Happy Birthday Priyanka Chopra: 'ದೇಸಿಗರ್ಲ್' ರಿಜೆಕ್ಟ್ ಮಾಡಿದ್ದ ಈ ಸಿನಿಮಾಗಳು ಸೂಪರ್ ಹಿಟ್

By Shruiti G KrishnaFirst Published Jul 18, 2022, 1:56 PM IST
Highlights

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾಗೆ ಇಂದು (ಜುಲೈ 18) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಮತ್ತು ಹಾಲಿವುಡ್‌ನಲ್ಲೂ ಮಿಂಚುತ್ತಿರುವ ನಟಿ ಪ್ರಿಯಾಂಕಾ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. 

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾಗೆ ಇಂದು (ಜುಲೈ 18) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಮತ್ತು ಹಾಲಿವುಡ್‌ನಲ್ಲೂ ಮಿಂಚುತ್ತಿರುವ ನಟಿ ಪ್ರಿಯಾಂಕಾ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. ನಿಕ್ ಜೋನಸ್ ಮದುವೆಯಾದ ಬಳಿಕ ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿ ನೆಲೆಸಿದ್ದಾರೆ. ಅಂದಹಾಗೆ ಇಂದು ಪ್ರಿಯಾಂಕಾಗೆ 40ನೇ ವರ್ಷದ ಹುಟ್ಟುಹಬ್ಬ. 40ರಲ್ಲೂ ಯುವತಿಯರು ಅಚ್ಚರಿ ಪಡುವಹಾಗಿರುವ ಪ್ರಿಯಾಂಕಾ ಸಖತ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ಸ್ಟೈಲಿಶ್ ಸ್ಟಾರ್ ಪ್ರಿಯಾಂಕಾ ಸದ್ಯ ಹೆಣ್ಣುಮಗುವಿನ ತಾಯಿ. ಪ್ರಿಯಾಂಕಾ ಮತ್ತು ನಿಕ್ ಜೋನಸ್ ದಂಪತಿ ಈ ವರ್ಷ ಬಾಡಿಗೆ ತಾಯಿ ಮೂಲಕ ಹೆಣ್ಣಮಗುವನ್ನು ಸ್ವಾಗತಿಸಿದ್ದಾರೆ. ಮಗುವಿಗೆ ಮಾಲ್ತಿ ಮೇರಿ ಎಂದು ನಾಮಕರಣ ಮಾಡಿದ್ದಾರೆ. 

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಿಯಾಂಕಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ವಿಶ್ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪ್ರಿಯಾಂಕಾ ಸದ್ಯ ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಕೊನೆಯದಾಗಿ ಪ್ರಿಯಾಂಕಾ ಹಿಂದಿಯಲ್ಲಿ ವೈಟ್ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಂದಹಾಗೆ ಪ್ರಿಯಾಂಕಾ ಸಾಕಷ್ಟು ಹಿಂದಿ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರು. ಪಿಸಿ ತಿರಸ್ಕರಿದ್ದ ಸಿನಿಮಾಗಳು ಸೂಪರ್ ಹಿಟ್ ಆಗಿವೆ. 

ಕಾಕ್ಟೈಲ್ 

ಕಾಕ್ಟೈಲ್  ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ಪ್ರಿಯಾಂಕಾ ಚೋಪ್ರಾ. ಆದರೆ ಪಿಸಿ ತಿರಸ್ಕರಿಸಿದ ಕಾರಣ ಆ ಸಿನಿಮಾ ದೀಪಿಕಾ ಬಳಿ ಹೋಯಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ದೀಪಿಕಾಗೆ ಸಿನಿ ಬದುಕಿಗೆ ಮತ್ತಷ್ಟು ಮೈಲೇಜ್ ತಂದು ಕೊಟ್ಟಿತು. 

ಸುಲ್ತಾನ್ 

ಸುಲ್ತಾನ್ ಸಿನಿಮಾಗೂ ಮೊದಲು ಆಯ್ಕೆಯಾಗಿದ್ದು ಪ್ರಿಯಾಂಕಾ ಚೋಪ್ರಾ. ಆದರೆ ಪ್ರಿಯಾಂಕಾ ಈ ಸಿನಿಮಾವನ್ನು ತಿರಸ್ಕರಿಸಿದರು. ಸಲ್ಮಾನ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅಂದಹಾಗೆ ಈ ಪ್ರಿಯಾಂಕಾ ತಿರಸ್ಕರಿಸಿದ ಈ ಸಿನಮಾ ನಂತರ ಅನುಷ್ಕಾ ಶರ್ಮಾ ಬಳಿ ಹೋಯಿತು. ಅನುಷ್ಕಾ ಸುಲ್ತಾನ್ ನಲ್ಲಿ ನಾಯಕಿಯಾಗಿ ಮಿಂಚಿದರು. 

ರೋಬೋಟ್

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸಲು ಯಾರು ಇಲ್ಲ ಅಂತಾರೆ ಹೇಳಿ? ಆದರೆ ಪ್ರಿಯಾಂಕಾ ಚೋಪ್ರಾ ಹಾಗಲ್ಲ. ಸೂಪರ್ ಹಿಟ್ ರೊಬೊಟ್ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ನಿರಾಕರಿಸಿದ್ದರು. ಪ್ರಿಯಾಂಕಾ ರಿಜೆಕ್ಟ್ ಮಾಡಿದ ಬಳಿಕ ಐಶ್ವರ್ಯಾ ರೈ ಅವರನ್ನು ಸಿನಿಮಾತಂಡ ಅಪ್ರೋಚ್ ಮಾಡಿತ್ತು. ಐಶ್ವರ್ಯಾ ಈ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದರು. ಶಂಕರ್ ಸಾರಥ್ಯದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. ಬಾಕ್ಸ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತು.

ಸೌಂದರ್ಯದಲ್ಲಿ ಸೊಸೆಗೆ ಸ್ವರ್ಧೆ ನೀಡುವ ಪ್ರಿಯಾಂಕಾ ಚೋಪ್ರಾ ಅತ್ತೆ; ಇಬ್ಬರ ಏಜ್‌ಗ್ಯಾಪ್‌ ಗೊತ್ತಾ?

ರೇಸ್ -2

 ಪ್ರಿಯಾಂಕಾ ರಿಜೆಕ್ಟ್ ಮಾಡಿದ್ದ ಮತ್ತೊಂದು ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ಮಿಂಚಿದ್ದರು. ರೇಸ್-2 ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಪ್ರಿಯಾಂಕಾ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಪ್ರಿಯಾಂಕಾ ಬದಲಿಗೆ ದೀಪಿಕಾ ನಾಯಕಿಯಾಗಿ ಮಿಂಚಿದರು. 

ಮತ್ತೆ ಬಿಕಿನಿಯಲ್ಲಿ ಮಿಂಚಿದ ಪ್ರಿಯಾಂಕಾ; ನಿಕ್ ಜೋನಸ್ ಜೊತೆ ಬೀಚ್‌ನಲ್ಲಿ ಮಸ್ತ್ ಮಜಾ

ಭಾರತ್ 

ಸುಲ್ತಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಲು ಹಿಂದೇಟು ಹಾಕಿದ್ದ ಪ್ರಿಯಾಂಕಾಗೆ ಭಾರತ್ ಸಿನಿಮಾ ಮೂಲಕ ಮತ್ತೊಂದು ಅವಕಾಶ ನೀಡಲಾಯಿತು. ಆದರೆ ಪ್ರಿಯಾಂಕಾ ಭಾರತ್ ಸಿನಿಮಾವನ್ನು ಮುಲಾಜಿಲ್ಲದೆ ರಿಜೆಕ್ಟ್ ಮಾಡಿದರು. ಪ್ರಿಯಾಂಕಾ ಆಗಲೇ ಹಾಲಿವುಡ್ ಗೆ ಹಾರಿದ್ದರು. ಭಾರತ್ ಮೂಲಕ ಮತ್ತೆ ವಾಪಾಸ್ ಆಗುತ್ತಿದ್ದಾರೆ ಎಂದು ಅಭಿಮಾನಿಗಳು ಸಹ ಖುಷ್ ಆಗಿದ್ದರು. ಆದರೆ ಪ್ರಿಯಾಂಕಾ ರಿಜೆಕ್ಟ್ ಮಾಡುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಪ್ರಿಯಾಂಕಾ ಬದಲು ಕತ್ರಿನಾ ಕೈಫ್ ನಾಯಕಿಯಾಗಿ ಮಿಂಚಿದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು.

   


 

click me!