Robert Downey Jr: ಹಾಲಿವುಡ್​ ನಟ ತಿಂದೆಸೆದ ಚ್ಯೂಯಿಂಗ್​ಗಮ್​ ಹರಾಜಿಗೆ: ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

By Suvarna News  |  First Published Mar 31, 2023, 6:47 PM IST

ಹಾಲಿವುಡ್​ನ ನಟ ರಾಬರ್ಟ್ ಡೌನಿ ಜೂನಿಯರ್ ತಿಂದು ಎಸೆದ ಚ್ಯೂಯಿಂಗ್​ ಗಮ್​ ಹರಾಜಿಗೆ ಇಡಲಾಗಿದೆ. ಇದರ ಆರಂಭಿಕ ಬೆಲೆ ಎಷ್ಟು ಗೊತ್ತಾ? 


ಸೆಲೆಬ್ರಿಟಿಗಳು (Celebrity) ಬಳಸಿರುವ ಬಟ್ಟೆ, ವಸ್ತುಗಳೆಂದರೆ ಅವರ ಫ್ಯಾನ್ಸ್​ಗೆ ಅಮೃತ ಇದ್ದ ಹಾಗೆ. ದೇವರ ಪ್ರಸಾದ ಎಂಬಂತೆ ಕಣ್ಣಿಗೆ ಒತ್ತಿಕೊಂಡು ಇಟ್ಟುಕೊಳ್ಳುತ್ತಾರೆ. ದೇವರ ವಸ್ತುಗಳನ್ನು ಹರಾಜು ಮಾಡಿದಾಗ ಅದನ್ನು ಭಕ್ತಿಯಿಂದ ಮನೆಯಲ್ಲಿ ಇಟ್ಟುಕೊಂಡರೆ, ತಮ್ಮ ನೆಚ್ಚಿನ ನಾಯಕರು ಬಳಸಿ ಬಿಟ್ಟ ವಸ್ತುಗಳನ್ನು ಪ್ರೆಸ್ಟೀಜ್​ ಸಂಕೇತವಾಗಿ ಅಭಿಮಾನಿಗಳು ಇಟ್ಟುಕೊಳ್ಳುವುದು ಉಂಟು. ಇದಕ್ಕಾಗಿ ದುಬಾರಿ ಬೆಲೆಯನ್ನು ಬೇಕಾದರೂ ತೆರುತ್ತಾರೆ. ಚಿತ್ರ ನಟ-ನಟಿಯರು, ಕ್ರಿಕೆಟ್​ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಳಸಿ ಬೀಸಾಕುವ ವಸ್ತುಗಳಾದರೂ ಸರಿ, ಅದನ್ನು ಧನ್ಯತಾ ಭಾವದಿಂದ ದುಬಾರಿ ಬೆಲೆ ಕೊಟ್ಟು ಸಂಗ್ರಹಿಸಿ ಇಟ್ಟುಕೊಳ್ಳುವುದು ಉಂಟು. ಅಂಥದ್ದೇ ಒಂದು ಸುದ್ದಿ ಈಗ ಅಮೆರಿಕದ ಹಾಲಿವುಡ್​ (Hollywood) ನಿಂದ ಬಂದಿದೆ. ಅಲ್ಲಿಗೆ ಇಂಥ ಕ್ರೇಜ್​ ವಿಶ್ವಮಟ್ಟದಲ್ಲಿಯೂ ಇದೆ ಎನ್ನುವುದು ಖಚಿತವಾಗಿದೆ. 

ಹಾಲಿವುಡ್​ನ ನಟ ರಾಬರ್ಟ್ ಡೌನಿ ಜೂನಿಯರ್ (Robert Downey Jr) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ, ಮಾರ್ವೆಲ್ (Marvel) ಚಲನಚಿತ್ರಗಳಲ್ಲಿ ಟೋನಿ ಸ್ಟಾರ್ಕ್  ಅಥವಾ ಐರನ್ ಮ್ಯಾನ್ (Iron Man) ಪಾತ್ರದಿಂದ ಇವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದ್ದು, ಇವರನ್ನು ಐರನ್​ ಮ್ಯಾನ್​ ಎಂದೇ ಕರೆಯಲಾಗುತ್ತದೆ. ಈಗ ವಿಷಯ ಏನಪ್ಪಾ ಎಂದರೆ, ರಾಬರ್ಟ್ ಡೌನಿ ಜೂನಿಯರ್‌ ಅವರು ಅಗಿದಿದ್ದ ಚ್ಯೂಯಿಂಗ್​ ಗಮ್​ (Chewing Gum) ಅನ್ನು ಮಾರಾಟಕ್ಕೆ ಇಡಲಾಗಿದೆ. ಯಾರಾದರೂ ಅಗಿದಿರುವ ಚ್ಯೂಯಿಂಗ್​ ಗಮ್​ ಹೀಗೆ ಮಾರಾಟಕ್ಕಾ ಎಂದು ಮೂಗು ಮುರಿಯಬೇಡಿ. ಅಲ್ಲಿಯೇ ಇರುವುದು ವಿಶೇಷತೆ!  ರಾಬರ್ಟ್ ಡೌನಿ ಜೂನಿಯರ್‌ ಜಗಿದಿರುವ ಚ್ಯೂಯಿಂಗ್​ ಗಮ್​  ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ. ಜಾನ್ ಫಾವ್ರೂ ಅವರ ಹಾಲಿವುಡ್ ವಾಕ್ ಆಫ್ ಫೇಮ್ ಸಮಾರಂಭದಲ್ಲಿ ರಾಬರ್ಟ್ ಡೌನಿ ಜೂನಿಯರ್‌  ಕಾಣಿಸಿಕೊಂಡಾಗ, ಇಬೇ ಬಳಕೆದಾರರು ಇವರು ಉಗುಳಿದ ಚೂಯಿಂಗ್ ಗಮ್ ಅನ್ನು ತೆಗೆದುಕೊಂಡಿದ್ದಾರೆ. ಇದನ್ನೀಗ ಹರಾಜಿಗೆ ಇಡಲಾಗಿದೆ.

Tap to resize

Latest Videos

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!

ಅಗಿದು ಬಿಟ್ಟಿರುವ ಚ್ಯೂಯಿಂಗ್ ಗಮ್​ ಅನ್ನು ಎಬಾಯ್ ಬಳಕೆದಾರ ಸಂಗ್ರಹಿಸಿ ಇಟ್ಟಿದ್ದು, ಇದೀಗ  ಇ-ಬೇ ವೆಬ್​ಸೈಟ್​ನಲ್ಲಿ  ಹರಾಜಿಗೆ ಇಟ್ಟಿದ್ದಾರೆ. ಹಲೋ! ಹಾಲಿವುಡ್ ವಾಕ್ ಆಫ್ ಫೇಮ್‌ಗೆ ಪಟ್ಟಿಗೆ ಪ್ರಸಿದ್ಧ ನಟ ಮತ್ತು ನಿರ್ಮಾಪಕ ಜಾನ್ ಫಾವ್ರೊ ಅವರನ್ನು ಸೇರಿಸುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಈ ಘಟನೆಯ ಸಮಯದಲ್ಲಿ, ರಾಬರ್ಟ್ ಡೌನಿ ಜೂನಿಯರ್ ಸ್ವತಃ ತಮ್ಮ ಗಮ್ ಅನ್ನು ಅವಾರ್ಡ್ ಮೇಲೆ ತಮಾಷೆಗೆ ಇಟ್ಟಿದ್ದರು ನಂತರ ಅದನ್ನು ಅಲ್ಲಿಯೇ ಬಿಟ್ಟರು, ಆ ಗಮ್ ಅನ್ನು ನಾನು ತೆಗೆದುಕೊಂಡೆ. ಈಗ ನಾನು ಡೌನಿ ಅಗೆದ ಗಮ್ ಅನ್ನು ಅದೇ ಸ್ಥಿತಿಯಲ್ಲಿ ಮಾರಾಟ ಮಾಡುತ್ತಿದ್ದೇನೆ. ಇದನ್ನು ಬೇಕಿದ್ದರೆ DNA ಪರೀಕ್ಷೆ ಮಾಡಿ ಖಚಿತಪಡಿಸಿಕೊಳ್ಳಬಹುದು ಎಂದು ಆತ ತಿಳಿಸಿದ್ದಾನೆ. 

undefined

Pratiksha: 'ರೀಲ್ಸ್ ಕ್ವೀನ್' ಎಂದೇ ಖ್ಯಾತಿ ಪಡೆದ ಬಾಲಕಿ ಪಾಲಕರ ಬೈಗುಳಕ್ಕೆ ನೊಂದು ಆತ್ಮಹತ್ಯೆ!

ಒಂದು ವೇಳೆ ನಿಮಗೆ ಇದನ್ನು ಖರೀದಿಸುವ ಆಸೆ ಇದ್ದರೆ ಈ ಬಿಡ್​ನಲ್ಲಿ ನೀವು   40,147 ಅಮೆರಿಕನ್​ ಡಾಲರ್​ ಇಡಬೇಕು. ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು ರೂ 32 ಲಕ್ಷ ರೂ! ಇದೀಗ ಬಿಡ್ಡಿಂಗ್‌ಗಾಗಿ ಪಟ್ಟಿ ಮಾಡಲಾಗಿದ್ದು, ಇದರ ಮೊತ್ತ   ರೂ. 32 ಲಕ್ಷದಿಂದ ಆರಂಭವಾಗಲಿದೆ.  ಬಿಡ್ಡಿಂಗ್ (Bidding) ಏಪ್ರಿಲ್ 1 ರ ಶನಿವಾರದಂದು ಕೊನೆಗೊಳ್ಳಲಿದೆ.  ಅತಿ ಹೆಚ್ಚು ಬಿಡ್ ಮಾಡಿದವರಿಗೆ ಇದನ್ನು ನೀಡಲಾಗುತ್ತದೆ. ಇದನ್ನು ಹೆಚ್ಚು ಬಿಡ್​ ಮಾಡಿದವರಿಗೆ ನೀಡಲಾಗುತ್ತೆ. ಈ ಚೂಯಿಂಗ್​ ಗಮ್​ ಅನ್ನು ಒಂದು ಸಿಲ್ವರ್​ ಕಂಟೇನರ್​ನಲ್ಲಿ (Silver Container) ಹಾಕಿ ನೀಡಲಾಗುತ್ತಂತೆ. 

click me!