
ಬಹು ನಿರೀಕ್ಷಿತ 'ದಿ ಬ್ಯಾಟ್‌ಮ್ಯಾನ್' ಚಿತ್ರೀಕರಣ ಕೆಲವು ತಿಂಗಳ ಹಿಂದೆ ಆರಂಭವಾಗಿದ್ದು, ತಂತ್ರಜ್ಞರಲ್ಲೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಕೆಲವು ದಿನಗಳ ಮಟ್ಟಿಗೆ ಚಿತ್ರೀಕರಣ ರದ್ದು ಮಾಡಲಾಗಿದೆ.
ವಾರ್ನರ್ ಬ್ರದರ್ಸ್ ವಕ್ತಾರ ಗುರುವಾರ ಈ ವಿಚಾರದ ಬಗ್ಗೆ ಸುದ್ದಿ ಗೋಷ್ಠಿ ನಡೆಸಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿ ಐಸೋಲೇಷನ್‌ನಲ್ಲಿ ಇರುವುದಾಗಿ ಮಾಹಿತಿ ನೀಡಿದ್ದರು.
ರೆಸ್ಲಿಂಗ್ ಸೂಪರ್ ಸ್ಟಾರ್, ನಟ ರಾಕ್ ಜಾನ್ಸನ್ ಕುಟುಂಬಕ್ಕೆ ಕೊರೋನಾ ಪಾಸಿಟಿವ್
ಮ್ಯಾಟ್ ರೀವ್ಸ್ ನಿರ್ದೇಶನ ಹಾಗೂ ರಾಬರ್ಟ್ ಪ್ಯಾಟಿನ್ಸನ್ ಅಭಿನಯದ ಬ್ಯಾಟ್‌ಮ್ಯಾನ್ ಸಿನಿಮಾ ಚಿತ್ರೀಕರಣ ಸುಮಾರು 6 ತಿಂಗಳ ನಂತರ ಮತ್ತೆ ಶುರುವಾಗಿತ್ತು. ಆದರೆ, ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೂ, ಕೊರೋನಾ ಸೋಂಕು ಕಾಣಿಸಿಕೊಂಡಿರುವ ಕಾರಣ ಕೆಲವು ದಿನಗಳ ಮಟ್ಟಿಗೆ ಚಿತ್ರೀಕರಣ ರದ್ದು ಮಾಡಲಾಗಿದೆ. ಇಡೀ ಯುಕೆಯಲ್ಲಿ ಇದೇ ಮೊದಲು ಬಿಗ್ ಬಜೆಟ್ ಸಿನಿಮಾ ಚಿತ್ರೀಕರಣವನ್ನು ರದ್ದು ಮಾಡಿರುವುದು.
ಕೊರೋನಾದಿಂದ 11 ದಿನದ ಅಂತರದಲ್ಲಿ ಇಬ್ಬರು ಸಹೋದರರ ಕಳೆದುಕೊಂಡ ಹಿರಿಯ ನಟ
'ದಿ ಬ್ಯಾಟ್‌ಮ್ಯಾನ್' ಚಿತ್ರದ ನಂತರ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಸೆಟ್ಟೇರಿತ್ತು. 'ಜುರಾಸಿಕ್ ವರ್ಲ್ಡ್: ಡೊಮಿನಿಯನ್' ತಂಡ ಯಾವುದೇ ಅಡಚಣೆ ಇಲ್ಲದೆ ಚಿತ್ರೀಕರಣ ಮಾಡುತ್ತಿದೆ. ಆದರೆ ಕೆಲವು ಮೂಲಗಳ ಪ್ರಕಾರ ಈ ತಂಡದಲ್ಲಿಯೂ ಆಗಸ್ಟ್‌ನಲ್ಲಿ ಒಬ್ಬ ತಂತ್ರಜ್ಞರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದರು. ಆದರೆ ಚಿತ್ರೀಕರಣ ರದ್ದು ಮಾಡಿರಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನೂ ಮಾಧ್ಯಮಕ್ಕೆ ಬಹಿರಂದ ಪಡಿಸಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.