'ವಿಚ್ಫೈಂಡರ್' ಚಿತ್ರದ ಮೂಲಕ ಪ್ರಸಿದ್ಧರಾದ ನಟಿ ಹಿಲರಿ ಹೀತ್ (74) ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.
'ವಿಚ್ಛೈಂಡರ್ ಜನರ್ಲ್' ಹಾಗೂ 'ವುಥರಿಂಗ್ ಹೈಟ್ಸ್' ಖ್ಯಾತಿಯ ನಾಯಕಿ ಹಿಲರಿ ಹೀತ್ ಕೊರೋನಾ ವೈರಸ್‌ನಿಂದ ಏಪ್ರಿಲ್ 11ರಂದು ಕೊನೆ ಉಸಿರೆಳೆದಿದ್ದಾರೆ.
ವೃತ್ತಿಯಲ್ಲಿ ಅಡಿಕ್ಷನ್ ಕೌನ್ಸಿಲರ್ ಹಾಗೂ ಸಿಬಿಟಿ ಸ್ಪೆಷಲಿಸ್ಟ್ ಆಗಿರುವ ಹಿಲರಿ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಹಿಲರಿಗೆ ಇಬ್ಬರು ಮಕ್ಕಳಿದ್ದು ಪತಿಗೆ ವರ್ಷಗಳ ಹಿಂದೆಯೇ ವಿಚ್ಛೇತದನೆ ನೀಡಿದ್ದಾರೆ.
undefined
ಮೋರ್ಟ್ ಡ್ರಕ್ಕರ್ ಅಗಲಿದ ‘ಮ್ಯಾಡ್’ನ ವಿಖ್ಯಾತ ಕಾಮಿಕ್ಸ್ - ವ್ಯಂಗ್ಯಭಾವ ಚಿತ್ರಕಾರ!
60 ವರ್ಷವಿದ್ದಾಗ ಹಿಲರಿ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಸಿಬಿಟಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ವಿಶ್ವಾದ್ಯಾಂತ ಅನೇಕ ಕ್ಲೀನಿಕ್‌ಗಳಲ್ಲಿ ಕೆಲಸ ಮಾಡಿರುವ ಹಿಲರಿ ಬಡವರಿಗೆ ಉಚಿತ ಸೇವೆ ಮಾಡಿದ್ದಾರೆ. 1988ರಲ್ಲಿ ಕೇಬಲ್‌ಏಸ್ ಪ್ರಶಸ್ತಿ ಹಾಗೂ ವರ್ಸ್ಟ್ ವಿಚ್ ಟಿವಿ ಕಾರ್ಯಕ್ರಮಕ್ಕೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕೊರೋನಾ ವೈರಸ್ ನುಂಗೇ ಬಿಡ್ತು 'Star Wars'ನಟನ ಜೀವವನ್ನ!
ಹಿಲರಿ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗಳು ಹಾಗೂ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.