂದ ರಶ್ಮಿಕಾ ಮಾತು ಯಾಕೋ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಗೆ ಸರಿ ಬರ್ತಿಲ್ಲ. ರಕ್ಷಿತ್ ಶೆಟ್ಟಿ ದೇವದಾಸ್. ನಿಮ್ಮನ್ನು ಪ್ರೀತಿ ಮಾಡಿದ್ರು. ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮೋಸ ಮಾಡಿದ್ದಾರೆ. ಈಗ ಕಟ್ಟು ಕಥೆ ಹೇಳ್ತಿದ್ದಾರೆ ಅಂತ ರಕ್ಷಿತ್ ಫ್ಯಾನ್ಸ್ ಆರೋಪ ಮಾಡ್ತಿದ್ದಾರೆ. ರಕ್ಷಿತ್ ಶೆಟ್ಟಿ ಏನು ಅನ್ನೋದು ನಮಗೆ ಗೊತ್ತು. ಸಿನಿಮಾ ಸೂಪರ್ ಆಗಿದೆ. ಆದ್ರೆ ಅದನ್ನು ತಮ್ಮ ನಿಜ ಜೀವನಕ್ಕೆ ಹೋಲಿಕೆ ಮಾಡಿಕೊಂಡಿದ್ದು ಮಾತ್ರ ಕೆಟ್ಟದಾಗಿದೆ. ರಕ್ಷಿತ್ ಶೆಟ್ಟಿ ಬಗ್ಗೆ ಸುಳ್ಳು ಆರೋಪ ಮಾಡ್ಬೇಡಿ ಅಂತ ಫ್ಯಾನ್ಸ್ ಕೆಂಡಕಾರಿದ್ದಾರೆ.

Puttakkana Makkalu: ರಕ್ತ ಸಿಕ್ತ ಕತ್ತಿ ಹಿಡಿದು ಅಬ್ಬರಿಸಿದ ಪುಟ್ಟಕ್ಕ... ನೋಡಿದವರ ಎದೆಯಲ್ಲಿ ನಡುಕ!

ರಶ್ಮಿಕಾ ಪರ ಬ್ಯಾಟ್ ಬೀಸಿದ ತೆಲುಗು ಫ್ಯಾನ್ಸ್ : 

ಇನ್ನು ಅನೇಕ ಬಳಕೆದಾರರು ರಶ್ಮಿಕಾ ಮಂದಣ್ಣ ಪರ ಮಾತನಾಡಿದ್ದಾರೆ. 20ನೇ ವಯಸ್ಸಿನಲ್ಲೇ ಮದುವೆ ನಿರ್ಧಾರಕ್ಕೆ ಬರೋದು ಕಷ್ಟ. ತಮಗಿಂತ ದೊಡ್ಡ ವ್ಯಕ್ತಿಯನ್ನು ರಶ್ಮಿಕಾ ಮದುವೆ ಆಗ್ಬೇಕಿತ್ತು. ಆಗ್ಲೇ ಮದುವೆ ಆಗಿದ್ರೆ ವೃತ್ತಿ ಜೀವನಕ್ಕೆ ಹೊಡೆತ ಬೀಳ್ತಾಯಿತ್ತು. ನೀವು ಸರಿಯಾಗಿ ಮಾಡಿದ್ದೀರಿ. ನಿಮ್ಮ ನಿರ್ಧಾರ ಸರಿಯಾಗಿದೆ ಅಂತ ರಶ್ಮಿಕಾ ಮಂದಣ್ಣ ಪರ ಅನೇಕರು ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಎಲ್ಲೂ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಿಲ್ಲ. ನನ್ನ ಜೀವನದ ಕಥೆ ಎಂದಿದ್ದಾರೆ. ಅವರ ಕಾಲೇಜ್ ಲೈಫ್ ನಲ್ಲಿ ನಡೆದ ಕಥೆಯಾದ್ರೂ ಆಗಿರಬಹುದು. ರಕ್ಷಿತ್ ಶೆಟ್ಟಿ ಜೊತೆ ಯಾಕೆ ಥಳಕು ಹಾಕ್ತೀರಿ, ರಶ್ಮಿಕಾ ಮಂದಣ್ಣ ಎಂದೂ ರಕ್ಷಿತ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ ಅಂತ ಒಂದಿಷ್ಟು ಮಂದಿ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌