ಟೈಟ್ ಬಟ್ಟೆ, ಹೈ ಹೀಲ್ಸ್ ಧರಿಸಿ ಓಡಾಡಲು ಕಷ್ಟಪಟ್ಟ ಕಾಜೋಲ್; 'ಈ ಶೋಕಿ ಬೇಕಿತ್ತಾ' ಎಂದು ಕಾಲೆಳೆದ ನೆಟ್ಟಿಗರು

Published : Apr 17, 2023, 11:50 AM IST
ಟೈಟ್ ಬಟ್ಟೆ, ಹೈ ಹೀಲ್ಸ್ ಧರಿಸಿ ಓಡಾಡಲು ಕಷ್ಟಪಟ್ಟ ಕಾಜೋಲ್; 'ಈ ಶೋಕಿ ಬೇಕಿತ್ತಾ' ಎಂದು ಕಾಲೆಳೆದ ನೆಟ್ಟಿಗರು

ಸಾರಾಂಶ

ಟೈಟ್ ಬಟ್ಟೆ, ಹೈ ಹೀಲ್ಸ್ ಧರಿಸಿ ಓಡಾಡಲು ಕಷ್ಟಪಟ್ಟ ಕಾಜೋಲ್‌ಗೆ 'ಈ ಶೋಕಿ ಬೇಕಿತ್ತಾ' ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.  

ಬಾಲಿವುಡ್ ಸ್ಟಾರ್ ನಟಿ ಕಾಜೋಲ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಮಗಳ ವಿಚಾರಕ್ಕೆ ಕಾಜೋಲ್ ಸದ್ದು ಮಾಡುತ್ತಿರುತ್ತಾರೆ. 90ರ ದಶಕದ ಸೆನ್ಸೇಷನ್ ಕಾಜೋಲ್ ಇದೀಗ ಸಿನಿಮಾದಿಂದ ದೂರ ಇದ್ದರೂ ಆಗಾಗ ಗಮನ ಸೆಳೆಯುತ್ತಿರುತ್ತಾರೆ. ಅಪರೂಪಕ್ಕೆ ಸಿನಿಮಾ ಮಾಡುವ ಕಾಜೋಲ್ ಹೆಚ್ಚಾಗಿ ಫ್ಯಾಷನ್ ಈವೆಂಟ್, ಪ್ರಶಸ್ತಿ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಪತ್ನಿ ಕಾಜೋಲ್ ತನ್ನ ಅದ್ಭುತ ನಟನೆ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಅಭಿಮಾನಿಗಳ ಸಂಖ್ಯೆ ಕಮ್ಮಿಯಾಗಿಲ್ಲ. 

ಇತ್ತೀಚೆಗೆ ನಟಿ ಕಾಜೋಲ್ ಟೈಟ್ ಬಟ್ಟೆ, ಹೈ ಹೀಲ್ಸ್ ಧರಿಸಿ ಓಡಾಡಲು ಕಷ್ಟ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಇದೆಲ್ಲಾ ಬೇಕಿತ್ತಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಟ್ರೋಲ್‌ಗಳಿಗೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳದ ಕಾಜೋಲ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. 

ಇತ್ತೀಚಿಗಷ್ಟೆ ಕಾಜೋಲ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಮಿಗುವ ಉದ್ದದ ಗೌನ್ ಧರಿಸಿದ್ದರು. ಕಾಜೋಲ್ ಧರಿಸಿದ್ದ ಬಟ್ಟೆ ಸಿಕ್ಕಾಪಟ್ಟೆ ಬಿಗಿಯಾಗಿತ್ತು. ಜೊತೆಗೆ ಹೈ ಹೀಲ್ಸ್ ಧರಿಸಿದ್ದರು. ಪಾಪರಾಜಿಗಳ ಮುಂದೆ ಪೋಸ್ ನೀಡಿದ ಕಾಜೋಲ್ ಅಲ್ಲಿಂದ ಮುಂದೆ ನಡೆದುಕೊಂಡು ಹೋಗಲು ಹೆಣಗಾಡುತ್ತಿದ್ದರು. ಕಷ್ಟಪಟ್ಟು ಮುಂದೆ ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

ಕಾಜೋಲ್ ಸಿನಿಮಾ ವಿಚಾರಕ್ಕೆ ಬರುವುದಾರೆ ಅಪರೂಪಕ್ಕೆ ಒಂದು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕೊನೆಯದಾಗಿ ಕಾಜೋಲ್ ಸಲಾಮ್ ವೆಂಕಿ ಸಿನಿಮಾದಲ್ಲಿ ನಟಿಸಿದ್ದರು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಲು ವಿಫಲವಾಗಿತ್ತು. ಸಿನಿಮಾ ಜೊತೆಗೆ ಕಾಜೋಲ್ ಒಟಿಟಿ ಸೀರಿಸ್ ಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಲಸ್ಟ್ ಸ್ಟೋರಿಸ್-2 ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.

Nysa Devgan: ನೈಸಾ, ನಿಶಾ, ನಿಶ್ಸಾ, ನ್ಯಾಸಾ... ತಪ್ಪಾದ ಹೆಸ್ರು ಕೇಳಿ ಸುಸ್ತಾಗೋದ್ರು ಕಾಜೋಲ್​ ಪುತ್ರಿ!

ಬೆಳ್ಳಗಾಗಿದ್ದು ಹೇಗೆ ಎಂದ ಕಾಜೋಲ್

ಡಸ್ಕಿ ಸುಂದರಿ ಕಾಜೋಲ್ ಬೆಳ್ಳಗಾಗಿದ್ದು ಹೇಗೆ ಎಂದು ಇತ್ತೀಚೆಗಷ್ಟೆ ಬಹಿರಂಗ ಪಡಿಸಿದರು. 'ನಾನು ಬೆಳ್ಳಗೆ ಬದಲಾಗಲು ಸಾಕಷ್ಟು ಚಿಕಿತ್ಸೆಗಳನ್ನು ಪಡೆದುಕೊಂಡಿದ್ದೇನೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ.  ಆದರೆ ಅದು ಶುದ್ಧ ಸುಳ್ಳು' ಎಂದು ಹೇಳಿದ್ದಾರೆ. ಹಿಂದೆಲ್ಲಾ  'ಕಪ್ಪಗಿದ್ದಾಳೆ. ದಪ್ಪ ಇದ್ದಾಳೆ. ಯಾವಾಗಲೂ ಕನ್ನಡಕ ಹಾಕಿಕೊಂಡಿರುತ್ತಾಳೆ' ಎಂದೆಲ್ಲಾ ಆಡಿಕೊಳ್ಳುತ್ತಿದ್ದರು. ಆದರೆ ನಾನು ನನ್ನ ಬಣ್ಣದ ಬಗ್ಗೆ ಯಾವಾಗಲೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ, ಆಡಿಕೊಳ್ಳುವವರ ಬಾಯನ್ನು ಮುಚ್ಚಿಸಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು, ಅಂಥ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಂಡರೆ ಬದುಕಲು ಆಗುವುದಿಲ್ಲ. ಆದರೆ ಈಗ ಬೆಳ್ಳಗಾಗಲು ಕಾರಣವೂ ಇದೆ. ಆದರೆ ಅದು ಶಸ್ತ್ರಚಿಕಿತ್ಸೆಯಂತೂ ಅಲ್ಲ' ಎಂದಿದ್ದಾರೆ.

ನೈಸಾ ಜೊತೆ ಕಾಜೋಲ್‌ ಫೋಟೋಶೂಟ್‌; ಅಮ್ಮ ಮಗಳ ಜೋಡಿಗೆ ಹಾಟ್ ಎಂದ ನೆಟ್ಟಿಗರು!

'10-12 ವರ್ಷಗಳ ಹಿಂದೆ ನಾನು ಹೆಚ್ಚು ಹೆಚ್ಚು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೆ. ಅದಕ್ಕಾಗಿ ಹೊರಗಡೆ ಸುತ್ತಾಡುತ್ತಿದ್ದೆ. ಬಿಸಿಲು- ಧೂಳು ಎನ್ನಲೇ ಶೂಟಿಂಗ್​ನಲ್ಲಿ ಪಾಲ್ಗೊಳ್ಳಬೇಕಿತ್ತು. ಹಾಗಾಗಿ ನನ್ನ ಚರ್ಮ ಕಪ್ಪಗಾಗಿತ್ತು. ಆದರೆ ಕಳೆದ 10 ವರ್ಷಗಳಿಂದ ನಾನು ಮನೆಯಲ್ಲಿ ಇದ್ದೇನೆ.  ಸೂರ್ಯನ ಕಿರಣಗಳಿಂದ ದೂರ ಇರುವುದರಿಂದ ಸ್ಕಿನ್ ಕಲರ್ ಬಂದಿದೆ. ಅಷ್ಟೇ, ಅದು ಬಿಟ್ಟು ನಾನು ಯಾವುದೇ ಸರ್ಜರಿ ಮಾಡಿಸಿಕೊಳ್ಳಲಿಲ್ಲ' ಎಂದು ಹೇಳಿದ್ದರು.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!