ಅಮಿತಾಭ್ ಬಚ್ಚನ್ ಕಪಾಳಕ್ಕೆ ಹೊಡೆದಿದ್ದ ನಟಿ, ಸೇಡು ತೀರಿಸಿಕೊಳ್ಳೋ ಪ್ರತಿಜ್ಞೆ ಮಾಡಿದ್ರು ಬಿಗ್‌ ಬಿ

Published : Mar 03, 2025, 11:28 AM ISTUpdated : Mar 03, 2025, 11:35 AM IST
ಅಮಿತಾಭ್ ಬಚ್ಚನ್ ಕಪಾಳಕ್ಕೆ ಹೊಡೆದಿದ್ದ ನಟಿ, ಸೇಡು ತೀರಿಸಿಕೊಳ್ಳೋ ಪ್ರತಿಜ್ಞೆ ಮಾಡಿದ್ರು ಬಿಗ್‌ ಬಿ

ಸಾರಾಂಶ

ಅಮಿತಾಭ್ ಬಚ್ಚನ್ ಕಪಾಳಕ್ಕೆ ಹೊಡೆದ ಘಟನೆ ಮತ್ತು ನಂತರದ ಸೇಡಿನ ಮಾತುಕತೆ ಕುರಿತಾದ ಮಾಹಿತಿ ಇಲ್ಲಿದೆ. 'ಕಸಮ್ ವಾದೇ' ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದ್ದು, ಅಮಿತಾಭ್ ಸೇಡು ತೀರಿಸಿಕೊಳ್ಳಲು ಕಾದಿದ್ದರು.

ಮುಂಬೈ:  ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಸಿನಿಲೋಕ ಬಿಗ್ ಬಿ ಎಂದು ಕರೆಯುವ ಮೂಲಕ ಗೌರವಿಸುತ್ತದೆ. ಇಂದಿಗೂ ಚಿತ್ರರಂಗದಲ್ಲಿ ಅದೇ ಕ್ರೇಜ್ ಉಳಿಸಿಕೊಂಡಿರುವ ನಟ ಅಮಿತಾಭ್ ಬಚ್ಚನ್, ಹಿಂದಿ ಸೇರಿದಂತೆ ಸೌಥ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅಮಿತಾಭ್ ಬಚ್ಚನ್ ನೀಡಿದ್ದಾರೆ. ಆದ್ರೆ ಸಿನಿಮಾವೊಂದರ ಚಿತ್ರೀಕರಣದ ವೇಳೆ ನಟಿಯೊಬ್ಬರು ಅಮಿತಾಭ್ ಬಚ್ಚನ್‌ ಕಪಾಳಕ್ಕೆ ಹೊಡೆದಿದ್ದರು. ಇದಾದ ನಂತರ ಅಮಿತಾಭ್ ಬಚ್ಚನ್,  ಇದಕ್ಕೆ ಸೇಡು ತೀರಿಸಿಕೊಳ್ಳೋ ಪ್ರತಿಜ್ಞೆ ಮಾಡಿದ್ರು ಎಂದು ಆ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಕಾಲದ ಎಲ್ಲಾ ನಟಿಯರೊಂದಿಗೂ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಕೊನೆಯ ಬಾರಿ ಅಮಿತಾಬ್ ಬಚ್ಚನ್, ಕಲ್ಕಿ ಸಿನಿಮಾದಲ್ಲಿ ಅಶ್ವಥಾಮನ ಪಾತ್ರದಲ್ಲಿ ನಟಿಸುವ ಮೂಲಕ ವೀಕ್ಷಕರಲ್ಲಿ ಅಚ್ಚರಿಯನ್ನುಂಟು ಮಾಡಿದ್ದರು. ವಿಶೇಷ ಮೇಕಪ್ ಹಾಕಿಕೊಂಡು ಸಾಹಸ ದೃಶ್ಯಗಳಲ್ಲಿ ಅಮಿತಾಬ್ ನಟಿಸಿರೋದನ್ನು ಕಂಡು, ವಯಸ್ಸು ಕೇವಲ ಸಂಖ್ಯೆ ಎಂದು ಹೇಳಿ ಮೂಕವಿಸ್ಮಿತರಾಗಿದ್ದರು. ನಟಿ ಕಪಾಳಕ್ಕೆ ಹೊಡೆದ ಸಿನಿಮಾ  ಏಪ್ರಿಲ್ 21, 1978 ರಂದು ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗಿ 46 ವರ್ಷಗಳನ್ನು ಪೂರೈಸಿದೆ.  ರಮೇಶ್ ಬೆಹ್ಲ್  ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. 

1978ರಲ್ಲಿ ರಮೇಶ್ ಬೆಹ್ಲ ನಿರ್ದೇಶನದ 'ಕಸಮ್ ವಾದೇ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ರಾಖೀ ಗುಲ್ಜರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ  ರಣಧೀರ್ ಕಪೂರ್, ನೀತು ಕಪೂರ್ ಮತ್ತು ಅಮ್ಜದ್ ಖಾನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಮ್ಜದ್ ಖಾನ್ ವಿಲನ್ ಆಗಿ  'ಕಸಮ್ ವಾದೇ' ಸಿನಿಮಾದಲ್ಲಿ ಅಬ್ಬರಿಸಿದ್ದರು. ಇದೇ ವರ್ಷ ಅಮಿತಾಭ್ ಬಚ್ಚನ್ ಮತ್ತು ರಾಖಿ ಜೊತೆಯಾಗಿ ಮುಖದ್ದರ್ ಕಾ ಸಿಕಂದರ್ ಮತ್ತು ತ್ರಿಶೂಲ್ ಸಿನಿಮಾಗಳಲ್ಲಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಸೂಪರ್ ಹಿಟ್ ಆಗಿತ್ತು. 

ಈ ಸಿನಿಮಾಗಳನ್ನು ಸಿಂಹಳೀಯ ಭಾಷೆಯಲ್ಲಿ ಚೆಸಿನಾ ಬಸಲು (1980), ನವತ ಹಮುವೇಮು (1986) ಮತ್ತು ತಮಿಳಿನಲ್ಲಿ ಧರ್ಮಥಿನ್ ತಲೈವನ್ (1988) ಸೇರಿದಂತೆ ಹಲವು ಕಡೆ ರಿಮೇಕ್ ಆಗಿದ್ದವು.  ಇದನ್ನು ಒಂದು ಕಲ್ಟ್ ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲಾಗಿದ್ದು, ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ  ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಒಂದು ರೋಲ್ ಹೀರೋ ಮತ್ತೊಂದು ರೋಲ್‌ನಲ್ಲಿ ಅಮಿತಾಭ್ ಬಚ್ಚನ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ:  ಸೌಥ್‌ನ ರಿಮೇಕ್‌ ಆದ್ರೂ 60ಕ್ಕೆ 379 ಕೋಟಿ ಗಳಿಕೆ; ಮುಳುಗುತ್ತಿದ್ದ ನಟನಿಗೆ ಆಸರೆಯಾದ ಸೂಪರ್‌ ಹಿಟ್ ರೊಮ್ಯಾಂಟಿಕ್ ಸಿನಿಮಾ!

ಅಮಿತಾಭ್ ಕಪಾಳಕ್ಕೆ ಹೊಡಿದಿದ್ದ ನಟಿ ಯಾರು? 
ಸಮಯಕ್ಕೆ ಸರಿಯಾಗಿ ಶೂಟಿಂಗ್‌ ಸೆಟ್‌ಗೆ ಬರೋ ಕಲಾವಿದರಲ್ಲಿ ಅಮಿತಾಭ್ ಬಚ್ಚನ್ ಸಹ ಒಬ್ಬರಾಗಿದ್ದಾರೆ. ಆದರೆ  ಒಂದು ಬಾರಿ ಅಮಿತಾಭ್ ಬಚ್ಚನ್‌ ಶೂಟಿಂಗ್‌ ಸೆಟ್‌ಗೆ 10 ದಿನ ತಡವಾಗಿ ಆಗಮಿಸಿದ್ದರು. ಕಾಶ್ಮೀರದಲ್ಲಿ ಚಿತ್ರೀಕರಣ ಇರೋದರಿಂದ ಉಳಿದ ಕಲಾವಿದರೆಲ್ಲರೂ ಅಮಿತಾಭ್ ಬಚ್ಚನ್‌ಗಾಗಿ ಕಾಯುತ್ತಾ ಪ್ರವಾಸದ ರೀತಿ ಸಮಯವನ್ನು ಕಳೆಯುತ್ತಿದ್ದರು. ಅಮೆರಿಕಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರಿಂದ ಅಮಿತಾಭ್ ಬಚ್ಚನ್ ಬರೋದು ವಿಳಂಬವಾಗಿತ್ತು. 

ಸಿನಿಮಾ ಶೂಟಿಂಗ್ ಆರಂಭವಾಗುತ್ತಿದ್ದಂತೆ ನಟಿ ರಾಖಿಗೆ ಅಮಿತಾಭ್ ಬಚ್ಚನ್ ಕಪಾಳಕ್ಕೆ ಹೊಡೆಯುವಂತೆ ಹೇಳಿದ್ದರು. ಆದ್ರೆ ಆ ದೃಶ್ಯದಲ್ಲಿ ನಟಿ ಹೊಡೀತಾರೆ ಅನ್ನೋದು ಅಮಿತಾಭ್‌ ಬಚ್ಚನ್ ಅವರಿಗೆ ಗೊತ್ತಿರಲಿಲ್ಲ. ದೃಶ್ಯ ನ್ಯಾಚುರಲ್ ಆಗಿ ಕಾಣಬೇಕೆಂಬ ಉದ್ದೇಶದಿಂದ ಈ ವಿಷಯವನ್ನು ಅಮಿತಾಬ್‌ ಬಚ್ಚನ್‌ ಅವರಿಗೆ ಹೇಳಿರಲಿಲ್ಲ. ವಿದೇಶ ಪ್ರವಾಸದಿಂದ ಹಿಂದಿರುಗಿದ್ದರಿಂದ ಅಮಿತಾಬ್ ಸ್ವಲ್ಪ ಅಸ್ವಸ್ಥರಾಗಿದ್ದರು. ಈ ಶೂಟ್ ಮುಗಿದ್ಮೇಲೆ ವಿಷಯ ತಿಳಿದ ಅಮಿತಾಭ್ ಬಚ್ಚನ್, ಈ ಹೊಡೆತಕ್ಕೆ ಸೇಡು ತೀರಿಸಿಕೊಳ್ಳುತ್ತೇನೆ ಅಂದಿದ್ದರು. ಆದ್ರೆ ಅದು ಎಂದಿಗೂ ಆಗಲಿಲ್ಲ ಎಂದು ರಾಖಿ ಹೇಳಿದ್ದಾರೆ.

ಇದನ್ನೂ ಓದಿ: ಒಬ್ರು 90ರ ದಶಕದಲ್ಲಿಯೇ 1 ಕೋಟಿ ಸಂಭಾವನೆ ಪಡೆದವ್ರು; ಮತ್ತೊಬ್ರು ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಸ್ಥಾನ  ಪಡೆದ ನಟ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?