ಒಂದು ಸಿನಿಮಾಗೆ 200 ಕೋಟಿ: ದಕ್ಷಿಣ ಭಾರತದ ಇವರು ದೇಶದ ಅತೀ ದುಬಾರಿ ನಿರ್ದೇಶಕ

Published : Apr 21, 2025, 04:36 PM ISTUpdated : Apr 21, 2025, 04:47 PM IST
ಒಂದು ಸಿನಿಮಾಗೆ 200 ಕೋಟಿ: ದಕ್ಷಿಣ ಭಾರತದ ಇವರು ದೇಶದ ಅತೀ ದುಬಾರಿ ನಿರ್ದೇಶಕ

ಸಾರಾಂಶ

ನಿರ್ದೇಶಕರ ಸಂಭಾವನೆಯ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆ ಆದರೆ ಈಗ ನಾವು ಭಾರತದ ಅತೀಹೆಚ್ಚು ಸಂಭಾವನೆ ಪಡೆಯುವ ನಿರ್ದೇಶನ ಬಗ್ಗೆ ಹೇಳ ಹೊರಟಿದ್ದೇವೆ. ಈ ನಿರ್ದೇಶಕ ತಾವು ನಿರ್ದೇಶಿಸುವ ಪ್ರತಿ ಸಿನಿಮಾಗೆ ಸುಮಾರು 200 ಕೋಟಿ ಚಾರ್ಜ್ ಮಾಡುತ್ತಾರೆ.

ಸಾಮಾನ್ಯವಾಗಿ ಸಿನಿಮಾದಲ್ಲಿ ಹೀರೋಗಳು ಅತ್ಯಧಿಕ ಸಂಭಾವನೆ ಪಡೆಯುವುದನ್ನು ನೀವು ಕೇಳಿರಬಹುದು. ಹೀರೋ ಹೀರೋಯಿನ್‌ಗಳ ಸಂಭಾವನೆ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ನಿರ್ದೇಶಕರ ಸಂಭಾವನೆಯ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆ ಆದರೆ ಈಗ ನಾವು ಭಾರತದ ಅತೀಹೆಚ್ಚು ಸಂಭಾವನೆ ಪಡೆಯುವ ನಿರ್ದೇಶನ ಬಗ್ಗೆ ಹೇಳ ಹೊರಟಿದ್ದೇವೆ. ಈ ನಿರ್ದೇಶಕ ತಾವು ನಿರ್ದೇಶಿಸುವ ಪ್ರತಿ ಸಿನಿಮಾಗೆ ಸುಮಾರು 200 ಕೋಟಿ ಚಾರ್ಜ್ ಮಾಡುತ್ತಾರೆ. ಈ ಸಂಭಾವನೆ ಬಾಲಿವುಡ್‌ ಖ್ಯಾತ ನಟ ಶಾರುಖ್ ಖಾನ್ ಸಂಭಾವನೆಗಿಂತಲೂ ಹೆಚ್ಚು ಹಾಗಂತ ಇದು ಬಾಲಿವುಡ್‌ನ ಖ್ಯಾತ ನಿರ್ದೇಶಕರಾದ ಕರಣ್ ಜೋಹರ್ ಅಥವಾ ರೋಹಿತ್ ಶೆಟ್ಟಿ ಅಥವಾ ರಾಜ್‌ ಕುಮಾರ್ ಹಿರಾನಿ ಅಲ್ಲ ಹಾಗಿದ್ರೆ ಮತ್ಯಾರು ಅಂತ ನೋಡೋಣ ಬನ್ನಿ...

ಒಂದು ಹೊಸ ಸಿನಿಮಾದ ಬಂದಾಗ ಪೋಸ್ಟರ್‌ಗಳಲ್ಲಿ ತಾರೆಯರು ಕಾಣಿಸುತ್ತಾರೆ. ಸಿನಿಮಾದ ಹೀರೋ ಹಾಗೂ ಹೀರೋಯಿನ್‌ಗಳೇ ಸಾಕಷ್ಟು ಕಾಣಿಸಿಕೊಳ್ಳುತ್ತಾರೆ. ಅವರು ಜನ ಸಮೂಹವನ್ನು ಸಿನಮಾದತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದೇ ಕಾರಣಕ್ಕೆ ಅವರಿಗೆ ಅತೀ ಹೆಚ್ಚು ಸಂಭಾವನೆ ನೀಡಲಾಗುತ್ತದೆ. ಆದರೆ ಹೀರೋಗಳಿಗಿ ಜನಪ್ರಿಯತೆಯಲ್ಲೂ ಪೈಪೋಟಿ ಕೊಡುವ ಕೆಲವು ನಿರ್ದೇಶಕರು ಇದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ? ಹೌದು ಇವರು ಕೇವಲ ಜನಪ್ರಿಯತೆ ಮಾತ್ರವಲ್ಲ, ಸಂಭಾವನೆಯ ವಿಚಾರದಲ್ಲೂ ಕೆಲ ಸೂಪರ್‌ಸ್ಟಾರ್‌ಗಳಿಗೆ ಸ್ಪರ್ಧೆ ನೀಡುತ್ತಾರೆ. ಇವರ ಫೋಟೋಗಳಿಗೂ ಜನರನ್ನು ಸೆಳೆಯುವ ಸಾಮರ್ಥ್ಯವಿದೆ. ಅಂತಹ ನಿರ್ದೇಶಕರಲ್ಲಿ ಒಬ್ಬರು ದಕ್ಷಿಣದ ಖ್ಯಾತ ನಿರ್ದೇಶಕ ಎಸ್‌.ಎಸ್‌ ರಾಜಮೌಳಿ.

ಇದನ್ನೂ ಓದಿ: ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ರೋಚಕ ಬೋಟ್ ಆಕ್ಷನ್? ಪ್ರಿಯಾಂಕಾ ಚೋಪ್ರಾ ಕಥೆ..?

ಹೌದು ತೆಲುಗು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ಎಸ್. ರಾಜಮೌಳಿ ಅವರು ಪ್ರಸ್ತುತ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಚಲನಚಿತ್ರ ನಿರ್ದೇಶಕರು ಎನಿಸಿದ್ದಾರೆ.  ಐಎಂಡಿಡಿ ಪ್ರಕಾರ ರಾಜಮೌಳಿಯವರು  ತಾವು ನಿರ್ದೇಶಿಸುವ ಪ್ರತಿ ಸಿನಿಮಾಗೆ ಸುಮಾರು 200 ಕೋಟಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಇಂಡಸ್ಟ್ರಿಯ ವ್ಯವಹಾರ ಬಲ್ಲವರು ಹೇಳುವಂತೆ ಇದರಲ್ಲಿ ಅವರ ಮುಂಗಡ ಶುಲ್ಕ, ಲಾಭದ ಪಾಲು ಮತ್ತು ಹಕ್ಕುಗಳ ಮಾರಾಟಕ್ಕೆ ಸಂಬಂಧಿಸಿದ ಬೋನಸ್ ಕೂಡ ಸೇರಿವೆ. ಒಂದು ಚಿತ್ರ ಹೆಚ್ಚು ಗಳಿಸಿದಷ್ಟೂ ಅವರ ಪಾಲು ಹೆಚ್ಚಾಗುತ್ತದೆ. ಇವರು ನಿರ್ದೇಶಿಸಿದ ಸೂಪರ್ ಹಿಟ್ ಫ್ಯಾನ್ ಇಂಡಿಯಾ ಸಿನಿಮಾ RRRನಿಂದ ಇವರು ಸುಮಾರು 200 ಕೋಟಿ ಸಂಭಾವನೆ ಗಳಿಕೆ ಮಾಡಿದ್ದರು. ತಮ್ಮ ಬಾಹುಬಲಿ ಸಿನಿಮಾದ ಯಶಸ್ಸಿನ ನಂತರ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಈ ರೀತಿಯ ದುಬಾರಿ ಮೊತ್ತವನ್ನು ಪಡೆಯಲು ಯಶಸ್ವಿಯಾಗಿದ್ದಾರೆ. ಅವರ ಈ 200 ಕೋಟಿ ಸಂಭಾವನೆ ಅವರನ್ನು ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಚಲನಚಿತ್ರ ಕಲಾವಿದರಲ್ಲಿ ಒಬ್ಬರನ್ನಾಗಿ ಮಾಡಿದೆ. ಬಾಲಿವುಡ್‌ನ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್‌ರಂತಹ ಸೂಪರ್‌ಸ್ಟಾರ್‌ಗಳೇ ತಮ್ಮ ಪ್ರತಿ ಚಿತ್ರಕ್ಕೆ  150 ರಿಂದ 180 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಹೀಗಿರುವಾಗ ಇವರ ಗಳಿಕೆ ರಾಜಮೌಳಿ ಅವರ ಗಳಿಕೆಗೆ ಹೋಲಿಸಿದರೆ ಕಡಿಮೆ ಎನಿಸಿದೆ. 

ರಾಜಮೌಳಿ ಇಷ್ಟೊಂದು ದುಬಾರಿ ಏಕೆ?
ರಾಜಮೌಳಿ ನಿರ್ದೇಶಿಸಿದ್ದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿದ್ದ RRR ಸಿನಿಮಾವನ್ನು ಈ ಸಿನಿಮಾದಲ್ಲಿ ಇಬ್ಬರು ದೊಡ್ಡತಾರೆಯರಿದ್ದರೂ ಕೂಡ ಬಾಹುಬಲಿಯ ನಿರ್ದೇಶಕ ರಾಜಮೌಳಿಯ ಸಿನಿಮಾವೆಂದೇ ಉತ್ತರ ಭಾರತದಲ್ಲಿ ಪ್ರಚಾರ ಮಾಡಲಾಯ್ತು. ಬಾಹುಬಲಿ ಸಿನಿಮಾದ ಯಶಸ್ಸು ಅವರನ್ನು ಪ್ಯಾನ್ ಇಂಡಿಯಾ ನಿರ್ದೇಶಕರನ್ನಾಗಿಸಿದೆ. ಅವರ  ಬಾಹುಬಲಿ 2 ಸಿನಿಮಾ ಹಿಂದಿಯಲ್ಲಿ ಮಾತ್ರ 510 ಕೋಟಿ ಗಳಿಸಿತ್ತು. ಅಲ್ಲದೇ  2023 ರಲ್ಲಿ ಪಠಾಣ್, ಈ ಬಾಹುಬಲಿ ಸಿನಿಮಾವನ್ನು ಹಿಂದಿಕ್ಕುವವರೆಗೂ ಇದು ಆರು ವರ್ಷಗಳ ಕಾಲ ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಉಳಿಯಿತು. ಅದೇ ರೀತಿ, ಆರ್‌ಆರ್‌ಆರ್ ಕೂಡ ಹಿಂದಿಯಲ್ಲಿ 270 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಇದೇ ಕಾರಣಕ್ಕೆ ರಾಜಮೌಳಿ ಮಾರುಕಟ್ಟೆಯಲ್ಲಿ ಬಹಳ ದುಬಾರಿ ಎನಿಸಿದ್ದಾರೆ. 

ಇದನ್ನೂ ಓದಿ:ವಯಸ್ಸು 41 ಆದ್ರೂ ಈ ನಟಿಗಿದೆ ಭಾರೀ ಬೇಡಿಕೆ: ರಾಜಮೌಳಿ, ಪೂರಿ ಜಗನ್ನಾಥ್ ಚಿತ್ರಗಳಲ್ಲಿ ಅವಕಾಶ?

ಅತಿ ಹೆಚ್ಚು ಸಂಭಾವನೆ ಪಡೆಯುವ ಇತರ ನಿರ್ದೇಶಕರು
ಸಿನಿಮಾ ಉದ್ಯಮದ ಮೂಲಗಳ ಪ್ರಕಾರ, ರಾಜಮೌಳಿ ಮಾಡುವ ಅರ್ಧದಷ್ಟು ಸಂಭಾವನೆಯನ್ನು ಬೇರೆ ಯಾವ ನಿರ್ದೇಶಕರೂ ಪಡೆಯುವುದಿಲ್ಲ, ದಕ್ಷಿಣದ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಶಾಂತ್ ನೀಲ್ ಅವರಂತಹ ದೊಡ್ಡ ನಿರ್ದೇಶಕರು ಪ್ರತಿ ಚಿತ್ರಕ್ಕೆ ಸುಮಾರು 90 ಕೋಟಿ ಪಡೆಯುತ್ತಾರೆ. ರಾಜ್‌ಕುಮಾರ್ ಹಿರಾನಿ  ಅವರಂತಹ ನಿರ್ದೇಶಕರು 80 ಕೋಟಿ ಪಡೆಯುತ್ತಾರೆ  ಇವರ ನಂತರದ ಸ್ಥಾನದಲ್ಲಿ ಸುಕುಮಾರ್, ಸಂಜಯ್ ಲೀಲಾ ಬನ್ಸಾಲಿ, ಲೋಕೇಶ್ ಕನಕರಾಜ್ ಮತ್ತು ಸಿದ್ಧಾರ್ಥ್ ಆನಂದ್ ಇದ್ದಾರೆ. ಇವರು ಪ್ರತಿಯೊಬ್ಬರೂ ಪ್ರತಿ ಚಿತ್ರಕ್ಕೆ40 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಕರಣ್ ಜೋಹರ್ ಮತ್ತು ರೋಹಿತ್ ಶೆಟ್ಟಿಯಂತಹ ನಿರ್ಮಾಪಕರು ಸಾಮಾನ್ಯವಾಗಿ ತಮ್ಮದೇ ಆದ ಚಿತ್ರಗಳನ್ನು ನಿರ್ಮಿಸುತ್ತಾರೆ. ಅದಕ್ಕಾಗಿಯೇ ಅವರ ಶುಲ್ಕದ ಬಗ್ಗೆ ಅವರು ಎಲ್ಲೂ ಉಲ್ಲೇಖಿಸುವುದಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?