ಬೆತ್ತಲಾಗಿ ಬರ್ತಡೇ ಆಚರಿಸಿಕೊಂಡ ಖ್ಯಾತ ನಟಿ ಜನ್ನಿಫರ್ ಲೊಪೇಜ್

By Shruiti G KrishnaFirst Published Jul 25, 2022, 12:47 PM IST
Highlights

ಇತ್ತೀಚಿಗಷ್ಟೆ ನಾಲ್ಕನೇ ವಿವಾಹ ಆಗುವ ಮೂಲಕ ಸುದ್ದಿಯಲ್ಲಿದ್ದ ಹಾಲಿವುಡ್ ಖ್ಯಾತ ನಟಿ ಜನ್ನಿಫರ್ ಲೊಪೇಜ್ ಇದೀಗ ಬೆತ್ತಲಾಗುವ ಮೂಲಕ ಸದ್ದುಮಾಡುತ್ತಿದ್ದಾರೆ. ಜನ್ನಿಫರ್ ತನ್ನ ಹುಟ್ಟುಹಬ್ಬವನ್ನು ಬೆತ್ತಲಾಗುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಹೌದು, ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಮೂಲಕ ಜನ್ನಿಫರ್ ತನ್ನ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ಜನ್ನಿಫರ್ ನಗ್ನರಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.  

ಇತ್ತೀಚಿಗಷ್ಟೆ ನಾಲ್ಕನೇ ವಿವಾಹ ಆಗುವ ಮೂಲಕ ಸುದ್ದಿಯಲ್ಲಿದ್ದ ಹಾಲಿವುಡ್ ಖ್ಯಾತ ನಟಿ ಜನ್ನಿಫರ್ ಲೊಪೇಜ್ ಇದೀಗ ಬೆತ್ತಲಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಹಾಲಿವುಡ್‌ನ ಖ್ಯಾತ ನಟ ಬೆನ್ ಅಫ್ಲೆಕ್‌ ಜೊತೆ 4ನೇ ವಿವಾಹವಾದ ನಟಿ ಜನ್ನಿಫರ್ ನಿನ್ನೆ (ಜುಲೈ 25) ಹುಟ್ಟುಹಬ್ಬ ಆಚರಿಸಿಕೊಂಡರು. ನಟಿ ಜನ್ನಿಫರ್ ಅವರಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದರು. ಆದರೆ ಜನ್ನಿಫರ್ ತನ್ನ ಹುಟ್ಟುಹಬ್ಬವನ್ನು ಬೆತ್ತಲಾಗುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಹೌದು, ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಮೂಲಕ ಜನ್ನಿಫರ್ ತನ್ನ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ಜನ್ನಿಫರ್ ನಗ್ನರಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.  

ಭಾನುವಾರ 53ನೇ ವರ್ಷಕ್ಕೆ ಕಾಲಿಟ್ಟ ಗಾಯಕಿ, ನಟಿ ಜೆನ್ನಿಫರ್ ಲೊಪೇಜ್ ಬೆತ್ತಲೆ ವಿಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ವಿಡಿಯೋದಲ್ಲಿ ಜನ್ನಿಫರ ಮೊದಲು ಕಪ್ಪು ಬಟ್ಟೆ ಧರಿಸಿದ್ದರು. ಬಳಿಕ ಬಾಡಿ ಲೋಷನ್ ಹಚ್ಚುವ ನಟಿ ನಂತರ ಸಂಪೂರ್ಣ ಬೆತ್ತಲಾಗುತ್ತಾರೆ. ವಿವಿಧ ಭಂಗಿಗಳಲ್ಲಿ ಪೋಸ್ ನೀಡಿರುವ ವಿಡಿಯೋ ವೈರಲ್ ಆಗಿದೆ. ಜನ್ನಿಫರ್ ಈ ವಿಡಿಯೊಗೆ ಅನೇಕರು ಹುಟ್ಟುಹಬ್ಬದ ವಿಶ್ ಮಾಡಿದ್ರೆ ಇನ್ನು ಅನೇಕರು ಸಖತ್ ಹಾಟ್, 53ನೇ ವಯಸ್ಸಿನಲ್ಲೂ ಎಷ್ಟು ಬ್ಯೂಟಿಫುಲ್ ಆಗಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. 

Latest Videos

ಅಂದಹಾಗೆ ಇತ್ತೀಚಿಗಷ್ಟೆ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಬೆತ್ತಲಾಗಿ ಫೋಟೋಶೂಟ್ ಮಾಡಿ ಸುದ್ದಿಯಾಗಿದ್ದರು. ರಣವೀರ್ ಸಿಂಗ್ ನಗ್ನ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮ್ಯಾಗಜಿನ್ ಒಂದಕ್ಕೆ ರಣವೀರ್ ಸಿಂಗ್ ಬೆತ್ತಲಾಗಿದ್ದರು. ಇನ್ನು ರಣವೀರ್ ಸಿಂಗ್ ಬಳಿಕ ಕಾಲಿವುಡ್ ಸ್ಟಾರ್ ವಿಷ್ಣು ವಿಶಾಲ್ ಸಹ ಬೆತ್ತಲಾಗಿ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದರು. ಪತ್ನಿ ಜ್ವಾಲಗುಟ್ಟಾ ಕ್ಲಿಕ್ಕಿಸಿದ ಫೋಟೋ ಎಂದು ಬರೆದುಕೊಂಡಿದ್ದರು. ಇತ್ತೀಚಿಗೆ ಬೆತ್ತಲಾಗಿ ಫೋಟೋಶೂಟ್ ಮಾಡಿಸುವುದು, ವಿಡಿಯೋ ಶೇರ್ ಮಾಡುವುದು ಹೆಚ್ಚಾಗಿದೆ. ಇದೀಗ ಜನ್ನಿಫರ್ ಟ್ರೆಂಡಿಂಗ್ ನಲ್ಲಿದ್ದಾರೆ.

 
 
 
 
 
 
 
 
 
 
 
 
 
 
 

A post shared by Jennifer Lopez (@jlo)


4ನೇ ಮದುವೆಯಾದ ಬೆನ್ನಲ್ಲೇ ಬೆಡ್ ರೂಮ್ ಫೋಟೋ ಹಂಚಿಕೊಂಡ ಖ್ಯಾತ ನಟಿ ಜನ್ನಿಫರ್ ಲೊಪೇಜ್

 

ನಟ ಬೆನ್ ಅಫ್ಲೆಕ್‌ ಜೊತೆ ಮದುವೆಯಾದ ಬಳಿಕ ಜನ್ನಿಫರ್ ಶೇರ್ ಮಾಡಿರುವ ಫೋಟೋ ಸಹ ವೈರಲ್ ಆಗಿತ್ತು. ಹೌದು ಜನ್ನಿಫರ್ ಪ್ರಿಯತಮ ಬೆನ್ ಜೊತೆ ವೈವವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬೆಡ್ ರೂಮ್ ಫೋಟೋವನ್ನು ಶೇರ್ ಮಾಡಿದ್ದರು. ಬೆಡ್ ಮೇಲೆ ಮಲಗಿ ಸ್ಮೈಲ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

ಹಾಲಿವುಡ್ ಚಿತ್ರದ ಪ್ರೀಮಿಯರ್ ಶೋಗೆ ಪಂಚೆಯಲ್ಲಿ ಹೋದ ದಕ್ಷಿಣದ ನಟ ಧನುಷ್

ಜನ್ನಿಫರ್ ಮತ್ತು ಬೆನ್ ಅಫ್ಲಕ್ ಇದೇ ಶನಿವಾರ ಮತ್ತು ಭಾನುವಾರ (ಜುಲೈ 17-18) ಆಪ್ತರ ಸಮ್ಮುಖದಲ್ಲಿ ಲಾಸ್ ವೆಗಾಸ್‌ನಲ್ಲಿ ವಿವಾಹವಾದರು. ಜೆನ್ನಿಫರ್ ಲೊಪೇಜ್‌ಗೆ ಇದು ನಾಲ್ಕನೇ ಮದುವೆಯಾದರೆ, ಬೆನ್ ಅಫ್ಲಿಕ್‌ಗೆ ಇದು ಎರಡನೇ ಮದುವೆ. ಈ ಮೊದಲು 2002 ರಲ್ಲಿಯೇ ಈ ಜೋಡಿ ವಿವಾಹವಾಗಲು ಬಯಸಿದ್ದರು ಅಲ್ಲದೇ ಘೋಷಣೆ ಸಹ ಮಾಡಿದ್ದರು. ಆದರೆ ಕೆಲವು ಕಾರಣಗಳಿಂದ 2003ರಲ್ಲಿ ತಮ್ಮ ಬ್ರೇಕಪ್ ಮಾಡಿಕೊಂಡು ಅಚರಿ ಮೂಡಿಸಿದ್ದರು. ಇದೀಗ 20 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಲ್ಲದೇ ವಿವಾಹ ಸಹ ಆಗಿದ್ದಾರೆ.

click me!