ಅನಂತ್ ಮದುವೆಯಲ್ಲಿ ಹಸುಗಳ ಕಾಲಿಗೂ ವಜ್ರದ ಪಟ್ಟಿ, ಶ್ರೀಮಂತಿಕೆ ವರ್ಣಿಸಿದ ಕರ್ದಾಶಿಯನ್ ಸಹೋದರಿಯರು

ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆಗೆ ಬಂದಿದ್ದ ಹಾಲಿವುಡ್ ಸಹೋದರಿಯರಾದ ಕಿಮ್ ಕರ್ದಾಶಿಯನ್ ಮತ್ತು ಕೋಯ್ಲಿ ಕರ್ದಾಶಿಯನ್, ಅಂಬಾನಿ ಮದುವೆಯನ್ನು ಹಾಡಿ ಹೊಗಳಿದ್ದಾರೆ. ಅಲ್ಲಿನ ಅಲಂಕಾರವನ್ನು ವರ್ಣಿಸಿದ್ದಾರೆ. 
 

Cows at Ambani Marriage hand foot cuffs with diamonds Kardashian sisters recall

ಭಾರದಲ್ಲಿ ನಡೆದ ಅತ್ಯಂತ ಅದ್ಧೂರಿ, ಐಷಾರಾಮಿ ಮದುವೆ ಅಂದ್ರೆ ಅದು ಅನಂತ್ ಅಂಬಾನಿ ಹಾಗೂ ರಾಧಿಕಾ ಮ್ಯಾರೇಜ್. ಇವ್ರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷವಾಗ್ತಾ ಬಂತು. ಆದ್ರೆ ಈಗ್ಲೂ ಅನಂತ್ ಮದುವೆ, ಸುದ್ದಿಯಾಗ್ತಾನೆ ಇದೆ. ಅಂಬಾನಿ ಕುಟುಂಬದ ಅದ್ಧೂರಿ ಮದುವೆ ಬಗ್ಗೆ ಒಬ್ಬರಲ್ಲ ಒಬ್ಬರು ಹೊಗಳ್ತಿದ್ದಾರೆ. ಅದೊಂದು ಸ್ವರ್ಗದ ಮದುವೆ ಎಂಬ ಮಾತುಗಳು ಆಗಾಗ ಕೇಳಿ ಬರ್ತಿರುತ್ತವೆ. ಈಗ ಹಾಲಿವುಡ್ ತಾರೆ ಕಿಮ್ ಕರ್ದಾಶಿಯಾನ್ ಮತ್ತು ಅವರ ಸಹೋದರಿ ಕೋಯ್ಲಿ ಕರ್ದಾಶಿಯನ್ ಸಹೋದರಿ, ಅಂಬಾನಿ ಮದುವೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಜುಲೈ 12, 2024ರಲ್ಲಿ ಮುಂಬೈನಲ್ಲಿ ನಡೆದ ಅಂಬಾನಿ, ರಾಧಿಕಾ  ಮದುವೆ ಕಾರ್ಯಕ್ರಮಕ್ಕೆ ಹಾಲಿವುಡ್ ಬೆಡಗಿ ಕಿಮ್ ಕರ್ದಾಶಿಯಾನ್ ಮತ್ತು ಅವರ ಸಹೋದರಿ ಕೋಯ್ಲಿ ಕರ್ದಾಶಿಯನ್ ಪಾಲ್ಗೊಂಡಿದ್ದರು. ರಿಯಾಲಿಟಿ ಶೋ ಒಂದರಲ್ಲಿ ಮಾತನಾಡಿದ ಕೋಯ್ಲಿ  ಕರ್ದಾಶಿಯನ್ಹಾಗೂ ಕಿಮ್ ಕರ್ದಾಶಿಯನ್ ಮದುವೆ ಬಳಸಿದ್ದ ಲಕ್ಷಾಂತರ ಹೂಗಳು, ಡೈಮಂಡ್ ವಸ್ತುಗಳ ಬಗ್ಗೆ ಮಾತನಾಡಿದ್ದಾರೆ.

Latest Videos

ಏನಿದು 18 ಕೆಜಿನಾ? ಅಂಬಾನಿ ಮದುವೆಯಲ್ಲಿ ಕಳೆದುಹೋದ ವಜ್ರ.. ಬೇಸರಗೊಂಡ ಪ್ರಸಿದ್ಧ ನಟಿ

ಅನಂತ್ ಮದುವೆ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ  ನಡೆದಿತ್ತು. ಈ ಟೈಂನಲ್ಲಿ ಇಡೀ ಪ್ರದೇಶವನ್ನು ಇಂಚಿಂಚು ಬಿಡದೆ ಅಲಂಕಾರ ಮಾಡಿದ್ದರು ಎಂದು ಕೋಯ್ಲಿ ಹೇಳ್ತಿದ್ದಂತೆ ಲಕ್ಷಾಂತರ ಹೂಗಳಿಂದ ಎಲ್ಲವೂ ಅಲಂಕಾರಗೊಂಡಿತ್ತು ಎಂದು ಕಿಮ್ ಧ್ವನಿಗೂಡಿಸಿದ್ದಾರೆ. ವಿವಾಹ ಸ್ಥಳವನ್ನು ಅವರು ಡಿಸ್ನಿಲ್ಯಾಂಡ್ ಸವಾರಿಗೆ ಹೋಲಿಸಿದ್ದಾರೆ. ಇಟ್ಸ್ ಎ ಸ್ಮಾಲ್ ವರ್ಲ್ಡ್ ಅಂತ ಅನ್ನಿಸಿದ್ರೂ ಮುಂದೆ ಹೋಗ್ತಿದ್ದಂತೆ  ವಿಸ್ತಾರವಾಯ್ತು. ಇದು ಸಂಪೂರ್ಣವಾಗಿ ವಿಭಿನ್ನ ಪ್ರಪಂಚದಂತೆ ಭಾಸವಾಯಿತು ಎಂದಿದ್ದಾರೆ. 

ಅಷ್ಟೇ ಅಲ್ಲ, ರಾಧಿಕಾ ಮಂಟಪಕ್ಕೆ ಬಂದ ನವಿಲಿನ ಆಕಾರದ ದೋಣಿ ಮೇಲೆ ಅಮೂಲ್ಯ ರತ್ನಗಳನಳಿದ್ದವು. ಅಲ್ಲದೆ ಚಿನ್ನದಿಂದ ಅದನ್ನು ಕೆತ್ತಲಾಗಿತ್ತು ಎಂದು ಕೋಯ್ಲಿ ಹೇಳಿದ್ದಾರೆ. ಬರೀ ಇಷ್ಟೇ ಅಲ್ಲ, ಅನಂತ್ ಅಂಬಾನಿ ಮದುವೆಗೆ ಕರೆತಂದಿದ್ದ ಹಸುವಿನ ಬಗ್ಗೆಯೂ ಕಿಮ್ ಸಹೋದರಿಯರು ವರ್ಣಿಸಿದ್ದಾರೆ. ಹಸುವಿನ ಪಾದದ ಪಟ್ಟಿಯನ್ನು ವಜ್ರಗಳಿಂದ ಮಾಡಲಾಗಿತ್ತು. ಇದು ನಿಜವಾಗ್ಲೂ ಓವರ್ ಲೋಡೆಡ್  ಎಂದ ಕೋಯ್ಲಿ, ಅನಂತ್ ಮದುವೆ ಶ್ರೀಮಂತವಾಗಿತ್ತು ಎಂದಿದ್ದಾರೆ, 

ಮನಸ್ಸು ಕದ್ದ ನೀತಾ ಅಂಬಾನಿ : ಕಿಮ್ ಕರ್ದಾಶಿಯನ್, ನೀತಾ ಅಂಬಾನಿಯವರನ್ನು ಹೊಗಳಿದ್ದಾರೆ. ನೀತಾ ಅಂಬಾನಿ, ಅಂಬಾನಿ ಕುಟುಂಬದ 'ಕ್ರಿಸ್ ಜೆನ್ನರ್' ಎಂದಿದ್ದಾರೆ. ನೀತಾ ಅಂಬಾನಿಗೆ ಧನ್ಯವಾದ ಹೇಳಿದ ಕಿಮ್ ಕರ್ದಾಶಿಯನ್ಅವರನ್ನು ತಮ್ಮ ಅಮ್ಮನಿಗೆ ಹೋಲಿಕೆ ಮಾಡಿದ್ದಾರೆ.  ನೀತಾ ಅಂಬಾನಿ, ವರನ ತಾಯಿ, ಅವರು ಅಂಬಾನಿ ಕುಟುಂಬದ ಕ್ರಿಸ್ ಜೆನ್ನರ್. ನನ್ನ ಜೀವನದಲ್ಲಿ ನಾನು ಭೇಟಿಯಾದ ಎಲ್ಲಾ ಜನರಲ್ಲಿ, ಅವರು ಅತ್ಯಂತ ಮೃದುವಾದ ಕೈಗಳನ್ನು ಹೊಂದಿದ್ದರು ಎಂದು ಕಿಮ್ ಕರ್ದಾಶಿಯನ್ ಹೇಳಿದ್ದಾರೆ. 

ಅಂಬಾನಿ ಕುಟುಂಬದ ಹೋಳಿ ಸಂಭ್ರಮವನ್ನು ನೋಡಿದ್ದೀರಾ? ಬಣ್ಣದ ಬದಲು ಏನು ಬಳಸುತ್ತಾರೆ?

ಅಂಬಾನಿ ಕುಟುಂಬವನ್ನು ಹೊಗಳಿದ ಕಿಮ್ ಕರ್ದಾಶಿಯನ್ : ಕಿಮ್ ಕರ್ದಾಶಿಯನ್ಅಂಬಾನಿ ಕುಟುಂಬವು ಮದುವೆಗೆ ಮೊದಲು ಅಗತ್ಯ ಇರುವವರಿಗೆ ಸಾಕಷ್ಟು ಸಹಾಯ ಮಾಡಿದೆ ಎಂದು ಕಿಮ್ ಕರ್ದಾಶಿಯನ್ ಹೇಳಿದ್ದಾರೆ. ಅವರು ಪ್ರತಿದಿನ ಬೇರೆ ಬೇರೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು. ಒಂದು ದಿನ ಅವರು 5 ಸಾವಿರ ಜನರಿಗೆ ವರ್ಷದ ಪಡಿತರವನ್ನು ನೀಡಿದ್ದರು. ಮರುದಿನ ಅವರು 2,500 ಜನರ ಮದುವೆಗಳಿಗೆ ಹಣ ನೀಡಿದ್ದರು. ಅವರ ಮದುವೆ ನಿಜಕ್ಕೂ ಅದ್ದೂರಿಯಾಗಿತ್ತು, ಆದರೆ ಅವರು ಇತರರನ್ನು ಮರೆತಿರಲಿಲ್ಲ ಎಂದು ಕಿಮ್ ಹೇಳಿದ್ದಾರೆ. ಅಂಬಾನಿ ಮದುವೆಯಲ್ಲಿ ಕಿಮ್ ಬೇಸರಗೊಳ್ಳುವ ಘಟನೆಯೂ ನಡೆದಿದೆ. ಅವರು ಒಂದು ವಜ್ರವನ್ನು ಕಳೆದುಕೊಂಡಿದ್ದಾರೆ. ಅದು ಎಷ್ಟೇ ಹುಡುಕಿದ್ರೂ ಸಿಗಲಿಲ್ಲ ಎಂದು ಕಿಮ್ ಸಂದರ್ಶನದಲ್ಲಿ ಹೇಳಿದ್ದಾರೆ. 
 

click me!