ಹೀರಾಮಂಡಿ ಚಿತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ಶರ್ಮಿನ್ ಸೀಗಲ್ ಇದೀಗ ಸಲ್ಮಾನ್ ಖಾನ್ ಪ್ರಪೋಸಲ್ ಬಹಿಂಗಪಡಿಸಿದ್ದಾಳೆ. ನನ್ನ ಮದುವೆಯಾಗುತ್ತೀಯಾ ಎಂದು ಸಲ್ಮಾನ್ ಖಾನ್ ಪ್ರಪೋಸಲ್‌ನ್ನು ಹೀರಾಮಂಡಿ ನಟಿ ಒಂದೂ ಕ್ಷಣವೂ ಯೋಚಿಸದೆ ತಿರಸ್ಕರಿಸಿದ್ದೇಕೆ?
ಮುಂಬೈ(ಮೇ.15) ಸಂಜಯ್ ಲೀಲಾ ಬನ್ಸಾಲಿಯ ಹೀರಾಮಂಡಿ ಚಿತ್ರ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದಲ ಮೂರಕ ಶರ್ಮಿನ್ ಸೀಗಲ್ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ಚಿತ್ರದ ಯಶಸ್ಸಿನ ಬಳಿಕ ಶರ್ಮಿನ್ ಬೇಡಿಕೆ ದುಪ್ಪಟ್ಟಾಗಿದೆ. ಇತ್ತ ನಟಿ ಕಾರ್ಯಕ್ರಮ, ಸಂದರ್ಶನ ಹೀಗೆ ಫುಲ್ ಬ್ಯೂಸಿಯಾಗಿದ್ದಾರೆ. ಸಂದರ್ಶನ ಒಂದರಲ್ಲಿ ಶರ್ಮಿನ್, ತಮಗೆ ಬಂದ ಪ್ರಪೋಸಲ್ ಕುರಿತು ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಮೊದಲು ಪ್ರಪೋಸ್ ಮಾಡಿದ್ದರು. ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದರು. ನಾನು ಇಲ್ಲ ಎಂದಿದ್ದೇ ಎಂದು ಹಳೇ ನೆನಪುಗಳನ್ನು ತೆರೆದಿಟ್ಟಿದ್ದಾರೆ.
ನಟಿ ಶರ್ಮಿನ್‌ಗೆ ನಟ ಸಲ್ಮಾನ್ ಖಾನ್ ಪ್ರಪೋಸ್ ಮಾಡಿದ್ರಾ? ಹೌದು, ಇದು ಸತ್ಯ. ಆದರೆ ಇದು ನಿನ್ನೆ ಮೊನ್ನೆಯ ಕತೆಯಲ್ಲ. ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆ. ಸಂದರ್ಶನದಲ್ಲಿ ನೀವು ಮೊದಲು ಭೇಟಿಯಾದ ಸೆಲೆಬ್ರೆಟಿ ಯಾರು? ಈ ಭೇಟಿ ಕುರಿತು ಹೇಳಿ ಎಂದು ಕೇಳಿದ್ದಾರೆ. ಈ ವೇಳೆ ಉತ್ತರ ನೀಡಿದ ಶರ್ಮಿನ್, ಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ಶೂಟಿಂಗ್ ವೇಳೆ ನಾನು ಸಲ್ಮಾನ್ ಖಾನ್ ಭೇಟಿಯಾಗಿದ್ದೆ. ಈ ವೇಳೆ ಸಲ್ಮಾನ್ ಖಾನ್, ನನ್ನ ಮದುವೆಯಾಗುತ್ತೀಯಾ ಎಂದು ಕೇಳಿದ್ದರು. ನಾನು ಇಲ್ಲ ಎಂದಿದ್ದೆ. ಈ ವೇಳೆ ನನಗೆ 2 ರಿಂದ 3 ವರ್ಷ ವಯಸ್ಸಿರಬಹುದು ಎಂದು ಶರ್ಮಿನ್ ಹೇಳಿದ್ದಾರೆ.
ಹೀರಾಮಂಡಿ: ಇದು ಅವಿಭಜಿತ ಭಾರತದ ಅತ್ಯಂತ ಪುರಾತನ ವೇಶ್ಯಾಗೃಹ
ನಾನು ಚಿಕ್ಕವಳಿದ್ದೆ.ನಾನು ಭೇಟಿಯಾದ ಮೊದಲ ಸೆಲೆಬ್ರೆಟಿ ಸಲ್ಮಾನ್ ಖಾನ್. ಈ ವೇಳೆ ಪೋಷಕರ ಜೊತೆ ತೆರಳಿದ್ದ ನನ್ನ ನೋಡಿ ಸಲ್ಮಾನ್ ಖಾನ್ ತಮಾಷೆಯಾಗಿ ಪ್ರಪೋಸ್ ಮಾಡಿದ್ದರು. ನಾನು ಇಲ್ಲ ಎಂದಿದ್ದೆ. ಸಲ್ಮಾನ್ ನನಗೆ ಕೇಳಿದ್ದೇನು ಅನ್ನೋದರ ಅರ್ಥ ಗೊತ್ತಿಲ್ಲದ ವಯಸ್ಸು. ಆದರೆ ನಾನು ಇಲ್ಲ ಎಂದಿದ್ದೆ. ಈ ಘಟನೆಯನ್ನು ಹಿರಿಯರು ಪದೆ ಪದೇ ನನಗೆ ಹೇಳುತ್ತಿದ್ದರು ಎಂದು ಶರ್ಮಿನ್ ಹೇಳಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿಯ ಹೀರಾಮಂಡಿ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದ ಅತ್ಯಂತ ಪುರಾತನ ವೇಶಾಗೃಹದ ಕುರಿತು ಈ ಚಿತ್ರಕತೆ, ನಿರ್ದೇಶನ ಅದ್ಭುತವಾಗಿ ಮೂಡಿಬಂದಿದೆ. ಅವಿಭಜಿತ ಭಾರತದ ಅತ್ಯಂತ ಪುರಾತನ ವೇಶಾಗೃಹ ಇದಾಗಿದೆ. ಈ ವೇಶ್ಯಾಗೃಹ ಚಿತ್ರದಲ್ಲಿ ಹಲವು ಸ್ಟಾರ್ ನಟಿಯರು ಕಾಣಿಸಿಕೊಂಡಿದ್ದಾರೆ. ಈ ಪೈಕಿ ಸಂಜಯ್ ಲೀಲಾ ಬನ್ಸಾಲಿ ಸಂಬಂಧಿ ಶರ್ಮಿನ್ ಸೀಗಲ್ ಕೂಡ ಕಾಣಿಸಿಕೊಂಡಿದ್ದಾರೆಮನೀಶಾ ಕೊಯಿರಾಲ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಕ್ ಸೇರಿದಂತೆ ಹಲವುತಾರಾಗಣ ಈ ಚಿತ್ರದಲ್ಲಿದೆ.
ಕಣ್ಣು ಕುಕ್ಕುತ್ತೆ ಹೀರಾಮಂಡಿಯ ಫರೀದನ್, ಸೋನಾಕ್ಷಿಯ 14 ಕೋಟಿಯ ಮುಂಬೈ ಮನೆಯ ಅದ್ಧೂರಿತನ