ಗೆಳತಿಯನ್ನೇ ಮದ್ವೆಯಾದ ಖ್ಯಾತ ನಟಿ: ಇವರಿಬ್ಬರ ಇಂಟರೆಸ್ಟಿಂಗ್​ ಲವ್​ ಸ್ಟೋರಿ ಇಲ್ಲಿದೆ...

Published : Apr 21, 2025, 02:11 PM ISTUpdated : Apr 21, 2025, 03:05 PM IST
ಗೆಳತಿಯನ್ನೇ ಮದ್ವೆಯಾದ ಖ್ಯಾತ ನಟಿ: ಇವರಿಬ್ಬರ ಇಂಟರೆಸ್ಟಿಂಗ್​ ಲವ್​ ಸ್ಟೋರಿ ಇಲ್ಲಿದೆ...

ಸಾರಾಂಶ

ಟ್ವಿಲೈಟ್ ಖ್ಯಾತಿಯ ನಟಿ ಕ್ರಿಸ್ಟನ್ ಸ್ಟೀವರ್ಟ್ ತಮ್ಮ ಗೆಳತಿ ಡೈಲನ್ ಮೇಯರ್‌ರನ್ನು ಏಳು ವರ್ಷಗಳ ಡೇಟಿಂಗ್ ಬಳಿಕ ಲಾಸ್ ಏಂಜಲೀಸ್‌ನಲ್ಲಿ ವಿವಾಹವಾದರು. ೨೦೨೧ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಏಪ್ರಿಲ್ ೨೦ರಂದು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. ಭರ್ಜರಿ ಆಚರಣೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇದೊಂದು ಅಚ್ಚರಿಯ ಬೆಳವಣಿಗೆ.

ಇತ್ತೀಚಿನ ದಿನಗಳಲ್ಲಿ ಮಹಿಳೆ ಮಹಿಳೆಯರನ್ನೇ, ಪುರುಷ ಪುರುಷರನ್ನೇ ಮದುವೆಯಾಗುವ ಸುದ್ದಿ ಸದ್ದು ಮಾಡುತ್ತಲೇ ಇದೆ. ಒಂದು ಕಡೆಗಳಲ್ಲಿ ಅತ್ತೆ ಅಳಿಯನ ಜೊತೆ ಓಡಿ ಹೋದ, ಯುವತಿ ಅಜ್ಜಿನ ವಯಸ್ಸಿನವಳನ್ನು ಮದ್ವೆಯಾದಳು, ಬಿಲೇನಿಯರ್​ ಮನೆಕೆಲಸದವನನ್ನೇ ವರಿಸಿದಳು, ಯುವಕ ನೆಲ ಒರೆಸುವ ಸ್ಟೈಲ್​ಗೆ ಒಬ್ಬಳು ಫಿದಾ ಆದಳು, ಕಾರಿನ ಗೇರ್​ ಚೇಂಜ್​ ಮಾಡುವ ಸ್ಟೈಲ್​ಗೆ ಇನ್ನೊಬ್ಬಳು ಮನಸೋತಳು... ಇಂಥ ಸುದ್ದಿಗಳೂ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಲೇ ಇದೆ. ಇದಕ್ಕೆ ಇನ್ನೊಂದು ಸೇರ್ಪಡೆ ಖ್ಯಾತ ನಟಿಯೊಬ್ಬಳು ತನ್ನ ಗೆಳತಿಯನ್ನೇ ಮದುವೆಯಾಗಿರುವುದು.


ಹಾಲಿವುಡ್​ನ ಖ್ಯಾತ ನಟಿ ಕ್ರಿಸ್ಟನ್ ಸ್ಟೀವರ್ಟ್  ತನ್ನ ಬಹುಕಾಲದ ಗೆಳತಿ ಡೈಲನ್ ಮೇಯರ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ಫೋಟೋಗಳು ಭಾರಿ ಸದ್ದು ಮಾಡುತ್ತಿವೆ.  ಕ್ರಿಸ್ಟನ್ ಹಾಲಿವುಡ್ ಚಿತ್ರ 'ಟ್ವಿಲೈಟ್' ಮೂಲಕ ಪ್ರಸಿದ್ಧರಾದವರು. ಕ್ರಿಸ್ಟನ್ ತನ್ನ ಗೆಳತಿಯನ್ನು ಲಾಸ್ ಏಂಜಲೀಸ್‌ನಲ್ಲಿ ತಮ್ಮ ಆಪ್ತರ ಸಮ್ಮುಖದಲ್ಲಿ  ವಿವಾಹವಾದರು. ಈ ಮದುವೆ ನಿನ್ನೆ ಅಂದರೆ ಏಪ್ರಿಲ್ 20ರಂದು ನಡೆದಿದೆ.  ಸತತ ಏಳು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಇದೀಗ ಇವರು ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಹುಡುಗಿ ಜೊತೆ ಲವ್​, ಹುಡುಗನ ಜೊತೆ ಮದ್ವೆ! ಮಂಟಪದಿಂದ ಸ್ನೇಹಿತೆಯ ಎಳೆದೊಯ್ದ ಯುವತಿ 


ಕ್ರಿಸ್ಟನ್ ಸ್ಟೀವರ್ಟ್ ಮತ್ತು ಡೈಲನ್ ಮೆಯೆರ್ 2019 ರಲ್ಲಿ ಪರಿಚಯವಾಗಿ ಲಿವ್​ ಇನ್​ನಲ್ಲಿ ಇದ್ದರು.  ಇಬ್ಬರೂ ಸುಮಾರು ಏಳು ವರ್ಷಗಳ ಕಾಲ ಒಟ್ಟಿಗೇ ನೆಲೆಸಿದ್ದರು.  2021 ರಲ್ಲಿ, ಇಬ್ಬರೂ ತಮ್ಮ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ನಂತರ, ಇಬ್ಬರೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಕ್ರಿಸ್ಟನ್ ಅವರ ಅಭಿಮಾನಿಗಳು ಅವರು ಯಾವಾಗ ಮದುವೆಯಾಗುತ್ತಾರೆಂದು ಹೋದಲೆಲ್ಲಾ ಪ್ರಶ್ನೆ ಎದುರಾಗುತ್ತಿತ್ತು. ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. 

ಸ್ಥಳೀಯ ಮಾಧ್ಯಮಗಳ ವರದಿಯ  ಪ್ರಕಾರ, ನ್ಯಾಯಾಲಯದಿಂದ ವಿವಾಹ ಪರವಾನಗಿಯನ್ನು ಪಡೆದ ನಂತರ ಸ್ಟೀವರ್ಟ್ ಮತ್ತು  ಗೆಳತಿ ಸ್ನೇಹಿತರು ಮತ್ತು ಕುಟುಂಬದವರ ಜೊತೆ  ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.  ಈ ಸಂದರ್ಭದಲ್ಲಿ ಖ್ಯಾತ ನಟಿ ಆಶ್ಲೇ ಬೆನ್ಸನ್ ಮತ್ತು ಅವರ ಪತಿ ಬ್ರಾಂಡನ್ ಡೇವಿಸ್ ಕೂಡ ಮದುವೆಯಲ್ಲಿ ಉಪಸ್ಥಿತರಿದ್ದರು. ಯಾವಾಗಲೇ  ಆಗಲಿ ತಾನು ಮದುವೆಯಾದಾಗ ಭರ್ಜರಿ ಪಾರ್ಟಿ ಆಯೋಜಿಸುವುದಾಗಿ ಈ ಹಿಂದೆ ಕ್ರಿಸ್ಟನ್ ಸ್ಟೀವರ್ಟ್ ಹೇಳಿದ್ದರು. ನಾನೂ ಮದುವೆಯಾಗುತ್ತೇನೆ, ಭರ್ಜರಿ ಪಾರ್ಟಿ ಆಯೋಜಿಸುತ್ತೇನೆ ಎಂದಿದ್ದರು. ಅದರೆ ಅಂದು ಅವರು ಹೀಗೆ ಹೇಳಿದಾಗ, ನಟಿ ಈ ರೀತಿ ಮದುವೆಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೂ ಇದೀಗ ಭರ್ಜರಿ ಪಾರ್ಟಿಗೆ ಎದುರು ನೋಡಲಾಗುತ್ತಿದೆ. 

ಸುಂದರಿ ತ್ರಿಶಾಗೆ ಚುಂಬಿಸಲು ಕೊನೆಗೂ ಒಪ್ಪದ ನಟ ವಿಜಯ್​! ಕಾರಣ ಮಾತ್ರ ಸಕತ್​ ಇಂಟರೆಸ್ಟಿಂಗ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌