ಉಕ್ರೇನ್‌ನಲ್ಲಿ ನಡೆದಿತ್ತು 'ನಾಟು ನಾಟು' ಚಿತ್ರೀಕರಣ, ಶ್ರಮವಿತ್ತು ಪೂರ್ಣ

By Suvarna News  |  First Published Jan 12, 2023, 2:29 PM IST

ಜಾಗತಿಕ ಪ್ರಶಸ್ತಿಯಾದ 'ಗೋಲ್ಡನ್‌ ಗ್ಲೋಬ್‌ ಅವಾರ್ಡ್‌' ಗಳಿಸಿರುವ 'ಆರ್​ಆರ್​ಆರ್'​ ಚಿತ್ರದ 'ನಾಟು ನಾಟು' ಹಾಡಿನ ಚಿತ್ರೀಕರಣ ನಡೆದದ್ದು ಉಕ್ರೇನ್​ನಲ್ಲಿ... ಈ ಕುರಿತು  ನಿರ್ದೇಶಕ ರಾಮ್ ಚರಣ್  ಪತ್ನಿ ಉಪಾಸನಾ ಹಂಚಿಕೊಂಡಿದ್ದಾರೆ ಈ ಅನುಭವ... 
 


ಎಸ್‌. ಎಸ್‌. ರಾಜಮೌಳಿಯವರ ಬ್ಲಾಕ್‌ಬಸ್ಟರ್ 'ಆರ್​ಆರ್​ಆರ್'​ ಚಿತ್ರದ 'ನಾಟು ನಾಟು' ಹಾಡಿಗೆ ಜಾಗತಿಕ ಪ್ರಶಸ್ತಿಯಾದ 'ಗೋಲ್ಡನ್‌ ಗ್ಲೋಬ್‌ ಅವಾರ್ಡ್‌' ಸಿಕ್ಕಿದೆ. 1920ರ ಬ್ರಿಟಿಷ್ ಆಕ್ರಮಿತ ಭಾರತದ ಕತೆಯನ್ನು ಚಿತ್ರ ಆಧರಿಸಿರುವ ಈ ಚಿತ್ರವೀಗ ಆಸ್ಕರ್‌ ರೇಸ್‌ನಲ್ಲಿ ಕೂಡ ಇದೆ. ಇಂಥ ಚಿತ್ರಕ್ಕೆ ಈಗ ಮತ್ತೊಂದು ಗರಿಮೆ ಬಂದಿದ್ದು, ಲಾಸ್​ ಏಂಜಲಿಸ್​ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಗೋಲ್ಡನ್ ಗ್ಲೋಬ್‌ ಪ್ರಶಸ್ತಿ (Golden Globe Awards) ಸ್ವೀಕರಿಸಿದ್ದಾರೆ. 

ಪ್ರಶಸ್ತಿ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಎಸ್​.ಎಸ್​ ರಾಜಮೌಳಿ (S.S. Rajamouli) , ಜೂನಿಯರ್ ಎನ್‌ಟಿಆರ್ (Junior NTR) ಮತ್ತು ಚಿತ್ರ ನಿರ್ದೇಶಕ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ  (Upasana Kamineni Konidela) ಸಹ ಭಾಗಿಯಾಗಿದ್ದರು. ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್​ ಮತ್ತು ರಾಮ್ ಚರಣ್ ಅವರು ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಪಾತ್ರವನ್ನು ಅಭಿನಯಿಸಿದ್ದಾರೆ. 

Tap to resize

Latest Videos

RRR ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ..

ಈಗ ಈ ಚಿತ್ರದ ಬಗ್ಗೆ ಕುತೂಹಲ ಎನ್ನುವ ಅಂಶವೊಂದು ಹೊರಬಂದಿದೆ. ಅದೇನೆಂದರೆ, ಈಗ ಅವಾರ್ಡ್​ ಗೆದ್ದಿರುವ ನಾಟು ನಾಟು ಹಾಡಿನ ಶೂಟಿಂಗ್ ನಡೆದದ್ದು ಉಕ್ರೇನ್​ನಲ್ಲಿ! ಎರಡು ವರ್ಷಗಳ ಹಿಂದೆಯಾದರೆ ಉಕ್ರೇನ್​ ದೇಶವಿದೆ ಎಂದು ತಿಳಿದವರೇ ಅಪರೂಪವಾಗಿದ್ದರು. ಆದರೆ ಯಾವಾಗ ರಷ್ಯಾ ದಾಳಿ ಮಾಡಿತೋ ಆಗ ಉಕ್ರೇನ್​ (Ukraine) ಜಗತ್ಪ್ರಸಿದ್ಧವಾಗಿದೆ. ಇಂಥ ಯುದ್ಧಭೂಮಿಯಲ್ಲಿ  ನಾಟು ನಾಟು ಚಿತ್ರೀಕರಣ ನಡೆದಿದೆ.

ಆದರೆ ಈ ಹಾಡಿನ ಚಿತ್ರೀಕರಣ ನಡೆದಿರುವುದು ರಷ್ಯಾ, ಉಕ್ರೇನ್​ (Russia-Ukrain) ಮೇಲೆ ದಾಳಿ ಮಾಡುವುದಕ್ಕೂ  ಸ್ವಲ್ಪ ಮುಂಚೆ. ಉಕ್ರೇನ್​ ರಣಭೂಮಿಯಾಗಿ ನೆತ್ತರು ಚೆಲ್ಲುವ ಸ್ವಲ್ಪ ಮೊದಲು ‘ಆರ್​ಆರ್​ಆರ್​’ ಚಿತ್ರತಂಡ ಅದೇ ಭೂಮಿಯಲ್ಲಿ ಇತ್ತು ಎಂದು ಶೂಟಿಂಗ್​ನ ದಿನಗಳನ್ನು ನೆನಪಿಸಿಕೊಂಡಿದ್ದಾರೆ  ರಾಮ್​ ಚರಣ್​ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ. ಇತ್ತ  ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದುದಕ್ಕೆ ಇಡೀ ಆರ್​ಆರ್​ಆರ್​ ತಂಡಕ್ಕೆ ಶುಭಾಶಯಗಳ ಸುರಿಮಳೆಯಾಗುತ್ತಿದ್ದರೆ, ಅತ್ತ ಉಪಾಸನಾ ಅವರು ಶೂಟಿಂಗ್​ (Shooting) ದಿನಗಳನ್ನು ಮೆಲುಕು ಹಾಕಿದ್ದಾರೆ. 

ತಂಡದ RRR ನ ಪ್ರಯಾಣವನ್ನು ನೆನಪಿಸಿಕೊಂಡಿರುವ ಉಪಾಸನಾ ಅವರು, 'ಆರ್‌ಆರ್‌ಆರ್ ಕುಟುಂಬದ ಭಾಗವಾಗಿರುವುದಕ್ಕೆ ನನಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ. ಇದು ನನಗೆ ಸಿಕ್ಕಿರುವ ಗೌರವ. ಭಾರತೀಯ ಚಿತ್ರರಂಗವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ತಂಡ ಗೆದ್ದಿದೆ.  ಈ ಪ್ರಯಾಣದ ಭಾಗವಾಗಿಸಿದ್ದಕ್ಕಾಗಿ ರಾಮ್ ಚರಣ್ ಮತ್ತು ಎಸ್.ಎಸ್. ರಾಜಮೌಳಿ ಅವರಿಗೆ ಧನ್ಯವಾದಗಳು. ಉಕ್ರೇನ್‌ನಲ್ಲಿ ಶೂಟಿಂಗ್‌ನಿಂದ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳವರೆಗೆ ಕಠಿಣ ಪರಿಶ್ರಮ ಪಡಲಾಗಿದೆ. ಈ  ಪರಿಶ್ರಮವು ಫಲ ನೀಡಿದೆ. ಪರಿಶ್ರಮ ಪಟ್ಟರೆ ಫಲ ಖಂಡಿತ ಸಿಗುತ್ತದೆ ಎಂಬುದನ್ನು ತಂಡ  ನನಗೆ ಕಲಿಸಿದ್ದೀರಿ' ಎಂದಿದ್ದಾರೆ.
ಅಂದಹಾಗೆ ಉಪಾಸನಾ ಅವರು ಗರ್ಭಿಣಿಯಾಗಿದ್ದಾರೆ. ಅದರ ಬಗ್ಗೆಯೂ ಉಲ್ಲೇಖಿಸಿರುವ ಅವರು, 'ನನ್ನ ಮಗು ನನ್ನೊಂದಿಗೆ ಈ ಸಂತೋಷವನ್ನು ಅನುಭವಿಸುತ್ತಿದೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ತುಂಬಾ ಭಾವನಾತ್ಮಕವಾಗಿದ್ದೇನೆ' ಎಂದಿದ್ದಾರೆ. 

ಇಂಗ್ಲಿಷರನ್ನು ಆಡಿಕೊಂಡ ನಾಟು ನಾಟುಗೆ ಜಾಗತಿಕ ಪ್ರಶಸ್ತಿ ಸಿಕ್ಕಿದ್ದು ಭಾರತೀಯರಿಗೆ ಸಂದ ಗೌರವ!

ಅದೇ ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿಯವರೂ  (Narendra Modi) ಚಿತ್ರತಂಡಕ್ಕೆ ಶುಭಾಶಯ (Congratulation) ಕೋರಿದ್ದಾರೆ. ‘ಇದೊಂದು ವಿಶೇಷವಾದ ಸಾಧನೆ. ಎಂಎಂ ಕೀರವಾಣಿ, ಪ್ರೇಮ್​ ರಕ್ಷಿತ್​, ಕಾಲ ಭೈರವ, ಚಂದ್ರಬೋಸ್​, ರಾಹುಲ್​ ಸಿಪ್ಲಿಗಂಜ್​, ಎಸ್​ಎಸ್​ ರಾಜಮೌಳಿ, ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​ ಮತ್ತು ಇಡೀ ಆರ್​ಆರ್​ಆರ್​ ಸಿನಿಮಾ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಪ್ರಶಸ್ತಿಯಿಂದಾಗಿ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಭಾವ ಮೂಡಿದೆ’ ಎಂದಿದ್ದಾರೆ. 

ಇಂಥ ಒಂದು ಚಿತ್ರ  ಆಸ್ಕರ್​ (Oscar) ಪ್ರಶಸ್ತಿ ಗೆಲ್ಲಬೇಕು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಹಾಗೂ ಚಿತ್ರತಂಡ ಕಾಯುತ್ತಿದೆ.
 

 

click me!