
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹೋಳಿ ಹಬ್ಬಕ್ಕೆ ವಿಶ್ ಮಾಡಿದ್ದಾರೆ ಜೊತೆಗೆ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಪ್ರೀತಿಯ ಸಾಲು ಹೇಳಿದ್ದಾರೆ. ಜೈಲಿನಲ್ಲೇ ಕುಳಿತು ಜಾಕ್ವೆಲಿನ್ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಿರುವ ಸುಕೇಶ್ ಚಂದ್ರಶೇಖರ್ ಇದೀಗ ಹೋಳಿ ಹಬ್ಬದ ಸಯದಲ್ಲೂ ಗೆಳತಿಯನ್ನು ನೆನಪಿಸಿಕೊಂಡಿದ್ದಾರೆ. ಸುಕೇಶ್ ಬರೆದ ಪತ್ರದಲ್ಲಿ ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ್ದಾರೆ. ಅದೇ ಪತ್ರದಲ್ಲಿ 'ಬೇಬಿ ಗರ್ಲ್' ಎಂದು ಬರೆದಿರುವ ಸುಕೇಶ್ ಆಕೆಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ ಎಂದು ಹೇಳಿದರು. ಜಾಕ್ವೆಲಿನ್ ಅವರನ್ನು ಸುಕೇಶ್ ಬೇಬಿ ಗರ್ಲ್ ಎಂದು ಕರೆಯುತ್ತಾರೆ. ಪತ್ರದ ಕೊನೆಯಲ್ಲಿ ಲವ್ ಯು ಎಂದು ಹೇಳಿದ್ದಾರೆ.
'ಅತ್ಯಂತ ಅದ್ಭುತ, ನನ್ನ ಸುಂದರ ಜಾಕ್ವೆಲಿನ್‌ಗೆ ನಾನು ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಈ ದಿನ, ಬಣ್ಣಗಳ ಹಬ್ಬ, ನಾನು ನಿಮಗೆ ಭರವಸೆ ನೀಡುತ್ತೇನೆ, ಮರೆಯಾದ ಅಥವಾ ಕಣ್ಮರೆಯಾದ ಬಣ್ಣಗಳನ್ನು ನಿಮ್ಮ ಬಳಿಗೆ ತರಲಾಗುವುದು. ಈ ವರ್ಷ ಸಂಪೂರ್ಣ ಹೊಳಪಿನಿಂದ ಇರಲಿ, ನಾನು ಅದನ್ನು ಖಚಿತಪಡಿಸಿಕೊಳ್ಳುತ್ತೇನೆ ಮತ್ತು ಅದು ನನ್ನ ಜವಾಬ್ದಾರಿಯಾಗಿದೆ. ನಿನಗಾಗಿ ಬೇಬಿ ಗರ್ಲ್ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.
ಸುಖೇಶ್ ಚಂದ್ರಶೇಖರ್ ಇದ್ದ ಜೈಲ್ ಸೆಲ್ ಮೇಲೆ ದಾಳಿ: ಐಷಾರಾಮಿ ವಸ್ತುಗಳ ಜಪ್ತಿ
ಇದಕ್ಕೂ ಮೊದಲು ಸಹ ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ ಪ್ರೀತಿಯ ಸಂದೇಶ ಕಳುಹಿದ್ದರು. ಪ್ರೇಮಿಗಳ ದಿನಾಚರಣೆ ದಿನ ವಿಶ್ ಮಾಡಿದ್ದರು. ರಾಷ್ಟ್ರೀಯ ತನಿಖಾ ದಳದ ಕೋರ್ಟ್‌ಗೆ ಹಾಜರಾಗಿ ಹೊರ ಬರುತ್ತಿದ್ದ ವೇಳೆ ಜಾಕ್ವೆಲಿನ್ ಗೆ ವಿಶ್ ಮಾಡಿದ್ದರು. ಜಾಕ್ವೆಲಿನ್ ಫರ್ನಾಂಡ್ ಮಾಡಿದ್ದ ಆರೋಪಗಳ ಬಗ್ಗೆ ಮಾಧ್ಯಮದವರು ಸುಕೇಶ್‌ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸುಕೇಶ್, 'ಅವಳ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅವಳಿಗೆ ಹೇಳಲು ಕಾರಣಗಳಿವೆ. ನಾನು ಏನನ್ನೂ ಹೇಳಲು ಬಯಸುವುದಿಲ್ಲ' ಎಂದು ಹೇಳಿದರು. ಬಳಿಕ ಮಾಧ್ಯಮದವರು ಜಾಕ್ವೆಲಿನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಸುಕೇಶ್, ನನ್ನ ಕಡೆಯಿಂದ ಅವಳಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿ' ಎಂದು ಹೇಳಿದರು.
ಜಾಕ್ವೆಲಿನ್, ನೋರಾ ಫತೇಹಿ, ಸುಕೇಶ್ ತ್ರಿಕೋನ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್!
ಸುಕೇಶ್ ಜೈಲಿನಲ್ಲೇ ಕುಳಿತು ಜಾಕ್ವೆಲಿನ್ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಿದ್ದಾನೆ. ಆದರೆ ಜಾಕ್ವೆಲಿನ್ ಸಾಲಲು ಸಾಲು ಆರೋಪ ಮಾಡಿದ್ದಾರೆ. ಮೋಸ ಮಾಡಿದ, ಜೀವನ ಹಾಳು ಮಾಡಿದ ಎಂದು ಕಿಡಿ ಕಾರುತ್ತಿದ್ದಾರೆ. ಸುಕೇಶ್ ಏನೇ ಹೇಳಿದರು ಜಾಕ್ವೆಲಿನ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.