ಬಾಲಿವುಡ್ ನಟಿ ಅನನ್ಯಾ ಪಾಂಡೆಯನ್ನು(Ananya Pandey) ಎನ್‌ಸಿಬಿ(NCB) ವಿಚಾರಣೆ ನಡೆಸಿದ ಬೆನ್ನಲ್ಲೇ ನಟಿಯ ಬಾಯ್‌ಫ್ರೆಂಡ್ ಇಶಾನ್ ಖಟ್ಟರ್ ಆಕೆಯನ್ನು ಭೇಟಿ ಮಾಡಿದ್ದಾರೆ. ನಟಿ ಅನನ್ಯಾ ಮನೆಗೆ ಬಂದ ಇಶಾನ್ ಗೆಳತಿಗಾಗಿ ಹೂಗಳ ಬೊಕ್ಕೆಯನ್ನು ತೆಗೆದುಕೊಂಡುಬಂದಿದ್ದರು. ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಅನನ್ಯಾ ಪಾಂಡೆಯ ವಿಚಾರಣೆ ನಡೆಯುತ್ತಿದ್ದು ಸದ್ಯ ನಟಿ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಈಗಾಗಲೇ ಎನ್‌ಸಿಬಿ ನಟಿಯ ಮನೆಗೆ ರೈಡ್ ಮಾಡಿ ಲ್ಯಾಪ್‌ಟಾಪ್, ಟ್ಯಾಬ್‌ನಂತಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸತತ ಎರಡು ಬಾರಿ ನಟಿಯ ವಿಚಾರಣೆಯನ್ನೂ ಮಾಡಲಾಗಿದೆ.
22, 23ರಂದು ನಟಿಯ ವಿಚಾರಣೆ ನಡೆದಿದ್ದು 25ರಂದು ನಟಿಯ ವಿಚಾರಣೆ ನಿಗದಿಯಾಗಿದೆ. ತಂದೆ ಚಂಕಿ ಪಾಂಡೆ ಜೊತೆ ಎನ್‌ಸಿಬಿ ಕಚೇರಿಗೆ ಭೇಟಿಕೊಟ್ಟ ಅನನ್ಯಾ ಪಾಂಡೆಯನ್ನು ಎನ್‌ಸಿಬಿ ಅಧಿಕಾರಿಗಳು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆರ್ಯನ್ ಖಾನ್ ಜೊತೆ ಅನನ್ಯಾರ ವಾಟ್ಸಾಪ್ ಚಾಟ್‌ಗೆ ಸಂಬಂಧಿಸಿ ವಿಚಾರಣೆ ನಡೆದಿದೆ. ಅದರಲ್ಲಿ ನಟಿ ಗಂಗಾ ಎಂದು ವೀಡ್‌ನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಇದು ಪ್ರೊಡಕ್ಷನ್ ಹೌಸ್ ಅಲ್ಲ, ಆಫೀಸ್: ತಡವಾಗಿ ಬಂದ ನಟಿ ಅನನ್ಯಾಗೆ ಛೀಮಾರಿ ಹಾಕಿದ NCB ಆಫೀಸರ್
ಆರ್ಯನ್ ಖಾನ್ ಅವರ ಮೊಬೈಲ್ ಫೋನ್‌ನಿಂದ ಪಡೆಯಲಾದ ಚಾಟ್‌ಗಳು 2018-19ರಲ್ಲಿ, ಆರ್ಯನ್‌ಗೆ ಡ್ರಗ್ ಡೀಲರ್‌ಗಳ ಸಂಖ್ಯೆಯನ್ನು ಒದಗಿಸುವ ಮೂಲಕ ಮೂರು ಬಾರಿ ಔಷಧಿಗಳನ್ನು ಪೂರೈಸಲು ಅನನ್ಯಾ ಸಹಾಯ ಮಾಡಿದ್ದನ್ನು ಬಹಿರಂಗಪಡಿಸಿದೆ ಎನ್ನಲಾಗಿದೆ. ಆದರೆ ಡ್ರಗ್ಸ್ ಸೇವನೆ ಮತ್ತು ವ್ಯವಸ್ಥೆ ಮಾಡುವ ಎಲ್ಲ ಆರೋಪಗಳನ್ನು ನಟಿ ನಿರಾಕರಿಸಿದ್ದಾರೆ.
ಖಲಿ ಪೀಲಿ ಚಿತ್ರದಲ್ಲಿ ಅನನ್ಯಾ ಜೊತೆ ಕೆಲಸ ಮಾಡಿದ ಗೆಳೆಯ ಇಶಾನ್, ಅನನ್ಯಾಳ ಮನೆಗೆ ಭೇಟಿ ನೀಡುವ ಮೊದಲು ಬಿಳಿ, ಕೆಂಪು ಮತ್ತು ಗುಲಾಬಿ ಹೂವುಗಳ ದೊಡ್ಡ ಹೂಗುಚ್ಛವನ್ನು ಖರೀದಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇಬ್ಬರೂ ಒಟ್ಟಿಗೆ ವೆಕೇಷನ್ ತೆರಳಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೂ ಅವರು ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಏನು ಹೇಳಿಲ್ಲ.
ಕೆಲಸದಲ್ಲಿಅನನ್ಯಾ ಮುಂದೆ ವಿಜಯ್ ದೇವರಕೊಂಡ ಜೊತೆ ಲಿಗರ್, ಜೋಯಾ ಅಖ್ತರ್ ಅವರ ಖೋ ಗಯೇ ಹಮ್ ಕಹಾನ್ ಜೊತೆಗೆ ಆದರ್ಶ್ ಗೌರವ್ ಮತ್ತು ಸಿದ್ದಾಂತ್ ಚತುರ್ವೇದಿ ಮತ್ತು ಶಕುನ್ ಬಾತ್ರಾ ಅವರ ಹೆಸರಿಡದ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್ ಚತುರ್ವೇದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊಂದೆಡೆ, ಇಶಾನ್ ಫೋನ್ ಭೂತ್‌ನಲ್ಲಿ ಕತ್ರಿನಾ ಕೈಫ್ ಮತ್ತು ಸಿದ್ಧಾಂತ್ ಚತುರ್ವೇದಿ ಮತ್ತು ಪಿಪ್ಪಾದಲ್ಲಿ ಮೃಣಾಲ್ ಠಾಕೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.