ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಹಲವು ತನಿಖಾ ಏಜೆನ್ಸಿಯಿಂದ ವಿಚಾರಣೆಗೊಳಪಟ್ಟ ನಟಿ ರಿಯಾ ತನ್ನ ಮತ್ತು ಸುಶಾಂತ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ, ಇಲ್ಲಿ ಓದಿ.
ಸಿಬಿಐ, ಇಡಿ, ಎನ್‌ಸಿಬಿ ತಂಡ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ವಿವಿಧ ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿವೆ. ಸುಶಾಂತ್ ಗರ್ಲ್‌ಫ್ರೆಂಡ್, ನಟಿ ರಿಯಾ ಚಕ್ರವರ್ತಿಯನ್ನು ಈಗಾಗಲೇ ಹಲವು ಸಲ ವಿಚಾರಣೆ ನಡೆಸಲಾಗಿದೆ.
ತನ್ನ ಮತ್ತು ಸುಶಾಂತ್ ಸಂಬಂಧದ ಬಗ್ಗೆ ಮಾತನಾಡಿದ ರಿಯಾ ತಮ್ಮ ಸಂಬಂಧ ಸಿನಿಮಾಗಳ ಸಂಬಂಧಗಳ ಹಾಗಿತ್ತು. ಸುಶಾಂತ್ ಒಬ್ಬ ಸುಂದರ ವ್ಯಕ್ತಿ. ಸಿನಿಮಾಗಳಂತ, ಕಾಲ್ಪನಿಕ ಕಥೆಯಂತಹ ಸಂಬಂಧ ನಮ್ಮ ನಡುವೆ ಇತ್ತು ಎಂದಿದ್ದಾಳೆ.
ಮಗನ ಕೊಂದ ಕೊಲೆಗಾತಿ: ರಿಯಾ ವಿರುದ್ಧ ಸುಶಾಂತ್ ತಂದೆ ಆಕ್ರೋಶ
34 ವರ್ಷದ ನಟ ಸುಶಾಂತ್ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿಗೂ ಕೆಲವು ದಿನ ಮುನ್ನ ಸುಶಾಂತ್ ರಿಯಾಳನ್ನು ತನ್ನ ಮನೆಯಿಂದ ಹೋಗುವಂತೆ ಹೇಳಿದ್ದ ಎನ್ನಲಾಗಿದೆ. ಸುಶಾಂತ್ ಪುನಃ ತನ್ನನ್ನು ಕರೆಯಬಹುದೆಂದು ನಾನು ನಿರೀಕ್ಷಿಸಿದ್ದೆ. ಜನವರಿಗೂ ಮುನ್ನ ಹೀಗೆ ಆಗಿತ್ತು. ಆದರೆ ಸುಶಾಂತ್ ನನ್ನನ್ನು ಹಿಂತಿರುಗಿ ಕರೆಯಲೇ ಇಲ್ಲ ಎಂದಿದ್ದಾಳೆ ನಟಿ ರಿಯಾ.
ಕಾಮನ್ ಫ್ರೆಂಡ್ ಮೂಲಕ ಜೂನ್ 14ರಂದು ನಟ ಆತ್ಮಹತ್ಯೆ ಮಾಡಿಕೊಂಡ ಕುರಿತ ರೂಮರ್ಸ್ ಸಿಕ್ಕಿತು. ನನ್ನ ಕಾಮನ್ ಫ್ರೆಂಡ್, ಸುಶಾಂತ್ ಸಾವಿನ ಸುದ್ದಿ ಓಡಾಡುತ್ತಿದೆ, ನೀನು ಅವನ ಜೊತೆಗಿದ್ದರೆ ಇದು ರೂಮರ್ಸ್ ಎಂದು ಸ್ಟೇಟ್‌ಮೆಂಟ್ ಕೊಡಲು ಹೇಳು ಎಂದಿದ್ದರು. ಆಗ ನನಗೆ ಏನೋ ತಪ್ಪಾಗಿದೆ ಎಂದು ತಿಳಿಯಿತು. ಸ್ವಲ್ಪ ಹೊತ್ತಲ್ಲಿ ಸುಶಾಂತ್ ಸಾವು ದೃಢಪಟ್ಟಿತು ಎಂದು ಹೇಳಿದ್ದಾರೆ.
ಡ್ರಗ್ಸ್ ಡೀಲಿಂಗ್: ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ವಿರುದ್ಧ ಕೇಸ್
ನನ್ನ ಮನಸು ಒಡೆಯಿತು. ನನ್ನ ಜೀವನದ ಪ್ರೀತಿ ನನ್ನಿಂದ ದೂರ ಹೋಯಿತು. ನಾನು ಸತ್ಯ ಹೇಳುತ್ತಿದ್ದೇನೆ, ಸುಶಾಂತ್ ಎಲ್ಲೋ ನನ್ನ ಜೊತೆಗಿದ್ದಾನೆ ಎಂಬುದೇ ನನ್ನ ಶಕ್ತಿ ಎಂದಿದ್ದಾರೆ.
ಪ್ರತಿ ಕಥೆಗೂ ಎರಡು ಭಾಗವಿರುತ್ತದೆ. ನೀವು ಒಂದು ಭಾಗವನ್ನು ಮಾತ್ರ ಕೇಳುತ್ತಿದ್ದೀರಿ. ನಾನು ಇಷ್ಟಪಡುತ್ತಿದ್ದ ವ್ಯಕ್ತಿಗೆ ಏನಾದರೂ ಮಾಡುವ ಉದ್ದೇಶವಿಲ್ಲ. ಆತನಿಲ್ಲದೆ ಬದುಕುವುದು ಕಷ್ಟವಾಗುತ್ತಿದೆ. ಲಾಜಿಕ್ ಅರ್ಥ ಮಾಡ್ಕೊಳ್ಳಿ ಎಂದಿದ್ದಾರೆ.
ಸುಶಾಂತ್ ಮನೆ ಬಿಡುವ ಮುನ್ನ 8 ಹಾರ್ಡ್ ಡ್ರೈವ್ ನಾಶ ಮಾಡಿದ್ದ ರಿಯಾ
28 ವರ್ಷದ ರಿಯಾ ಸುಮಾರು ಒಂದೂವರೆ ವರ್ಷ ಸುಶಾಂತ್ ಜೊತೆ ಬದುಕಿದ್ದು, ಆತ ಸೌಮ್ಯ ಸ್ವಭಾವದವನಾಗಿದ್ದಾರೆ ಎಂದಿದ್ದಾರೆ. ನನಗೆ ಈಗಲೂ ಆತನ ಸಾವಿ ನಂಬಲಾಗುತ್ತಿಲ್ಲ. ಆತ ನಾನು ಭೇಟಿ ಮಾಡಿದ ಅತ್ಯಂತ ಒಳ್ಳೆಯ ಯುವಕನಾಗಿದ್ದ. ಅತನಿಗೆ ಸಮಾಜ ಸೇವೆ ಮಾಡಬೇಕಿತ್ತು. ಆತ ನಿಜಕ್ಕೂ ಗ್ರೇಟ್ ಬಾಯ್‌ಫ್ರೆಂಡ್. ಆತ ನನ್ನನ್ನು ನೋಡಿಕೊಂಡ, ನನಗೆ ಸಲಹೆ ಕೊಟ್ಟ, ಸಣ್ಣ ಹಳ್ಳಿಯಿಂದ ಬಂದು ಆತನ ಸಾಧಿಸಿದ ಬಗ್ಗೆ ನನಗೆ ಆತನ ಬಗ್ಗೆ ಹೆಮ್ಮೆ ಇದೆ. ನಮ್ಮ ಸಂಬಂಧ ಒಂದು ದಂತಕಥೆಯಂತಿತ್ತು, ನಮ್ಮಲ್ಲೂ ಸಮಸ್ಯೆಗಳಿದ್ದವು ಎಂದಿದ್ದಾರೆ.