ರಣ್ವೀರ್ ಸಿಂಗ್ 'ಗಲ್ಲಿ ಬಾಯ್' ಸಿನಿಮಾದ ಖ್ಯಾತ Rapper ಧರ್ಮೇಶ್ ನಿಧನ

Suvarna News   | Asianet News
Published : Mar 22, 2022, 12:12 PM IST
ರಣ್ವೀರ್ ಸಿಂಗ್ 'ಗಲ್ಲಿ ಬಾಯ್' ಸಿನಿಮಾದ ಖ್ಯಾತ Rapper ಧರ್ಮೇಶ್ ನಿಧನ

ಸಾರಾಂಶ

ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್(Ranveer Singh and Alia Bhatt) ನಟನೆಯ ಸೂಪರ್ ಹಿಟ್ ಗಲ್ಲಿ ಬಾಯ್(Gully Boy) ಸಿನಿಮಾದ ರ್ಯಾಪರ್ ಧರ್ಮೇಶ್ ಪರ್ಮಾರ್(Rapper Dharmesh Parmar) ನಿಧನರಾಗಿದ್ದಾರೆ

ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್(Ranveer Singh and Alia Bhatt) ನಟನೆಯ ಸೂಪರ್ ಹಿಟ್ ಗಲ್ಲಿ ಬಾಯ್(Gully Boy) ಸಿನಿಮಾದ ರ್ಯಾಪರ್ ಧರ್ಮೇಶ್ ಪರ್ಮಾರ್(Rapper Dharmesh Parmar) ನಿಧನರಾಗಿದ್ದಾರೆ. 24 ವರ್ಷದ ಯುವ ರ್ಯಾಪರ್ ಮುಂಬೈನ ಬಹುಭಾಷಾ ಹಿಪ್ ಹಾಪ್ ಗ್ರೂಪ್ ಸ್ವದೇಶಿಯೊಂದಿಗೆ ಅಸೋಸಿಯೇಟ್ ಆಗಿದ್ದರು. ಧರ್ಮೇಶ್ ಪರ್ಮಾರ್ ನಿಧನದ ಸುದ್ದಿಯನ್ನು ಸ್ವದೇಶಿಯ ಲೇಬಲ್ ಅಜಾದಿ ರೆಕಾರ್ಡ್ಸ ಮತ್ತು ಮ್ಯಾನೇಜ್ ಮೆಂಟ್ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದೆ.

ಧರ್ಮೇಶ್ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಆಘಾತ ತಂದಿದೆ. ನಟ ರಣ್ವೀರ್ ಸಿಂಗ್ ಮತ್ತು ಸಿದ್ಧಾಂತ್ ಚತುರ್ವೇದಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಗಲ್ಲಿ ಬಾಯ್ ಸಿನಿಮಾದಲ್ಲಿ ಧರ್ಮೇಶ್ ರ್ಯಾಪ್ ಹಾಡಿಗೆ ಧ್ವನಿಯಾಗಿದ್ದರು. ಧರ್ಮೇಶ್ ಸಾವಿಗೆ ನಿಖರ ಕಾರಣ ಇನ್ನು ಬಹಿರಂಗವಾಗಿಲ್ಲ, ಆದರೆ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ನಟ ರಣ್ವೀರ್ ಸಿಂಗ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಧರ್ಮೇಶ್ ಫೋಟೋ ಶೇರ್ ಮಾಡಿ ಹಾರ್ಟ್ ಬ್ರೇಕ್ ಇಮೋಜಿ ಹಾಕಿ ಸಂತಾಪ ಸೂಚಿಸಿದ್ದಾರೆ. ಇನ್ನೂ ನಟ ಸಿದ್ಧಾಂತ್ ಸಹ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಧರ್ಮೇಶ್ ಜೊತೆ ನಡೆಸಿದ ಸಂಭಾಷಣೆಯ ಸ್ಕ್ರೀನ್ ಶೇಟ್ ಶೇರ್ ಮಾಡಿ ರಿಪ್ ಭಾಯ್ ಎಂದು ನಟ ಸಿದ್ಧಾಂತ್ ಬರೆದುಕೊಂಡಿದ್ದಾರೆ.

ರಣವೀರ್ ಸಿಂಗ್ ಟ್ರೋಲ್‌; ನಟನನ್ನು ಉರ್ಫಿ ಜಾವೇದ್ ಹೋಲಿಸಿದ ಜನ!

ನಿರ್ದೇಶಕಿ ಜೋಯಾ ಅಖ್ತರ್ ಸಾರಥ್ಯದಲ್ಲಿ ಬಂದ ಗಲ್ಲಿ ಬಾಯ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾ ಭಾರತೀಯ ಸ್ಟ್ರೀಟ್ ರ್ಯಾಪರ್ ಗಳಾದ ಡಿವೈನ್ ನಾಜಿ ಅವರ ಜೀವನದ ಸ್ಫೂರ್ತಿ ಪಡೆದ ಚಿತ್ರವಾಗಿತ್ತು. ಮುಂಬೈನ ಧಾರಾವಿ ಕೊಳಗೇರಿಯ ಮಹತ್ವಕಾಂಕ್ಷಿಯ ಸ್ಟ್ರೀಟ್ ರ್ಯಾಪರ್ ಬಗ್ಗೆ ಇರುವ ಕತೆಯಾಗಿದೆ. ಸ್ಟ್ರೀಟ್ ರ್ಯಾಪರ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಮಿಂಚಿದ್ದರು. ರಣ್ವೀರ್ ಗುರು ಆಗಿ ಸಿದ್ಧಾಂತ್ ಚತುರ್ವೇದಿ ಕಾಣಿಸಿಕೊಂಡಿದ್ದರು. ಅಲಿಯಾ ಭಟ್, ಕಲ್ಕಿ ಕೊಚ್ಚಿನ್, ವಿಜಯ್ ವರ್ಮಾ, ಅಮೃತಾ ಸುಭಾಷ್ ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದಾರೆ.

ಈ ಸಿನಿಮಾದಲ್ಲಿ ಅನೇಕ ರ್ಯಾಪರ್ಸ್ ಕೆಲಸ ಮಾಡಿದ್ದರು. ಸುಮಾರು 54ಜನ ರ್ಯಾಪರ್ ಗಳಲ್ಲಿ ಧರ್ಮೇಶ್ ಕೂಡ ಒಬ್ಬರಾಗಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತ್ತು. ದೇಶೀಯ ಬಾಕ್ಸ್ ಆಫೀಸ್ ನಲ್ಲಿ 146 ಕೋಟಿ ರೂಪಾಯಿ ಗಳಿಸಿತ್ತು ಎಂದು ವರದಿಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Celebrity Food: ರಣವೀರ್ ಸಿಂಗ್‌ಗೆ ಬೆಂಗಳೂರಿನ ಚಿರೋಟಿ ಹಾಲು ಸಿಕ್ಕಾಪಟ್ಟೆ ಇಷ್ಟವಂತೆ

ಧರ್ಮೇಶ್ ನಿಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕರಿ ಜೋಯಾ ಅಖ್ತಾರ್, ನೀವು ತುಂಬಾ ಬೇಗ ಹೋಗಿ ಬಿಟ್ರಿ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಾಗಿತ್ತು ಸಾವಿನ ಹಿಂದಿನ ನಿಖರ ಕಾರಣ ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿರ್ದೇಶಕ ಗಿರೀಶ್ ಪುತ್ರ ನಿಧನ

ಇತ್ತೀಚಿಗಷ್ಟೆ ಬಾಲಿವುಡ್ ನ ಖ್ಯಾತ ನಿರ್ದೇಶಖ ಗಿರೀಶ್ ಮಲಿಕ್ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಹೋಳಿ ಆಚರಣೆ ಮಾಡಿ ಮನೆಗೆ ತೆರಳಿದ್ದ ಗಿರೀಶ್ ಪುತ್ರ ಮನ್ನನ್ 5ನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದರು. 17 ವರ್ಷದ ಗಿರೀಶ್ ಪುತ್ರ ಮನ್ನನ್ ಸಾವು ಬಾಲಿವುಡ್ ಗೆ ಶಾಕ್ ನೀಡಿತ್ತು. ಮನ್ನನ್ ಆಸ್ಮಿಕವಾಗಿ ಬಿದ್ದರೋ ಅಥವಾ ಆಹ್ಮಹತ್ಯೆಯೋ ಎನ್ನುವ ಅನುಮಾನ ಮೂಡಿಸಿತ್ತು. ಈ ಬಗ್ಗೆ ತನಿಖೆ ಮುಂದುವರೆಸಿರುವ ಪೊಲೀಸರು ಇದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ.

ಮನ್ನನ್ ತಂದೆ ಗಿರೀಶ್ ಮಲಿಕ್ ಮದ್ಯಪಾನ ಮಾಡುವುದನ್ನು ಬಿಟ್ಟು ತಾಯಿಯ ಜೊತೆ ಸರಿಯಾಗಿ ವರ್ತಿಸು ಎಂದು ಮಗನಿಗೆ ಬೈದ ಕಾರಣ ಕೋಪಕ್ಕೆ 5ನೇ ಮಹಡಿಯಿಂದ ಹಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ.

ಹೋಳಿ ಆಚರಣೆಯ ವೇಳೆ ಮನ್ನನ್ ಮದ್ಯಸೇವಿಸಿದ್ದರು. ಮನೆಗೆ ಹೋದ ಬಳಿಕವೂ ಕುಡಿಯುವದನ್ನು ನಿಲ್ಲಿಸಿರಲಿಲ್ಲ. ಇದನ್ನು ನೋಡಿದ ತಂದೆ ಮೊದಲು ಕುಡಿಯುವುದನ್ನು ನಿಲ್ಲಿಸುವಂತೆ ಗದರಿದ್ದರಂತೆ. ಅಲ್ಲದೆ ತಾಯಿಯ ಜೊತೆ ಸರಿಯಾಗಿ ನಡೆದುಕೊಳ್ಳುವಂತೆ ಬುದ್ದಿವಾದ ಹೇಳಿದ್ದರಂತೆ. ಇದರಿಂದ ಮನನೊಂದ ಮನ್ನನ್ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?