
1996 ರ ಬಂಗಾಳಿ ಚಲನಚಿತ್ರ ಬಿಯಾರ್ ಫೂಲ್ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿರೋ ನಟಿ ರಾಣಿ ಮುಖರ್ಜಿ ಕೆಲ ದಶಕಗಳವರೆಗೆ ಬಾಲಿವುಡ್ ಚಿತ್ರವನ್ನು ಆಳಿದವರು. 45 ವರ್ಷದ ರಾಣಿಯವರು 1997ರ ರಾಜಾ ಕಿ ಆಯೇಗಿ ಬಾರಾತ್ ಮೂಲಕ ಬಾಲಿವುಡ್ ಪ್ರವೇಶ ಮಾಡಿದರು. ಕುಚ್ ಕುಚ್ ಹೋತಾ ಹೈ' (1990) ಚಿತ್ರ ಇವರಿಗೆ ಬ್ರೇಕ್ ನೀಡಿತು. ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್ನ (film fare) ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಅವರು ನಂತರ ಅನೇಕ ಚಲನಚಿತ್ರಗಳಲ್ಲಿ ನಟಿಸಿದರೂ ಹೆಚ್ಚು ನಿರೀಕ್ಷೆಯ ಮಟ್ಟವನ್ನು ಮುಟ್ಟಲಿಲ್ಲ. 2004 ರಲ್ಲಿ ತೆರೆ ಕಂಡ ಹಮ್ ತುಮ್ ಹಾಗೂ ವಿಮರ್ಶಾತ್ಮಕವಾಗಿ ಯಶಸ್ಸು ಕಂಡ 'ಯುವ' ಇವರ ಚಿತ್ರರಂಗದ ದಿಕ್ಕನ್ನೇ ಬದಲಿಸಿದವು. ಫಿಲ್ಮ್ ಫೇರ್ ಉತ್ಸವದಲ್ಲಿ ಶ್ರೇಷ್ಠ ನಟಿ ಹಾಗೂ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಗಳಿಸಿದರು. ಇವರಿಗೆ ಇನ್ನಷ್ಟು ಶ್ರೇಯಸ್ಸು ತಂದುಕೊಟ್ಟ ಚಿತ್ರ ಬ್ಲ್ಯಾಕ್. 2005ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕುರುಡಿ, ಕಿವುಡಿ ಮತ್ತು ಮೂಕ ಮಹಿಳೆಯಾಗಿ ನಟಿಸಿ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಗಳಿಸಿದರು.
ಆದಿತ್ಯ ಚೋಪ್ರಾ (Aditya Chopra) ಅವರನ್ನು ಮದುವೆಯಾಗಿ ಒಂದು ಹೆಣ್ಣುಮಗುವಿನ ತಾಯಿಯಾದಾಗಿನಿಂದ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. 2021 ರ ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಫ್ಲಾಪ್ ಆಯಿತು. ಆದರೆ ಕೊನೆಗೆ ಕಳೆದ ವರ್ಷ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಮೂಲಕ ರಾಣಿ ಅಬ್ಬರಿಸಿದರು. ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಭಾರತಕ್ಕಿಂತಲೂ ಹೆಚ್ಚಾಗಿ ನಾರ್ವೆಯಲ್ಲಿ ಇದು ಭಾರಿ ಸದ್ದು ಮಾಡಿತು. ಸಿನಿಮಾ ನಾರ್ವೇಯಲ್ಲಿ ತೆರೆಕಂಡು ಸೂಪರ್ ಹಿಟ್ ಆಯಿತು. ನಾರ್ವೇಯಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ವೀಕೆಂಡ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಖ್ಯಾತಿ ಈ ಸಿನಿಮಾಕ್ಕೆ ಸೇರಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯೊಬ್ಬಳು ಆ ಮಕ್ಕಳನ್ನು ವಾಪಸ್ ಪಡೆಯಲು ಹೋರಾಟ ನಡೆಸುವ ಕಥೆ ಇದಾಗಿದೆ.
ಸುಂದರಿ ತ್ರಿಶಾಗೆ ಚುಂಬಿಸಲು ಕೊನೆಗೂ ಒಪ್ಪದ ನಟ ವಿಜಯ್! ಕಾರಣ ಮಾತ್ರ ಸಕತ್ ಇಂಟರೆಸ್ಟಿಂಗ್
2014 ರಲ್ಲಿ, ರಾಣಿ ಮುಖರ್ಜಿ ಅವರು ಯಶ್ ರಾಜ್ ಫಿಲ್ಮ್ಸ್ ಅಧ್ಯಕ್ಷ ಆದಿತ್ಯ ಚೋಪ್ರಾ ಅವರನ್ನು ವಿವಾಹವಾದರು. ಡಿಸೆಂಬರ್ 2015 ರಲ್ಲಿ, ಅವರು ಹೆಣ್ಣು ಮಗುವಿಗೆ ಪೋಷಕರಾದರು, ಅವರಿಗೆ ಅವರು ಆದಿರಾ ಚೋಪ್ರಾ ಎಂದು ಹೆಸರಿಸಿದರು. ಅದಾಗಲೇ ರಾಣಿಯವರಿಗೆ 39 ವರ್ಷ ವಯಸ್ಸಾಗಿತ್ತು. ಅದಕ್ಕಾಗಿಯೇ ಎರಡನೆಯ ಮಗುವಿನ ಆಸೆಯನ್ನು ಕೈಬಿಟ್ಟಿದ್ದರು. ಆದರೆ, ವಯಸ್ಸಾದ ಬಳಿಕವೂ ಹುಟ್ಟಿದ ಮಗಳ ಮುಖವನ್ನು 10 ವರ್ಷಗಳಿಂದಲೂ ರಾಣಿ ಮುಖರ್ಜಿ ರಿವೀಲ್ ಮಾಡಲೇ ಇಲ್ಲ. ಸೆಲೆಬ್ರಿಟಿಗಳ ಮಕ್ಕಳು ಎಂದರೆ ಪಾಪರಾಜಿಗಳಿಗೆ ಎಲ್ಲಿಲ್ಲದ ಪ್ರೀತಿ. ಅವರ ಸೋಷಿಯಲ್ ಮೀಡಿಯಾ ವ್ಯೂವ್ಸ್ ಹೆಚ್ಚಿಸಿಕೊಳ್ಳಲು ಇದೊಂದು ದಾರಿಯಲ್ಲವೆ ಅದಕ್ಕೆ. ಆದ್ದರಿಂದ ನಟಿಯರು ಎಲ್ಲೇ ಹೋದರೂ ಅವರ ಬೆನ್ನ ಹಿಂದೆ ಇರುತ್ತಾರೆ ಪಾಪರಾಜಿಗಳು. ಆದರೆ, ಅವರಿಂದಲೂ ತಮ್ಮ ಮಗಳನ್ನು ಕಾಪಾಡಿಕೊಂಡು ಬಂದಿದ್ದಾರೆ ರಾಣಿ ಮುಖರ್ಜಿ.
ಈಗ ಇದರ ಬಗ್ಗೆ ಮಾತನಾಡಿರುವ ನಟಿ, ನನ್ನದು ಮಿರಾಕಲ್ ಬೇಬಿ. ಅದಾಗಲೇ ವಯಸ್ಸಾಗಿದ್ದರಿಂದ ಎರಡನೆಯ ಮಗು ಬೇಕೆಂದರೂ ಆಗಲಿಲ್ಲ. ಏಳು ವರ್ಷ ಕಷ್ಟಪಟ್ಟು ಆಸೆ ಬಿಟ್ಟಾಯಿತು. ಆದರೆ, ನಾನು ನನ್ನ ಮೊದಲ ಮಿರಾಕಲ್ ಬೇಬಿಯನ್ನು ಎಲ್ಲಿಯೂ ತೋರಿಸುವುದಿಲ್ಲ ಎಂದಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್, ರಾಣಿಯನ್ನು ತನ್ನ ಮಗಳನ್ನು ಪಾಪ್‌ಗಳಿಂದ ಹೇಗೆ ಯಶಸ್ವಿಯಾಗಿ ರಕ್ಷಿಸಿದರು ಎಂಬ ಪ್ರಶ್ನೆ ಕೇಳಿದಾಗ, ನಟಿ, ನಾನು ಮೊದಲು ಪಾಪರಾಜಿಗಳಿಗೆ ಆದಿರಾಳ ಚಿತ್ರಗಳನ್ನು ಕ್ಲಿಕ್ ಮಾಡಬೇಡಿ ಎಂದು ಕೇಳಿಕೊಂಡೆ. ಆದರೆ ಕೆಲವೊಮ್ಮೆ ಅವರು, ನಾನು ಹೇಳಿದ ಹೊರತಾಗಿಯೂ ಕ್ಲಿಕ್ ಮಾಡಲು ಮುಂದಾಗುತ್ತಿದ್ದರು. ಆದರೆ ನನ್ನ ಕಣ್ಣುಗಳನ್ನು ನೋಡಿ ಹೆದರಿ ಆ ಸಾಹಸಕ್ಕೆ ಕೈಹಾಕಲಿಲ್ಲ. ಆದ್ದರಿಂದ ಆಕೆಯ ಮುಖವನ್ನು ಹತ್ತು ವರ್ಷಗಳಿಂದ ಪಾಪರಾಜಿಗಳ ಕಣ್ಣಿಗೆ ಬೀಳದಂತೆ ತಡೆದಿದ್ದೇನೆ ಎಂದಿದ್ದಾರೆ.
ಅಯ್ಯೋ ಕಂಗನಾ, ಡ್ರೆಸ್ ಸರಿಮಾಡಿಕೊಂಡ್ರೂ ಕಾಣಬಾರದ್ದೆಲ್ಲಾ ಕಂಡೋಯ್ತಲಮ್ಮಾ... ಬಿಡ್ತಾರಾ ಟ್ರೋಲಿಗರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.