Anupam Kher: ಹುಟ್ಟುಹಬ್ಬಕ್ಕೆ ನಟನ ಹೊಸ ಚಾಲೆಂಜ್​! ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​

Published : Mar 07, 2023, 02:48 PM IST
Anupam Kher: ಹುಟ್ಟುಹಬ್ಬಕ್ಕೆ ನಟನ ಹೊಸ ಚಾಲೆಂಜ್​! ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​

ಸಾರಾಂಶ

ಇಂದು 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟ ಅನುಪಮ್ ಖೇರ್ ಈ ವಯಸ್ಸಿನಲ್ಲಿ ಹೊಸ ಚಾಲೆಂಜ್​ ಸ್ವೀಕರಿಸಿದ್ದಾರೆ. ಏನದು?  

ಸುಮಾರು ನಾಲ್ಕು ದಶಕಗಳ ಕಾಲ ಬಾಲಿವುಡ್​ ಜಗತ್ತನ್ನು ಆಳಿದ ಕೆಲವೇ ಕೆಲವು ನಟರ ಪೈಕಿ ಅನುಪಮ್​ ಖೇರ್​ (Anupam Kher)ಕೂಡ ಒಬ್ಬರು. ಚಿತ್ರರಂಗದಲ್ಲಿ ಕೆಲಸ ಮಾಡುವುದಷ್ಟೇ ಅಲ್ಲದೇ,  ಹಲವಾರು ಅಂತರರಾಷ್ಟ್ರೀಯ ಪ್ರಾಜೆಕ್ಟ್‌ಗಳೊಂದಿಗೆ ಜಾಗತಿಕ ಖ್ಯಾತಿಯನ್ನೂ ಇವರು ಗಳಿಸಿದ್ದಾರೆ.  ವಿಲನ್​ ರೋಲ್​ ಆಗಲೀ, ಅಪ್ಪನ ಪಾತ್ರವಾಗಲೀ,  ಹಾಸ್ಯವೇ ಆಗಲೀ ಇಲ್ಲವೇ ಗಂಭೀರ ಪಾತ್ರವೇ ಆಗಲಿ... ಎಲ್ಲದ್ದಕ್ಕೂ ಸೈ ಎನಿಸಿಕೊಂಡಿರುವ ಈ ಅಪರೂಪದ ಹಿರಿಯ ನಟನಿಗೆ ಇಂದು 68ನೇ ಜನುಮದಿನದ ಸಂಭ್ರಮ.  ವಿಭಿನ್ನ ಪ್ರಕಾರಗಳಲ್ಲಿ ತಮ್ಮ ಬಹುಮುಖತೆಯನ್ನು ಪದೇ ಪದೇ ಸಾಬೀತುಪಡಿಸುತ್ತಿರುವ ಅನುಪಮ್​ ಖೇರ್​ ಇತ್ತೀಚೆಗೆ ಭಾರಿ ಪ್ರಸಿದ್ಧಿಗೆ ಬಂದಿದ್ದು ದಿ ಕಾಶ್ಮೀರ್​ ಫೈಲ್ಸ್​ (The Kashmir Files) ಚಿತ್ರದ ಮೂಲಕ. ಕಾಶ್ಮೀರಿ ಪಂಡಿತರ ಮೇಲೆ ಆಗಿರುವ ಹತ್ಯಾಕಾಂಡದ ಕುರಿತ ನೈಜ ಕಥೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ಅನುಪಮ್​ ಖೇರ್​ ಅವರ ಮನೋಜ್ಞ ಅಭಿನಯಕ್ಕೆ  ಮನಸೋಲದವರೇ ಇಲ್ಲ. ಅವರ ಪಾತ್ರವನ್ನು ನೋಡಿದ ಜನರಿಗೆ ಸಾಕ್ಷಾತ್​ ಕಾಶ್ಮೀರಿ ಪಂಡಿತರು ಅದೆಂಥ ಘೋರ, ಕರಾಳ ಅನುಭವ ಅನುಭವಿಸಿರಬಹುದು ಎಂದು ಊಹಿಸಿಕೊಳ್ಳಲು ಹೆಚ್ಚು ಹೊತ್ತು ಬೇಕಾಗಲಿಲ್ಲ.

ಇಂಥ ನಟ ತಮ್ಮ 68ನೇ ವಯಸ್ಸಿನಲ್ಲಿ ಹೊಸ ಚಾಲೆಂಜ್​ ಒಂದನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಮಾರ್ಚ್​ 7ರಂದು ಅನುಪಮ್​ ಖೇರ್​ ಅವರು 67ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮ್ಮ ಫಿಟ್ನೆಸ್​ (Fitness) ಗೋಲ್​ ಬಗ್ಗೆ ಮಾಹಿತಿ ನೀಡಿದ್ದರು. ‘ಫಿಟ್ನೆಸ್​ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುದು ಬಹಳ ಹಿಂದಿನಿಂದಲೂ ನನ್ನ ಕನಸಾಗಿತ್ತು. ಆದರೆ ಅದನ್ನು ನನಸಾಗಿಸಲು ನಾನು ಪ್ರಯತ್ನಿಸಿರಲಿಲ್ಲ. ಈಗ ಫಿಟ್ನೆಸ್​ ಹಾದಿಯಲ್ಲಿ ಸಾಗಲು ಆರಂಭಿಸಿದ್ದೇನೆ. ಈ ಪಯಣವನ್ನು ನಿಮಗೆ ಪರಿಚಯಿಸಲು ಬಯಸುತ್ತೇನೆ. ಇನ್ನೊಂದು ವರ್ಷದಲ್ಲಿ ನನ್ನ ಇನ್ನೊಂದು ಹೊಸ ವರ್ಷನ್​ ಅನ್ನು ನಾವು ಸೆಲೆಬ್ರೇಟ್​ ಮಾಡುತ್ತೇವೆ’ ಎಂದು ಅನುಪಮ್​ ಖೇರ್​ ಬರೆದುಕೊಂಡಿದ್ದರು. ನಟನಿಗೆ  ಫಿಟ್ನೆಸ್​ (Anupam Kher Fitness) ಬಗ್ಗೆ ಹೆಚ್ಚು ಕಾಳಜಿ ಇದೆ. ಹಾಗಾಗಿ ಪ್ರತಿ ದಿನ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿ ಅವರ ದೇಹದಲ್ಲಿ ಅಚ್ಚರಿಯ ಬದಲಾವಣೆ ಆಗಿದ್ದು ಅದರ ಫೋಟೋ ಈಚೆಗೆ ಶೇರ್​ ಮಾಡಿಕೊಂಡಿದ್ದರು.  ತಮ್ಮ ಬಾಡಿ ಟ್ರಾನ್ಸ್​ಫಾರ್ಮೇಶನ್​ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಅವರು ಖುಷಿಪಟ್ಟಿದ್ದರು. 

ಕಾಶ್ಮೀರಿ ಪಂಡಿತರಿಗೆ ಐದು ಲಕ್ಷ ರೂ. ಘೋಷಿಸಿದ ನಟ ಅನುಪಮ್​ ಖೇರ್​

ಆದರೆ ಇದೀಗ, ಈ ವರ್ಷ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇಚ್ಛಾಶಕ್ತಿ ಬಲವಾಗಿದ್ದರೆ ಎಲ್ಲವೂ ಸಾಧ್ಯ ಎಂದು ನಂಬಿರುವುದರಿಂದ ಹೊಸ ದಿಗಂತಗಳನ್ನು ಹುಡುಕಲು ಪ್ರಯತ್ನಿಸುವುದಾಗಿ ನಟ ಹೇಳಿಕೊಂಡಿದ್ದಾರೆ. ತಮಗೆ  ಈಜು ಗೊತ್ತಿಲ್ಲದ ಕಾರಣ ಈಜು ಕಲಿಯುತ್ತಿರುವುದಾಗಿ ಹೊಸ ಸವಾಲನ್ನು ತಮಗೆ ತಾವೇ ಹಾಕಿಕೊಂಡಿದ್ದಾರೆ. ಅವರು ಈಜು ಕಲಿಯುತ್ತಿರುವ ವಿಡಿಯೋ  ಶೇರ್​ ಮಾಡಿಕೊಂಡಿದ್ದಾರೆ/  ಕಳೆದ ಹಲವು ವರ್ಷಗಳಿಂದ ನೀವು ನೀಡುತ್ತಿರುವ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ  ಎಲ್ಲರಿಗೂ ಧನ್ಯವಾದಗಳು ಎಂದಿರುವ ನಟ ಈಜು ಕಲಿತು ಮುಂದಿನ ಪಯಣ ತಿಳಿಸಲಿದ್ದಾರಂತೆ! ಇವರ ಈ ನೂತನ ಪ್ರಯತ್ನಕ್ಕೆ ಶುಭಾಶಯ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಂಕಿ ಪಾಂಡೆ, ನೀಲ್ ನಿತಿನ್ ಮುಖೇಶ್, ರೋನಿತ್ ರಾಯ್ (Ronith Roy) ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನಟನಿಗೆ ವಿಶ್ ಮಾಡಿದ್ದಾರೆ.

ಅಂದಹಾಗೆ, `ಸಾರಂಶ್` (Saramsh) ಅನುಪಮ್ ಖೇರ್ ಅವರ ದೊಡ್ಡ ಪರದೆಯ ಚೊಚ್ಚಲ ಚಿತ್ರವಾಗಿದೆ. 1984ರಲ್ಲಿ ಇವರು 28 ನೇ ವಯಸ್ಸಿನಲ್ಲಿ ಇರುವಾಗ 65 ವರ್ಷ ವಯಸ್ಸಿನ ಬಿ.ವಿ ಪ್ರಧಾನ್ ಅವರ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಕಥೆಯು ತಮ್ಮ ಮಗನನ್ನು ಕಳೆದುಕೊಂಡಿರುವ ವಯಸ್ಸಾದ ದಂಪತಿಗಳ ಕುರಿತಾಗಿತ್ತು. ಚಿತ್ರದ ಕಥಾವಸ್ತು ಮುಂಬೈನಲ್ಲಿ ನಡೆದಿತ್ತು. ಕರ್ಮ ಚಿತ್ರವು ಬಿಡುಗಡೆಯಾಗಿ 37 ವರ್ಷಗಳು ಕಳೆದಿವೆ ಮತ್ತು ಇಲ್ಲಿಯವರೆಗೆ ಖೇರ್ ಅವರ ವಿರೋಧಿ ಡಾ ಡ್ಯಾಂಗ್ ಪಾತ್ರವನ್ನು ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಸುಭಾಷ್ ಘಾಯ್ ಅವರ ನಿರ್ದೇಶನದಲ್ಲಿ ದಿಲೀಪ್ ಕುಮಾರ್, ನಾಸಿರುದ್ದೀನ್ ಶಾ, ಅನಿಲ್ ಕಪೂರ್, ಜಾಕಿ ಶ್ರಾಫ್, ಶ್ರೀದೇವಿ ಮತ್ತು ಪೂನಂ ಧಿಲ್ಲೋನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಮೂಲಕ, ಖೇರ್ ಅವರು ಋಣಾತ್ಮಕ ಪಾತ್ರಗಳನ್ನು ಪಣಚೆಯಿಂದ ಎಳೆಯಬಹುದು ಎಂದು ಸಾಬೀತುಪಡಿಸಿದರು.

ಭಯೋತ್ಪಾದಕ ದಾಳಿಗೆ ಬಲಿಯಾದ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಮಗಳಿಗೆ ನಟ ಅನುಪಮ್ ಖೇರ್ ನೆರವು
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?