ಎಷ್ಟು ಹುಡುಗಿಯರ ಜೊತೆಯಾದ್ರೂ ಡೇಟಿಂಗ್ ಮಾಡು, ಆದರೆ...; ಮಗನಿಗೆ ಶಾರುಖ್ ಪತ್ನಿಯ ಸಲಹೆ

By Shruiti G Krishna  |  First Published Sep 24, 2022, 10:33 AM IST

ಕರಣ್ ಜೋಹರ್ ಕೇಳುವ ರ್ಯಾಪಿಡ್ ಫೈರ್ ರೌಂಡ್ ನಲ್ಲಿ ಗೌರಿ ಖಾನ್‌ ಬಳಿ ಮಗನಿಗೆ ನೀಡುವ ಡೇಟಿಂಗ್ ಸಲಹೆ ಏನು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಗೌರಿ ಖಾನ್, ಎಷ್ಟು ಹುಡುಗಿಯರ ಜೊತೆಯಾದರೂ ಡೇಟಿಂಗ್ ಮಾಡು ಎಂದು ಹೇಳಿದರು. 


ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋನ 7ನೇ ಸೀಸನ್ ಯಶಸ್ವಿಯಾಗಿ ಮುಂದುವರೆದಿದೆ. ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಸಿಂಗ್ ಮತ್ತು ಅಲಿಯಾ ಹಾಗೂ ಸಮಂತಾ ಮತ್ತು ಅಕ್ಷಯ್ ಕುಮಾರ್, ವಿಜಯ್ ದೋವರಕೊಂಡ ಮತ್ತು ಅನನ್ಯಾ ಪಾಂಡೆ, ಕರೀನಾ ಕಪೂರ್ ಮತ್ತು ಆಮೀರ್ ಖಾನ್, ವಿಕ್ಕಿ ಕೌಶಲ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಸೇರಿದಂತೆ, ಅನಿಲ್ ಕಪೂರ್ ಸೇರಿದಂತೆ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಎಂದಿನಂತೆ ಈ ಬಾರಿಯೂ ಸೆಲೆಬ್ರಿಟಿಗಳು ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಕರಣ್ ಜೋಹರ್ ಶೋ ಹೆಚ್ಚಾಗಿ ಗಾಸಿಪ್, ವಿವಾದಗಳ ಬಗ್ಗೆ ಸದ್ದು ಮಾಡುತ್ತದೆ. ಈ ಬಾರಿ ಕೂಡ ಲವ್, ಬ್ರೇಕಪ್, ಡೇಟಿಂಗ್ ಹಾಗೂ ಸೆಕ್ಸ್ ವಿಚಾರಗಳ ಬಗ್ಗೆ ಕರಣ್ ಸ್ಟಾರ್ಸ್ ಜೊತೆ ಮಾತನಾಡಿದ್ದಾರೆ. 

ಈ ಬಾರಿಯ ಸೆಂಚಿಕೆಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್ ಹಾಗೂ ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ ಈ ಮೂವರು ಭಾಗಿಯಾಗಿದ್ದರು. ಮೂವರು ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ತಮ್ಮ ಕುಟುಂಬದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಈ ವೇಳೆ ಗೌರಿ ಖಾನ್ ಮಗಳು ಹಾಗೂ ಮಗನ ಬಗ್ಗೆ ಮಾತನಾಡಿದ್ದಾರೆ. ಮಕ್ಕಳಿದೆ ಡೇಟಿಂಗ್ ಟಿಪ್ಸ್ ನೀಡಿದ್ದಾರೆ. ಜೊತೆಗೆ ಮಗನ ಡ್ರಗ್ಸ್ ಪ್ರಕರಣದ ಬಗ್ಗೆ ಗೌರಿ ಖಾನ್ ಮೌನ ಮುರಿದಿದ್ದಾರೆ. 

ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟಿಂಗ್ ಮಾಡ್ಬೇಡ; ಪುತ್ರಿ ಸುಹಾನಾಗೆ ಶಾರುಖ್ ಪತ್ನಿ ಸಲಹೆ

Tap to resize

Latest Videos

ಕರಣ್ ಜೋಹರ್ ಕೇಳುವ ರ್ಯಾಪಿಡ್ ಫೈರ್ ರೌಂಡ್ ನಲ್ಲಿ ಗೌರಿ ಖಾನ್‌ ಬಳಿ ಮಗನಿಗೆ ನೀಡುವ ಡೇಟಿಂಗ್ ಸಲಹೆ ಏನು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಗೌರಿ ಖಾನ್, ಎಷ್ಟು ಹುಡುಗಿಯರ ಜೊತೆಯಾದರೂ ಡೇಟಿಂಗ್ ಮಾಡು. ಆದರೆ ಮದುವೆ ಫಿಕ್ಸ್ ಆಗುವವರೆಗೂ ಮಾತ್ರ. ಆಮೇಲೆ ನಿಲ್ಲಿಸು' ಎಂದು ಹೇಳಿದರು. ಇನ್ನು ಮಗಳಿಗೂ ಸಹ ಗೌರಿ ಖಾನ್ ಡೇಟಿಂಗ್ ಟಿಪ್ಸ್ ನೀಡಿದ್ದಾರೆ. ಕರಣ್ ಜೋಹರ್, ಗೌರಿ ಖಾನ್‌ಗೆ ಪ್ರಶ್ನೆ ಮಾಡಿ ಮಗಳು  ಸುಹಾನಾ ಖಾನ್‌ಗೆ ಡೇಟಿಂಗ್ ಸಲಹೆ ಏನು ಕೊಡುತ್ತೀರಾ ಎಂದು ಕೇಳಿದ್ದಕ್ಕೆ, ಗೌರಿ ಖಾನ್, 'ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟ್ ಮಾಡಬೇಡ' ಎಂದು ಹೇಳಿದರು. 

ಅದಕ್ಕಿಂತ ಕೆಟ್ಟ ಪರಿಸ್ಥಿತಿ ನಾವು ಅನುಭವಿಸಿಲ್ಲ; ಮಗನ ಡ್ರಗ್ಸ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಪತ್ನಿ

ಇದೇ ಸಮಯದಲ್ಲಿ ಗೌರಿ ಪತಿ, ಶಾರುಖ್ ಖಾನ್  ಅವರ ಬಗ್ಗೆಯೂ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರು ಯಾವ ವಿಚಾರಕ್ಕೆ ಹೆಚ್ಚು ಕಿರಿಕಿರಿ ಮಾಡುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸಿದರು. ಮನೆಯೊಳಗಿಂತ ಹೆಚ್ಚು ಸಮಯ ಹೊರಗೆ ಕಳೆಯುತ್ತಾರೆ ಅಂತ ಕೆಲವೊಮ್ಮೆ ಅನಿಸುತ್ತದೆ. ಅದರಲ್ಲೂ ಪಾರ್ಟಿ ಸಮಯದಲ್ಲಿ ಹೊರಗೆ ಇರುತ್ತಾರೆ. ಜನರು ಅವನನ್ನು ಹುಡುಕಲು ಪ್ರಾರಂಭಿಸುತ್ತಾರೆ. ನಾವು ಮನೆಯೊಳಗೆ ಪಾರ್ಟಿ ಮಾಡುವುದಕ್ಕಿಂತ ರಸ್ತೆಯಲ್ಲಿ ಹೊರಗೆ ಪಾರ್ಟಿ ಮಾಡುತ್ತಿದ್ದೇವೆ ಎಂದು ನನಗೆ ಅನಿಸುತ್ತದೆ' ಎಂದು ಹೇಳಿದರು.

click me!