ಸಮಂತಾ ಸಿನಿಮಾಗಾಗಿ ಹಾಲಿವುಡ್ ನಿಂದ ಬಂದ ಸ್ಟಂಟ್ ಮಾಸ್ಟರ್

Suvarna News   | Asianet News
Published : Mar 20, 2022, 12:08 PM IST
ಸಮಂತಾ ಸಿನಿಮಾಗಾಗಿ ಹಾಲಿವುಡ್ ನಿಂದ ಬಂದ ಸ್ಟಂಟ್ ಮಾಸ್ಟರ್

ಸಾರಾಂಶ

ತೆಲುಗು ನಟಿ ಸಮಂತಾ ಸದ್ಯ ಯಶೋದಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಇರುವ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಹಾಲಿವುಡ್ ನ ಖ್ಯಾತ ಸ್ಟಾಂಟ್ ಮಾಸ್ಟರ್ ಯಾನಿಕ್ ಬೆನ್ ಎಂಟ್ರಿ ಕೊಟ್ಟಿದ್ದಾರೆ.

ತೆಲುಗು ನಟಿ ಸಮಂತಾ(Samantha) ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ(Naga Chaitanya) ಜೊತೆಗಿನ ದಾಂಪತ್ಯ ಜೀವನ ಕಡಿದುಕೊಂಡ ಬಳಿಕ ಸಮಂತಾ ಸಿನಿಮಾರಂಗದಲ್ಲಿ ಮತ್ತಷ್ಟು ಸಕ್ರೀಯರಾಗಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾಗಳ ಜೊತೆಗೆ ಸಮಂತಾ ಬಾಲಿವುಡ್ ಎಂಟ್ರಿಗೂ ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಬಳಿಕ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಮಂತಾಗೆ ಬೇಡಿಕೆಯೂ ಹೆಚ್ಚಾಗಿದೆ.

ಇತ್ತೀಚಿಗೆ ಬಿಡುಗಡೆಯಾದ ಅಲ್ಲು ಅರ್ಜುನ್(Allu Arjun) ನಟನೆಯ ಪುಷ್ಪ ಸಿನಿಮಾದ ಹಾಡು ಸಮಂತಾ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಸದ್ಯ ಸಮಂತಾ ತಮಿಳು ಮತ್ತು ತೆಲುಗಿನ ಒಂದೊಂದು ಸಿನಿಮಾವನ್ನು ಮುಗಿಸಿ ಬಿಡುಗಡೆ ಕಾಯುತ್ತಿದ್ದಾರೆ. ಈ ನಡುವೆ ಮತ್ತೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಯಶೋದಾ(Yashoda) ಎಂದು ಟೈಟಲ್ ಇಡಲಾಗಿದ್ದು ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ.

ಯಶೋದಾ ಸಿನಿಮಾದಿಂದ ಭರ್ಜರಿ ಸುದ್ದಿಯೊಂದು ಹೊರಬಂದಿದೆ. ಚಿತ್ರದಲ್ಲಿ ಅದ್ಭುತ ಆಕ್ಷನ್ ದೃಶ್ಯಗಳಿದೆಯಂತೆ. ಈ ಆಕ್ಷನ್ ಸೀಕ್ವೆನ್ಸ್ ನಿರ್ದೇಶನ ಮಾಡಲು ಹಾಲಿವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ಎಂಟ್ರಿ ಕೊಟ್ಟಿದ್ದಾರೆ. ಯಾನಿಕ್ ಬೆನ್(Yannick Ben) ಸಾಹಸ ನಿರ್ದೇಶಕ ಸಮಂತಾಗೆ ಆಕ್ಷನ್ ಡೈರೆಕ್ಟ್ ಮಾಡಲು ಸಿದ್ಧರಾಗಿದ್ದಾರೆ. ಯಾನಿಕ್ ಬೆನ್ ಹಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಾದ, ಟ್ರಾನ್ಸ್ ಪೋರ್ಟರ್ 3, ಇನ್ಸೆಪ್ಷನ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಭಾರತದ ಸಿನಿಮಾಗಳಾದ ರಯಿಸ್, ಟೈಗರ್ ಜಿಂದಾ ಹೈ, ಅತ್ತಾರಿಂಟಿಕಿ ದಾರೇದಿ, ನೆನೊಕ್ಕಡಿನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ.

Samantha And NagaChaitanya: ಡಿವೋರ್ಸ್ ಬಳಿಕ ಮದುವೆ ಸೀರೆ ವಾಪಸ್​ ಕೊಟ್ಟ ಸಮಂತಾ!

ಇನ್ನು ವಿಶೇಷ ಎಂದರೆ ಸಮಂತಾ ನಟನೆಯ ಬ್ಲಾಕ್ ಬಸ್ಟರ್ ಹಿಟ್ ವೆಬ್ ಸರಣಿಯಾದ ದಿ ಫ್ಯಾಮಿಲಿ-2 ನಲ್ಲಿ ಯಾನಿಕ್ ಬೆನ್ ಕೆಲಸ ಮಾಡಿದ್ದರು. ಇದೀಗ ಮತ್ತೆ ಸಮಂತಾ ಸಿನಿಮಾಗೆ ಎಂಟ್ರಿ ಕೊಡುವ ಮೂಲಕ ಸಮಂತಾ ಜೊತೆ ಎರಡನೆ ಬಾರಿ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ಎರಡನೇ ಬಾರಿ ಕೆಲಸ ಮಾಡುತ್ತಿದ್ದಾರೆ.

ಅಂದಹಾಗೆ ಯಶೋದಾ ಚಿತ್ರಕ್ಕೆ ಹರಿ ಶಂಕರ್ ಹಾಗೂ ಹರಿ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸಮಂತಾ ಜೊತೆ ನಾಯಕನಾಗಿ ಮಲಯಾಳಂ ನಟ ಉನ್ನಿ ಮುಕುಂದನ್ ನಟಿಸುತ್ತಿದ್ದಾರೆ. ಇನ್ನು ಮತ್ತೋರ್ವ ಖ್ಯಾತ ನಟಿ ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಸಮಂತಾ ಇದೀಗ ಆಕ್ಷನ್ ದೃಶ್ಯಗಳಿಗಾಗಿ ಸಜ್ಜಾಗುತ್ತಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ತಯರಾಗುತ್ತಿದ್ದು ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗಲಿದೆ.

ಮಿಡಲ್ ಫಿಂಗರ್‌ ಪೋಸ್ಟ್‌, ಟ್ರೋಲಿಗರ ಬಾಯಿ ಮುಚ್ಚಿಸಿದ ನಟಿ ಸಮಂತಾ!

ಸಮಂತಾ ಸದ್ಯ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಮಂತಾ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಸಕ್ರೀಯರಾಗಲು ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದುವರೆಗೂ ಸಮಂತಾ ಯಾವುದೇ ಬಾಲಿವುಡ್ ಸಿನಿಮಾವನ್ನು ಒಪ್ಪಿಕೊಂಡ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸದ್ಯದಲ್ಲೇ ಸಮಂತಾ ಹಿಂದಿ ಸಿನಿಮಾ ಬಹಿರಂಗವಾಗುವ ಸಾಧ್ಯತೆ ಇದೆ. ಸಿನಿಮಾಗಳ ಜೊತೆಗೆ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುವ ಸಮಂತಾ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!