ರಾಜ್ಯಪಾಲರ ಹುದ್ದೆ ಅಲಂಕರಿಸಲಿದ್ದಾರೆಯೇ ನಟ ರಜನೀಕಾಂತ್​? ಸಹೋದರ ಕೊಟ್ಟರು ಈ ಸುಳಿವು

By Suvarna NewsFirst Published Sep 5, 2023, 5:54 PM IST
Highlights

ನಟ ರಜನೀಕಾಂತ್​ ಅವರು ರಾಜ್ಯಪಾಲರ ಹುದ್ದೆ ಅಲಂಕರಿಸಲಿದ್ದಾರೆಯೇ? ಅವರ ಸಹೋದರ ಸತ್ಯನಾರಾಯಣ ಅವರು ಹೇಳಿದ್ದೇನು? 
 

ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೈಲರ್ ಚಿತ್ರಕ್ಕೆ ಯಾವ ರೇಂಜ್ ನಲ್ಲಿ ರೆಸ್ಪಾನ್ಸ್ ಸಿಕ್ಕಿದೆ ಎಂಬುದು ಗೊತ್ತೇ ಇದೆ. ವಿಶ್ವಾದ್ಯಂತ ರೂ.600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಚಿತ್ರ ಇನ್ನೆರಡು ಮೂರು ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಒಟಿಟಿಯಲ್ಲಿ ಮತ್ತೊಮ್ಮೆ ತಲೈವಾ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜೈಲರ್​ ಚಿತ್ರ ಬಿಡುಗಡೆಯಾಗುವ ಮುನ್ನವೇ ಹವಾ ಸೃಷ್ಟಿಸಿದ್ದು ಅದರ ಕಾವಲಾಯ್ಯ ಹಾಡು. ಒಂದೆಡೆ (Rajinikanth) ಅವರ ಅಭಿನಯಕ್ಕೆ ಜನ ಸೋತಿದ್ದರೆ, ಇನ್ನೊಂದೆಡೆ ಕಾವಾಲ ಹಾಡು ಸಿನಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ ಜುಲೈ 6ರಂದು ಈ ಬಿಡುಗಡೆಯಾಗಿತ್ತು.  ಆನ್‌ಲೈನ್‌ನಲ್ಲಿ ಹೊಸ ಪುಳಕ ಉಂಟು ಮಾಡಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ದಿನವೇ 80 ದಶಲಕ್ಷ ವೀಕ್ಷಣೆ ಗಳಿಸಿರುವುದು ಇತಿಹಾಸ. ಈಗಲೂ ಈ ಹಾಡಿನ ಹವಾ ನಿಂತಿಲ್ಲ.  ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಲೇ ಸಾಗಿದೆ. 

ಇದೇ ವೇಳೆ ರಜನಿಕಾಂತ್ ಅವರು ರಾಜ್ಯಪಾಲರಾಗಲಿದ್ದಾರೆ ಎಂದು ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಭಾರೀ ಪ್ರಚಾರ ನಡೆಯುತ್ತಿದೆ. ಈ ಅಭಿಯಾನಕ್ಕೆ ರಜನಿಕಾಂತ್ ಸಹೋದರ ಸತ್ಯನಾರಾಯಣ (Satyanarayana) ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರ ಹುದ್ದೆ ದೇವರ ಕೈಯಲ್ಲಿದೆ ಎಂದು ಅವರು  ಹೇಳಿದ್ದಾರೆ. ಈ ಮಾತನ್ನು ಕೇಳಿದ ಫ್ಯಾನ್ಸ್​ ಖಂಡಿತವಾಗಿಯೂ ರಾಜ್ಯಪಾಲರಾಗಿ ರಜನೀಕಾಂತ್​ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದೇ ಹೇಳುತ್ತಿದ್ದಾರೆ. ಕಳೆದ ಭಾನುವಾರ ಮಧುರೈನಲ್ಲಿ ಮೀನಾಕ್ಷಿ ದೇವಿಯ ದರ್ಶನ ಪಡೆದ ನಂತರ ಸತ್ಯನಾರಾಯಣ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜಕೀಯಕ್ಕೆ ಬರುವುದಿಲ್ಲ ಎಂದು ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರೊಂದಿಗಿನ ರಜನಿ ಭೇಟಿಗೆ ಯಾವುದೇ ರಾಜಕೀಯ ಮಹತ್ವವಿಲ್ಲ ಎಂದು ಅವರು ಹೇಳಿದ್ದಾರೆ.  ರಜನಿಕಾಂತ್​ ಅವರಿಗೆ  ರಾಜ್ಯಪಾಲರ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವೂ ದೇವರ ಕೈಯಲ್ಲಿದೆ ಎಂದು ಹೇಳಿದ್ದಾರೆ.  ರಾಜ್ಯಪಾಲರ ಹುದ್ದೆ ಸಿಗುವ ಭರವಸೆ ನನಗಿಲ್ಲ, ಬಂದರೆ ಖುಷಿಯಾಗುತ್ತೆ ಎಂದರು. ರಾಜ್ಯಪಾಲ ಹುದ್ದೆ ನೀಡಿದರೆ ರಜನಿ ಖಂಡಿತಾ ಒಪ್ಪಿಕೊಳ್ಳುತ್ತಾರೆ ಎಂದೂ ಹೇಳಿದ್ದಾರೆ.  

Latest Videos

ಒಂದೂವರೆ ಕೋಟಿ ರೂ. ಹಂಚೋಕೆ ಆರ್ಡರ್​ ಮಾಡಿದ್ದ ರಜನಿಕಾಂತ್​... ಎಲ್ಲರ ಕಣ್ಣಲ್ಲೂ ಕಣ್ಣೀರ ಧಾರೆ...

ಇತ್ತೀಚೆಗೆ ರಜನಿಕಾಂತ್ ಉತ್ತರ ಭಾರತ ಪ್ರವಾಸ ಮಾಡಿದ್ದರು. ಈ ಆದೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು  ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದಾಗ ಈ ರಾಜ್ಯಪಾಲರ ವಿಚಾರ ಮುನ್ನೆಲೆಗೆ ಬಂದಿದೆ.  

 ರಜನೀಕಾಂತ್​ ಅವರು ಜೈಲರ್​ ಸಿನಿಮಾ ಬಿಡುಗಡೆ ದಿನ ಅದನ್ನು  ವೀಕ್ಷಿಸಿರಲಿಲ್ಲ. ಬದಲಿಗೆ  ಒಂದು ಕಡೆ  ಜೈಲರ್​ ಹವಾ ಸೃಷ್ಟಿಸುತ್ತಿದ್ದರೆ, ಅತ್ತ ರಜನೀಕಾಂತ್​ ಹಿಮಾಲಯ ಪ್ರವಾಸದಲ್ಲಿದ್ದರು. ಚಿತ್ರದ ಬಿಡುಗಡೆಯ ದಿನವೇ ಹಿಮಾಲಯಕ್ಕೆ ಹೋಗಿ ಅಲ್ಲಿ ಸಾಧುಗಳ ದರ್ಶನ ಪಡೆಯುತ್ತಿದ್ದರು. ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜೊತೆಗೂಡಿ ಚಿತ್ರ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಯೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರಿಂದ ಭಾರಿ ಸುದ್ದಿಗೂ ಗ್ರಾಸರಾಗಿದ್ದರು ರಜನೀಕಾಂತ್​. ಸಾಧುಗಳ ಕಾಲಿಗೆ ಬೀಳುವಾಗ ಅವರು ತಮಗಿಂತ ದೊಡ್ಡವರೋ, ಚಿಕ್ಕವರೋ ನೋಡುವುದಿಲ್ಲ, ಇಷ್ಟು ತಿಳಿವಳಿಕೆ ಎಲ್ಲರಿಗೂ ಇದ್ದರೆ ಒಳ್ಳೆಯದು ಎಂದು ತಮ್ಮನ್ನು ಟ್ರೋಲ್​ ಮಾಡುತ್ತಿರುವವರಿಗೆ ತಲೈವಾ ತಿರುಗೇಟು ನೀಡಿದ್ದರು. 

ತಾನು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಸೂಪರ್‌ಸ್ಟಾರ್ ರಜನೀಕಾಂತ್ ಸದ್ದಿಲ್ಲದೆ ಭೇಟಿ

click me!