Gauri Khan: ಭಾರಿ ಸುದ್ದಿಯಾಗ್ತಿದೆ ಶಾರುಖ್​ ಮನೆ ಡಸ್ಟ್‌ಬಿನ್​! ಯಾಕೆ ಅಂತೀರಾ?

By Suvarna News  |  First Published Mar 7, 2023, 3:08 PM IST

ಶಾರುಖ್​ ಖಾನ್​ ಹಾಗೂ ಅವರ ಪತ್ನಿ ಗೌರಿ ಖಾನ್​ ಡಸ್ಟ್​ಬಿನ್​ಗಾಗಿ ಭಾರಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣವೇನು?


ನಟ ಶಾರುಖ್​ ಖಾನ್​ (Shah Rukh Khan) ಕುಟುಂಬವೇ ಒಂದು ತೀರಿಯಲ್ಲಿ  ವಿವಾದಗ್ರಸ್ಥವೇ ಆಗಿ ಹೋಗಿದೆ. ಪಠಾಣ್​ ಚಿತ್ರದಿಂದ ಹಿಂದೆಂದೂ ಕಾಣದಷ್ಟು ನಂ.1 ತಾರೆಯಾಗಿ ಮಿಂಚುತ್ತಿದ್ದರೂ ಕಳೆದ ಒಂದೆರಡು ವರ್ಷಗಳಿಂದ ಈ ಕುಟುಂಬದವರ ಮೇಲೆ ಅಪವಾದಗಳ ಮೇಲೆ ಅಪವಾದಗಳು ಬರುತ್ತಲೇ ಇವೆ. ಈ ಅಪವಾದಗಳಿಂದ  ದೂರ ಇರಬೇಕು ಎಂದುಕೊಳ್ಳುತ್ತಿದ್ದರೂ ಶಾರುಖ್​ ಕುಟುಂಬಕ್ಕೆ ಏನೋ ಕಳಂಕ ಅಂಟಿದಂತಿದೆ. ಕಳೆದ ವರ್ಷ ಭಾರಿ ಸುದ್ದಿಯಾಗಿದ್ದು,  ಶಾರುಖ್​ ಪುತ್ರ ಆರ್ಯನ್​ ಖಾನ್​ ಅವರ ಹೆಸರು ಡ್ರಗ್ಸ್​ (Drugs) ಪ್ರಕರಣದಲ್ಲಿ ತಳುಕುಹಾಕಿಕೊಂಡಾಗ. ಕೆಲ ಸಿನಿ ತಾರೆಯರು, ಶ್ರೀಮಂತ ವ್ಯಕ್ತಿ ಎನಿಸಿಕೊಂಡವರು, ಅವರ ಪುತ್ರ-ಪತ್ರಿಯರು ಡ್ರಗ್ಸ್​, ಮದ್ಯ ಸೇವನೆ ಸೇರಿದಂತೆ ಕೆಟ್ಟ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಹೊಸ ವಿಷಯವೇನೂ ಅಲ್ಲ.  ಆದರೆ ಡ್ರಗ್ಸ್​ ಸರಬರಾಜು ಮಾಡುತ್ತಿರುವ ಗಂಭೀರ ಆರೋಪವೂ ಶಾರುಖ್​ ಪುತ್ರನ (Son) ಮೇಲೆ ಬಂದಿತ್ತು. ಕೊನೆಗೆ ಅಚ್ಚರಿಯ ಬೆಳವಣಿಗೆಯಲ್ಲಿ ಇವರ ಮಗನ ಮೇಲಿನ ಆರೋಪ ತಳ್ಳಿಹಾಕಾಯಿತು ಎನ್ನಿ. ಅದರ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಗುಸುಗುಸು ಪಿಸುಪಿಸು ನಡೆಯುತ್ತಲೇ ಇರುವಾಗಲೇ ಶಾರುಖ್​ ಖಾನ್​ ಸುತ್ತ ಬೇಷರಂ ವಿವಾದ ಸುತ್ತಿಕೊಂಡಿತು.

ಪಠಾಣ್​ ಚಿತ್ರದಲ್ಲಿ ನಾಯಕಿ ದೀಪಿಕಾ ಪಡುಕೋಣೆ (Deepika Padukone) ಕೇಸರಿ ಬಿಕಿನಿ ತೊಟ್ಟು ಬೇಷರಂ ರಂಗ್​ಗೆ ತನ್ನೆಲ್ಲಾ ದೇಹ ಪ್ರದರ್ಶನ ಮಾಡುತ್ತಾ, ಮೈ ಚಳಿ ಬಿಟ್ಟು ನಟಿಸಿದ್ದು ಹಲವು ಹಿಂದೂಗಳ ಕಣ್ಣನ್ನು ಕೆಂಪಗೆ ಮಾಡಿತ್ತು. ಪಠಾಣ್​ ಚಿತ್ರ ಬೈಕಾಟ್​ ಬಿಸಿ ಅನುಭವಿಸಿತು. ತಮ್ಮ ಚಿತ್ರಕ್ಕೆ ರಕ್ಷಣೆ ನೀಡಿ ಎಂದು ಕೋರಿ ಶಾರುಖ್​ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಿದ್ದೂ ಆಯಿತು. ಪಠಾಣ್​ ಚಿತ್ರ ಬಿಡುಗಡೆಯಾದಾಗಲೂ ಹಲವು ಕಡೆ ಗಲಾಟೆಯೂ ನಡೆಯಿತು. ಆದರೆ ಇದು ಕೂಡ ಸುಖಾಂತ್ಯಗೊಂಡಿತು. ಪಠಾಣ್​ ಹಲವು ದಾಖಲೆಗಳನ್ನು ಮುರಿದು ಇನ್ನೂ ಭರ್ಜರಿಯಾಗಿ ಓಡುತ್ತಲೇ ಇದೆ.

Tap to resize

Latest Videos

ಪುಟಾಣಿ ಜಾಹ್ನವಿ ಕಪೂರ್​ಳಿಂದ ಪ್ರಶಸ್ತಿ ಪಡೆದ ಬಾಲಿವುಡ್​ Shah Rukh Khan!

ಇವೆಲ್ಲವೂ ಸರಿಯಾಯಿತು ಎನ್ನುವಾಗಲೇ ಈಗ ಶಾರುಖ್​ ಪತ್ನಿ ಗೌರಿ ಅವರ ಮೇಲೆ ಈಚೆಗೆ ಎಫ್​ಐಆರ್​ ದಾಖಲಾಗಿದೆ. ಶಾರುಖ್​ ಪತ್ನಿ ಗೌರಿ ಖಾನ್​ ಅವರು ಇಂಟೀರಿಯರ್​ ಡಿಸೈನರ್​ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕೆಲವು ರಿಯಲ್​ ಎಸ್ಟೇಟ್​ ಕಂಪನಿಗೆ ಅವರು ಬ್ರ್ಯಾಂಡ್​ ಅಂಬಾಸಡರ್​ ಆಗಿದ್ದಾರೆ. ಅವರು ಪ್ರಚಾರ ರಾಯಭಾರಿ ಆಗಿರುವ ಕಂಪನಿಯೊಂದರಿಂದ ತಮಗೆ ಮೋಸ ಆಗಿದೆ ಎಂದು ಗ್ರಾಹಕರೊಬ್ಬರು ಕೇಸ್​ ದಾಖಲಿಸಿದ್ದು, ಅದಿನ್ನೂ ನಡೆಯುತ್ತಲೇ ಇದೆ. ಮುಂಬೈ ನಿವಾಸಿ ಜಶ್ವಂತ್​ ಷಾ ಎಂಬುವವರು ಗೌರಿ ಖಾನ್​ (Gauri Khan) ವಿರುದ್ಧ ದೂರು ನೀಡಿದ್ದಾರೆ. ಖಾಸಗಿ ರಿಯಲ್​ ಎಸ್ಟೇಟ್​ ಕಂಪನಿಯೊಂದರ ಮೂಲಕ ಜಶ್ವಂತ್​ ಅವರು ಫ್ಲಾಟ್​ ಖರೀದಿಸಿದ್ದರು. ಅದಕ್ಕಾಗಿ ಅವರು 86 ಲಕ್ಷ ರೂಪಾಯಿ ಪಾವತಿಸಿದ್ದರು. ಹಣ ಪಡೆದುಕೊಂಡರೂ ಕೂಡ ಆ ಕಂಪನಿಯವರು ತಮಗೆ ಫ್ಲಾಟ್​ ನೀಡಿಲ್ಲ ಎಂದು ಜಶ್ವಂತ್​ ಷಾ ಈಗ ಆರೋಪಿಸಿದ್ದಾರೆ. ಗೌರಿ ಖಾನ್​ ಅವರು ಬ್ರ್ಯಾಂಡ್​ ಅಂಬಾಸಡರ್​ ಆಗಿದ್ದರಿಂದಲೇ ತಾವು ಆ ಫ್ಲಾಟ್​ ಖರೀದಿಸಿದ್ದು ಎಂದು ಜಶ್ವಂತ್​ ಷಾ ದೂರಿನಲ್ಲಿ ತಿಳಿಸಿದ್ದಾರೆ.

ಇದು ನಡೆಯುತ್ತಿರುವ ನಡುವೆಯೇ ಈಗ ಗೌರಿ ಖಾನ್​ ಮತ್ತೊಮ್ಮೆ ಟ್ರೋಲ್​ಗೆ ಒಳಗಾಗಿದ್ದಾರೆ. ಅದೇನೆಂದರೆ ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರ ಮನೆಯ ದುಬಾರಿ ಹೋಂ ಡೆಕೋರೇಷನ್​ ಕಂಡು ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.  ರೆಡ್ಡಿಟ್ ಪೇಜ್​ನಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ಫೋಟೋಗಳನ್ನು ಶೇರ್ ಮಾಡಲಾಗಿದ್ದು ಅದರಲ್ಲಿ ಶಾರುಖ್​ ಅವರ ಮನೆಯ  ಡಸ್ಟ್​ಬಿನ್ ಬೆಲೆ  15 ಸಾವಿರ ರೂಪಾಯಿ ಎಂದು ತೋರಿಸುತ್ತಿದೆ.  ಗೌರಿ ಖಾನ್ ಅವರು ತಮ್ಮ ಮನೆಯ ಅಲಂಕಾರವನ್ನು ತಾವೇ ಮಾಡಿದ್ದಾರೆ. ಹಾಗೆಯೇ ಬಾಲಿವುಡ್​ನ ಪ್ರಮುಖ ಸೆಲೆಬ್ರಿಟಿಗಳ ಮನೆಯನ್ನು ಕೂಡಾ ಅಲಂಕರಿಸಿದ್ದಾರೆ.

ಶಾರುಖ್ ಖಾನ್ ಪತ್ನಿ ವಿರುದ್ಧ FIR ದಾಖಲು; ಹಣ ಪಡೆದರೂ ಅಮಾಯಕರ ಮನೆ ಮೇಲೆ ಕಣ್ಣಾಕಿರುವ ಗೌರಿ?

ನೋಡಲು ಸೀದಾ ಸಾದಾ ಇರೋ ಈ ಡಸ್ಟ್​ಬಿನ್​ಗೆ ಇಷ್ಟೊಂದು ಬೆಲೆ ಕೊಟ್ಟಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.  '15 ಸಾವಿರ ರೂಪಾಯಿಯ ಡಸ್ಟ್​ಬಿನ್ ಬಳಸ್ತೀರಾ? ಇದಕ್ಕಿಂತ ಉತ್ತಮವಾದ ವಿನ್ಯಾಸವನ್ನು ಆರ್ಮಿ ಕ್ಯಾಂಟೀನ್‌ನಲ್ಲಿ ಈ ಬೆಲೆಯ 1/30 ರಷ್ಟು ಬೆಲೆಗೆ ಪಡೆದುಕೊಳ್ಳಬಹುದಿತ್ತಲ್ಲಾ' ಎಂದು ಕೆಲವರು ಕಾಲೆಳೆದಿದ್ದಾರೆ.  ಈ ಬೆಲೆಗೆ ಒಂದು ಒಳ್ಳೆ ಸ್ಮಾರ್ಟ್​ಫೋನ್​ ತೆಗೆದುಕೊಳ್ಳಬಹುದಿಲ್ಲ ಎಂದು ಹೇಳಿದ್ದಾರೆ ಇನ್ನೊಬ್ಬರು. ಈ ಡಸ್ಟ್​ಬಿನ್​ ಕಲೆಯ ಬಗ್ಗೆ ಹೇಳುವುದಾದರೆ ಮಜ್ನು ಭಾಯ್ ಅವರ ಪೇಂಟಿಂಗ್ ಇದಕ್ಕಿಂತಲೂ ಸೂಪರ್ ಆಗಿದೆ ಎಂದಿದ್ದಾರೆ ಇನ್ನೊಬ್ಬರು. ನನ್ನ ತಾಯಿ ಚಿಪ್ಪಿನ ದೀಪವನ್ನು ನೋಡಿ ಸ್ವಲ್ಪ.. ಈ ಹಣದಲ್ಲಿ ನಾವು ಹೋಗಿ ಚಿಪ್ಪು ತಂದು ಲ್ಯಾಂಪ್ (lamp) ಮಾಡಬಹುದು ಎಂದು ಹೇಳಿದ್ದಾರೆ ಇನ್ನೊಬ್ಬರು. ಅಂದಹಾಗೆ, ಶಾರುಖ್ ಖಾನ್ ಅವರ ದುಬಾರಿ ಬಂಗಲೆ ಇತ್ತೀಚೆಗೆ ಸುದ್ದಿಯಾಗಿತ್ತು. ಅವರು ಬರೋಬ್ಬರಿ 13 ಕೋಟಿಗೆ ಖರೀದಿಸಿದ ಅವರ ಮನೆಯ ಬಗ್ಗೆ ಸುದ್ದಿಯಾಗಿತ್ತು.
 

click me!