ಸೀರೆ ನೀನೆ ಉಟ್ಟಿದ್ದಾ? ಮಗಳ ಫೋಟೋಗೆ ಶಾರುಖ್ ಕಾಮೆಂಟ್, ಸುಹಾನಾ ಉತ್ತರ ಹೀಗಿತ್ತು

Published : Oct 23, 2022, 12:10 PM IST
ಸೀರೆ ನೀನೆ ಉಟ್ಟಿದ್ದಾ? ಮಗಳ ಫೋಟೋಗೆ ಶಾರುಖ್ ಕಾಮೆಂಟ್, ಸುಹಾನಾ ಉತ್ತರ ಹೀಗಿತ್ತು

ಸಾರಾಂಶ

ಬಾಲಿವುಡ್ ಸ್ಟಾರ್ಸ್ ದೀಪಾವಳಿಯ ಸಂಭ್ರಮದಲ್ಲಿದ್ದಾರೆ. ಭೂಮಿ ಪಡ್ನೆಕರ್ ಇತ್ತೀಚಿಗಷ್ಟೆ ದೀಪಾವಳಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಸುಹಾನಾ ಖಾನ್ ಸೀರೆ ಧರಿಸಿ ಆಗಮಿಸಿದ್ದರು. 

ಬಾಲಿವುಡ್ ಸ್ಟಾರ್ಸ್ ದೀಪಾವಳಿಯ ಸಂಭ್ರಮದಲ್ಲಿದ್ದಾರೆ. ಭೂಮಿ ಪಡ್ನೆಕರ್ ಇತ್ತೀಚಿಗಷ್ಟೆ ದೀಪಾವಳಿ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್‌ನ ಅನೇಕ ಸ್ಟಾರ್ಸ್ ಪಾರ್ಟಿಗೆ ಹಾಜರಾಗಿದ್ದರು. ವಿವಿಧ ರೀತಿಯ ಸ್ಟೈಲಿಶ್ ಡ್ರೆಸ್‌ನಲ್ಲಿ ಮಿರ ಮಿಂಚುತ್ತಿದ್ದ ನಟಿಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಬಾಲಿವುಡ್ ನಟಿಯರ ಸ್ಟೈಲಿಸ್ ಲುಕ್‌ಗಳ ಪೈಕಿ ಕಿಂಗ್ ಖಾನ್ ಶಾರುಖ್ ಖಾನ್ ಮಗಳು ಹೈಲೆಟ್ ಆಗಿದ್ದಾರೆ. ಹೌದು ಸೀರೆಯಲ್ಲಿ ಮಿಂಚಿದ ಶಾರುಖ್ ಪುತ್ರಿ ಸುಹಾನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೀಪಾವಳಿ ಪಾರ್ಟಿಗೆ ಸೀರೆ ಧರಿಸಿ ಬಂದಿದ್ದ ಸುಹಾನಾ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. 

ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಸೀರೆಯನ್ನು ಸುಹಾನಾ ಧರಿಸಿದ್ದರು. ಈ ಸೀರೆಯ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬಂದಿವೆ. ಅನೇಕ ಕಾಮೆಂಟ್‌ಗಳಲ್ಲಿ ಶಾರುಖ್ ಖಾನ್ ಕಾಮೆಂಟ್ ಅಲ್ಲರ ಗಮನ ಸೆಳೆದಿದೆ. ಮಗಳ ಫೋಟೋಗೆ ಪ್ರತಿಕ್ರಿಯೆ ನೀಡಿದ ಶಾರುಖ್ ಈ ಸೀರೆಯನ್ನು ನೀನೆ ಉಟ್ಟಿದ್ದಾ ಎಂದು ಪ್ರಶ್ನಿಸಿದ್ದಾರೆ. ಮಗಳ ಫೋಟೋ ನೋಡಿ ಕಿಂಗ್ ಖಾನ್, 'ತುಂಬಾ ಸುಂದರವಾಗಿದೆ ಮತ್ತು ಆಕರ್ಷಕವಾಗಿ ಕಾಣುತ್ತೀಯ. ಸೀರೆಯನ್ನು ನೀನೆ ಉಟ್ಟುಕೊಂಡಿದ್ದಾ?' ಎಂದು ಕೇಳಿದ್ದಾರೆ. 

ಅಪ್ಪನ ಪ್ರಶ್ನೆಗೆ ಉತ್ತರ ನೀಡಿರುವ ಸುಹಾನಾ, ಲವ್ ಯೂ, ಉಫ್..ನಾನು ಇದನ್ನು ಉಟ್ಟಿಕೊಂಡಿಲ್ಲ, ಗೌರಿ ಖಾನ್ ಉಡಿಸಿದ್ದಾರೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಗೌರಿ ಖಾನ್ ಕೂಡ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. 

ಬಾಡಿಕಾನ್ ಡ್ರೆಸ್ಸಲ್ಲಿ ಸುಹಾನಾ ಖಾನ್; ಶಾರುಖ್‌ ಮಗಳ ಪರ್ಫೇಕ್ಟ್‌ ಫಿಗರ್‌ಗೆ ಫ್ಯಾನ್ಸ್‌ ಫಿದಾ

ಅಂದಹಾಗೆ ಸುಹಾನಾ ಫೋಟೋಗೆ ಅನೇಕ ಸ್ಟಾರ್ಸ್ ಕಾಮೆಂಟ್ ಮಾಡಿದ್ದಾರೆ. ಇನ್ನು ಸುಹಾನಾ ಫ್ರೆಂಡ್ಸ್ ಅನನ್ಯಾ ಪಾಂಡೆ, ಶನಯ ಕಪೂರ್, ಸಂಜಯ್ ಕಪೂರ್, ಮಸಬಾ ಗುಪ್ತಾ ಸೇರಿದಂತೆ ಅನೇಕರು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟಿಂಗ್ ಮಾಡ್ಬೇಡ; ಪುತ್ರಿ ಸುಹಾನಾಗೆ ಶಾರುಖ್ ಪತ್ನಿ ಸಲಹೆ

ಶಾರುಖ್ ಖಾನ್ ಪುತ್ರಿ ಸುಹಾನಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸರಮಿ ಮೂಲಕ ಸುಹಾನಾ ಒಟಿಟಿಗೆ ಪದಾರ್ಪಣೆ ಮಾಡಿದ್ದಾರೆ. ಜೋಯಾ ಅಖ್ತಾರ್ ನಿರ್ದೇಶನದ ದಿ ಆರ್ಚೀನ್ ಸರಣಿ ಮೂಲಕ ಸುಹಾನಾ ಮೊದಲ ಬಾರಿಗೆ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಅಂದಹಾಗೆ ಈ ಸರಣಿಯಲ್ಲಿ ಅನೇಕ ಸ್ಟಾರ್ ಕಿಡ್ ನಟನೆ ಮಾಡಿದ್ದಾರೆ. ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್, ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಸೇರಿದಂತೆ ಅನೇಕರು ನಟಿಸಿದ್ದಾರೆ. ಅಂದಹಾಗೆ ಈ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸ್ಟಾರ್ ಕಿಡ್ಸ್ ನಟಿಸಿರುವ ವೆಬ್ ಸರಣಿ ನೋಡಲು ಮುಂದಿನ ವರ್ಷದ ವರೆಗೂ ಕಾಯಲೇ ಬೇಕು.   
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?