ಪ್ರಭಾಸ್ ಜೊತೆ ಭಾರೀ ಒಪ್ಪಂದ ಮಾಡಿಕೊಂಡ ಹೊಂಬಾಳೆ ಫಿಲಂಸ್; ಡಾರ್ಲಿಂಗ್ ಲಕ್ ನೋಡ್ರೀ!

By Shriram Bhat  |  First Published Nov 8, 2024, 4:18 PM IST

ಹೊಂಬಾಳೆ ಕಡೆಯಿಂದ ಸಿನಿಮಾ ನಿರ್ಮಾಣವಾಗುತ್ತಿದೆ ಎಂದರೆ ಅದು ಹೈ ಬಜೆಟ್ ಮೂವಿ ಎಂಬುದನ್ನು ಮತ್ತೆ ಹೇಳಬೇಕಿಲ್ಲ! ಅದರಲ್ಲೂ ತೆಲುಗಿನ ಪ್ಯಾನ್ ಇಂಡಿಯಾ ಸ್ಟಾರ್, ರೆಬಲ್ ಸ್ಟಾರ್ ಖ್ಯಾತಿಯ ನಟ ಡಾರ್ಲಿಂಗ್ ಪ್ರಭಾಸ್ ಅವರೇ ಹೀರೋ..


ಕನ್ನಡದ ಪ್ರತಿಷ್ಟಿತ ಸಿನಿಮಾ ಸಂಸ್ಥೆಯಾಗಿರುವ ಕೆಜಿಎಫ್ (KGF Movie) ಖ್ಯಾತಿಯ ಹೊಂಬಾಳೆ ಫಿಲಂಸ್ (Hombale Films) ಹೊಸ ಘೋಷಣೆಯೊಂದನ್ನು ಮಾಡಿದೆ. ಭಾರತೀಯ ಚಲನಚಿತ್ರ ಜಗತ್ತಿನಲ್ಲಿ ಹೊಂಬಾಳೆ ಪ್ರೊಡಕ್ಷನ್ ಹೊಸ ಹೆಜ್ಜೆ ಇಟ್ಟಿದ್ದು, ಹೊಸ ಹೇಳಿಕೆಯೊಂದಿಗೆ ಅದನ್ನು ಜಗತ್ತಿನ ಮುಂದೆ ಬಹಿರಂಗಗೊಳಿಸಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Darling Prabhas) ಜೊತೆ ಹೊಂಬಾಳೆ ಫಿಲಂಸ್, ಮೂರು ಸಿನಿಮಾ ಅನೌನ್ಸ್ ಮಾಡಿದೆ. 'ಸಲಾರ್ ಪಾರ್ಟ್ 2' ಸೇರಿದಂತೆ ಮೂರು ಸಿನಿಮಾ ಅನೌನ್ಸ್ ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. 

ಈ ಮೊದಲು ಹೊಂಬಾಳೆ ಸಂಸ್ಥೆಯು 'ಸಲಾರ್' ಸಿನಿಮಾ (Salaar) ಮಾಡಿದ್ದು, ಅದು ಸೂಪರ್ ಹಿಟ್ ಆಗಿದೆ. ಸಲಾರ್ ಚಿತ್ರವನ್ನು ಕನ್ನಡದ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರು. ಆದರೆ, ಮುಂಬರುವ ಮೂರು ಸಿನಿಮಾಗಳ ನಿರ್ದೇಶಕರಾರು ಎಂಬುದನ್ನು ವಿಜಯ್ ಕಿರಗಂದೂರ್ (Vijay Kiragandur) ಅವರು ಬಹಿರಂಗ ಪಡಿಸಿಲ್ಲ. ಆದರೆ, 'ಸಲಾರ್-2' ಸಿನಿಮಾ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದಲ್ಲೇ ಮೂಡಿ ಬರಬಹುದು ಎನ್ನಲಾಗುತ್ತಿದೆ. 

Tap to resize

Latest Videos

undefined

ಇನ್ಮುಂದೆ ನಾನು ಸಿಂಗಲ್ ಆಗಿ ಇರಲ್ಲ, ಬಟ್ಟೆ ಬಿಚ್ಚಿ ಕುಣಿಯಲ್ಲ ಎಂದ ನಟಿ ಸಮಂತಾ!

ಹೊಂಬಾಳೆ ಕಡೆಯಿಂದ ಸಿನಿಮಾ ನಿರ್ಮಾಣವಾಗುತ್ತಿದೆ ಎಂದರೆ ಅದು ಹೈ ಬಜೆಟ್ ಮೂವಿ ಎಂಬುದನ್ನು ಮತ್ತೆ ಹೇಳಬೇಕಿಲ್ಲ! ಅದರಲ್ಲೂ ತೆಲುಗಿನ ಪ್ಯಾನ್ ಇಂಡಿಯಾ ಸ್ಟಾರ್, ರೆಬಲ್ ಸ್ಟಾರ್ ಖ್ಯಾತಿಯ ನಟ ಡಾರ್ಲಿಂಗ್ ಪ್ರಭಾಸ್ ಅವರೇ ಹೀರೋ ಎಂದಮೇಲೆ ಆ ಚಿತ್ರಗಳ ಮೇಕಿಂಗ್ 'ಭಾರೀ ಬಜೆಟ್'ನಿಂದಲೇ ಆಗುವುದು ಖಚಿತ! 2026, 2027 ಹಾಗೂ 2028 ಕ್ಕೆ, ಪ್ರತಿ ವರ್ಷ ಒಂದು ಸಿನಿಮಾದಂತೆ ಮಾಡುವುದಾಗಿ ಅನೌನ್ಸ್ ಮಾಡಿದೆ ಹೊಂಬಾಳೆ ಸಂಸ್ಥೆ!

ನಟ ಪ್ರಭಾಸ್ ಅವರು ಸಲಾರ್ ಗಿಂತ ಮೊದಲು ಮೂರು ಸಿನಿಮಾಗಳು ತೋಪೆದ್ದು ಹೋಗಿ ಭಾರೀ ಚಿಂತಾಕ್ರಾಂತರಾಗಿದ್ದರು. ಆದರೆ ಕನ್ನಡಿಗ ಪ್ರಶಾಂತ್ ನೀಲ್ ಅವರು ಡಾರ್ಲಿಂಗ್ ಪ್ರಭಾಸ್ ಅವರನ್ನು ಮುಳುಗಿದ್ದ ಚಿಂತೆಯ ಸಾಗರದಿಂದ ಮೇಲೆಬ್ಬಿಸಿದ್ದಾರೆ. ಸದ್ಯ ಗೆಲುವಿನ ಹುರುಪಿನಲ್ಲಿ ಮೈ ಕೊಡವಿ ಎದ್ದಿರುವ ಪ್ರಭಾಸ್, 2026ಕ್ಕೆ ಸಲಾರ್-2 ಮೂಲಕ ಮತ್ತೆ ತೆರೆಯ ಮೇಲೆ ಬರಲಿದ್ದಾರೆ. ಆ ಬಳಿಕ 2027 ಹಾಗೂ 2028ರ ಅಪ್ಡೇಟ್ ಸಿಗುತ್ತೆ, ತಲೆ ಕೆಡಿಸಿಕೊಳ್ಳಬೇಡಿ!

ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?

click me!