ಮತ್ತೊಬ್ಬರ ಜೊತೆ ಗಂಡ ಇರಬಾರದು; ವಿಚ್ಛೇದನ ಪಡೆದು ಬಾಯ್‌ಫ್ರೆಂಡ್‌ ಜತೆ ಮಗು ಮಾಡಿಕೊಂಡ ನಟಿ ಕಲ್ಕಿ!

Published : Sep 02, 2023, 02:36 PM ISTUpdated : Sep 02, 2023, 02:38 PM IST
 ಮತ್ತೊಬ್ಬರ ಜೊತೆ ಗಂಡ ಇರಬಾರದು; ವಿಚ್ಛೇದನ ಪಡೆದು ಬಾಯ್‌ಫ್ರೆಂಡ್‌ ಜತೆ ಮಗು ಮಾಡಿಕೊಂಡ ನಟಿ ಕಲ್ಕಿ!

ಸಾರಾಂಶ

ಅನುರಾಗ್ ದೇವ್ ಚಿತ್ರದ ಮೂಲಕವೇ ಎಂಟ್ರಿ ಕೊಟ್ಟು ಅನುರಾಗ್‌ನ ಮದುವೆಯಾಗಿ ವಿಚ್ಛೇದನ ಪಡೆದ ಸ್ಟೋರಿ ಬಿಚ್ಚಿಟ್ಟ ಕಲ್ಕಿ ಕೋಚ್ಲಿನ್

ಗೋಲ್‌ಫಿಶ್ ಚಿತ್ರದಲ್ಲಿ ನಟಿಸಿರುವ ವರ್ಸಟೈಲ್ ನಟಿ ಕಲ್ಕಿ ಕೋಚ್ಲಿನ್ ಇತ್ತೀಚಿಗೆ ಪೂಜಾ ತಲ್ವಾರ್ ಜೊತೆ ನಡೆದ ಸಂದರ್ಶನದಲ್ಲಿ ತಮ್ಮ ಮಾಜಿ ಪತಿ ಅನುರಾಗ್ ಕಶ್ಯಪ್ ಬಗ್ಗೆ ಮಾತನಾಡಿದ್ದಾರೆ. ಗೋಲ್ಡ್‌ಫಿಶ್‌ನ ಅನುರಾಗ್ ಪ್ರೆಸೆಂಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ವಿಚ್ಛೇದನ ಪಡೆದ ಆರಂಭ ದಿನಗಳು ತುಂಬಾನೇ ಕಷ್ಟ ಇತ್ತು ಆದರೆ ಒಳ್ಳೆ ಸ್ನೇಹಿತರಾಗಿದ್ದ ಕಾರಣ ಹಿಂಸೆ ಅನಿಸಲಿಲ್ಲ ಎನ್ನುತ್ತಾರೆ.

ಕಲ್ಕಿ ಕೋಚ್ಲಿನ್ ಮತ್ತು ಅನುರಾಗ್ ಕಶ್ಯಪ್ 2011ರಲ್ಲಿ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2015ರಲ್ಲಿ ವಿಚ್ಛೇದನ ಪಡೆದ್ದರು. 2009ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಡಾರ್ಕ್ ಕಾಮಿಡಿ ದೇವ್ ಡಿ ಸಿನಿಮಾದಲ್ಲಿ ಕಲ್ಕಿ ಕೋಚ್ಲಿನ್ ಮತ್ತು ಅಭಯ್ ಡಿಯೋಲ್ ನಟಿಸಿದ್ದರು. 2010ರಲ್ಲಿ ಮತ್ತೊಮ್ಮೆ ಅನುರಾಗ್ ಒತೆ ದಿ ಗರ್ಲ್‌ ಇನ್ ಎಲ್ಲೋ ಬೂಟ್ಸ್‌ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಮೇಲೆ ಡಿವೋರ್ಸ್ ಆಯ್ತು ಸ್ನೇಹಿತರಾಗಿದ್ದು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು. ಅಂದ್ರೂ 2019ರಲ್ಲಿ ರಿಲೀಸ್ ಆದ ಸ್ಕೇರ್ಡ್‌ ಗೇಮ್ ಸೀಸನ್ 2ರಲ್ಲಿ ನಟಿಸಿದ್ದರು. 

ಮಗುವಿನ ಸ್ಕೂಲ್ ಅಡ್ಮಿಶನ್‌ಗೆ ಬೇಕಾದ್ರೆ ಮದ್ವೆಯಾಗ್ತೇನೆ: ಕಲ್ಕಿ ಕೊಚ್ಲಿನ್

ಡಿವೋರ್ಸ್‌ ಬಗ್ಗೆ ಮಾತು:

'ಡಿವೋರ್ಸ್ ಪಡೆದ ನಂತರ ಜೀವನ ಸಾಗಿಸಲು ಕಷ್ಟವಿದೆ. ಸುಳ್ಳು ಹೇಳಬಾರದು ಆದರೆ ಡಿವೋರ್ಸ್ ಪಡೆದ ಆರಂಭದಲ್ಲಿ ಕೆಲವು ವರ್ಷಗಳ ಕಾಲ ನಾವು ಅಪರಿಚಿತರಾಗಿ ಮುಖ ನೋಡಲು ಕೂಡ ಹಿಂಸೆ ಆಗುತ್ತಿತ್ತು. ಈಗ ನಾವು ಸ್ನೇಹಿತರಾಗಿದ್ದೀವಿ. ಡಿವೋರ್ಸ್ ಪಡೆದ ನಂತರ ಮತ್ತೊಬ್ಬರ ಜೊತೆ ಸುತ್ತಾಡುತ್ತಿದ್ದಾರೆ ಮಜಾ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮನಸ್ಸು ಮುರಿಯುತ್ತದೆ. ಎಲ್ಲರು ಟೈಂ ತೆಗೆದುಕೊಂಡು ಹೊರ ಬರುತ್ತಾರೆ ಆದರೆ ನಾನು ಸಾಕಷ್ಟು ಥೆರಪಿ ತೆಗೆದುಕೊಂಡಿರುವೆ. ಈಗ ವಿಚ್ಛೇದನ ಪಡೆದು 7-8 ವರ್ಷಗಳು ಆಯ್ತು ಸಮಯ ಸಾಗಿದೆ ನಾವು ಸ್ನೇಹಿತರಾಗಿದ್ದೀವಿ ಜೀವನ ಚೆನ್ನಾಗಿದೆ' ಎಂದು ಕಲ್ಕಿ ಕೋಚ್ಲಿನ್ ಹೇಳಿದ್ದಾರೆ. 

2019 ಸೆಪ್ಟೆಂಬರ್ 30ರಂದು ಗರ್ಭಿಣಿಯಾಗಿರುವ ವಿಚಾರವನ್ನು ಕಲ್ಕಿ ಕೋಚ್ಲಿನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್  ಹಾಕಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾರೆ. ಇಸ್ರೇಲ್ ಮೂಲಕ ಮ್ಯೂಸಿಶಿಯನ್ ಜೊತೆ ಕಲ್ಕಿ ಕೋಚ್ಲಿನ್ ರಿಲೇಷನ್‌ಶಿಪ್‌ನಲ್ಲಿದ್ದು 2020 ಫೆಬ್ರವರಿ 7ರಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. 

ಈ ನಟಿಯ ಮುತ್ತಾತನೇ ಐಫೆಲ್ ಟವರ್ ನಿರ್ಮಾಣ ಮಾಡಿದ್ದು!

ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ,  ಗೆಳೆಯ ಗೈ ಹರ್ಷ್‌ಬರ್ಗ್ ಮತ್ತು ಅವರು ಮಗುವಿನ ಹೃದಯ ಬಡಿತವನ್ನು ಮೊದಲ ಬಾರಿಗೆ ಕೇಳಿದಾಗ ಉಂಟಾದ ಭಾವನೆಯ ಬಗ್ಗೆ ಮಾತನಾಡಿದ್ದರು. ಮೊದಲ ಎರಡು ತಿಂಗಳು, ಯಾವುದೇ ತಾಯಿಯ ಭಾವನೆಗಳನ್ನು ಅನುಭವಿಸಲಿಲ್ಲ ಮತ್ತು ಅದು ಅನ್ಯಲೋಕದ ಆಕ್ರಮಣದಂತೆ ಅನಿಸಿತ್ತು ಎಂದಿದ್ದಾರೆ. ಆದರೆ ಮಗುವಿನ ಹೃದಯ ಬಡಿತವನ್ನು ಕೇಳಿದಾಗ ಅವರು ಎಕ್ಸೈಟ್‌ ಆದರಂತೆ.ಕರೀನಾ ಕಪೂರ್ ಖಾನ್ ಅವರ ರೇಡಿಯೋ ಕಾರ್ಯಕ್ರಮವಾದ ವಾಟ್ ವುಮೆನ್ ವಾಂಟ್‌ನಲ್ಲಿ ಕಲ್ಕಿ ಕಾಣಿಸಿಕೊಂಡಾಗ, ಅವರ ಕುಟುಂಬವು ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ಬಹಿರಂಗಪಡಿಸಿದರು. ನಟಿ ತಮ್ಮ ಕುಟುಂಬವು ತುಂಬಾ ಸಾಂಪ್ರದಾಯಿಕವಲ್ಲ ಎಂದು ಹಂಚಿಕೊಂಡಿದ್ದಾರೆ. ‘ನೋಡು, ಮುಂದಿನ ಬಾರಿ ನೀನು ಮದುವೆಯಾದಾಗ, ಅದು ಜೀವನಕ್ಕಾಗಿ ಎಂದು ಖಚಿತಪಡಿಸಿಕೊ' ಎಂದಿದ್ದರಂತೆ ಆಕೆಯ ತಾಯಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್