ಕಾಫಿ ವಿತ್ ಕರಣ್ 7 ಸೀಸನ್‌ನ ಈ ಬಾರಿಯ ಸಂಚಿಕೆಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಮಹೀಪ್ ಕಪೂರ್, ಭಾವನಾ ಪಾಂಡೆ ಮೂವರು ಭಾಗಿಯಾಗಿದ್ದರು. ಈ ವೇಳೆ ಗೌರಿ ಖಾನ್, 'ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟ್ ಮಾಡಬೇಡ' ಎಂದು ಮಗಳಿಗೆ ಸಲಹೆ ನೀಡಿದರು.
ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋನ 7ನೇ ಸೀಸನ್ ಮುಂದುವರೆದಿದೆ. ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಸಿಂಗ್ ಮತ್ತು ಅಲಿಯಾ ಹಾಗೂ ಸಮಂತಾ ಮತ್ತು ಅಕ್ಷಯ್ ಕುಮಾರ್, ವಿಜಯ್ ದೋವರಕೊಂಡ ಮತ್ತು ಅನನ್ಯಾ ಪಾಂಡೆ, ಕರೀನಾ ಕಪೂರ್ ಮತ್ತು ಆಮೀರ್ ಖಾನ್, ವಿಕ್ಕಿ ಕೌಶಲ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಸೇರಿದಂತೆ, ಅನಿಲ್ ಕಪೂರ್ ಸೇರಿದಂತೆ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಎಂದಿನಂತೆ ಈ ಬಾರಿಯೂ ಸೆಲೆಬ್ರಿಟಿಗಳು ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದರು. ಕರಣ್ ಶೋ ಹೆಚ್ಚಾಗಿ ಗಾಸಿಪ್, ವಿವಾದಗಳ ಬಗ್ಗೆ ಸದ್ದು ಮಾಡುತ್ತದೆ. ಈ ಬಾರಿ ಕೂಡ ಲವ್, ಬ್ರೇಕಪ್, ಡೇಟಿಂಗ್ ಹಾಗೂ ಸೆಕ್ಸ್ ವಿಚಾರಗಳ ಬಗ್ಗೆ ಕರಣ್ ಸ್ಟಾರ್ಸ್ ಜೊತೆ ಮಾತನಾಡಿದ್ದಾರೆ.
ಈ ಬಾರಿಯ ಸೆಂಚಿಕೆಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಮಹೀಪ್ ಕಪೂರ್, ಭಾವನಾ ಪಾಂಡೆ ಮೂವರು ಭಾಗಿಯಾಗಿದ್ದರು. ಮೂವರು ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ತಮ್ಮ ಕುಟುಂಬ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಈ ವೇಳೆ ಗೌರಿ ಖಾನ್ ಮಗಳ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್, ಗೌರಿ ಖಾನ್‌ಗೆ ಪ್ರಶ್ನೆ ಮಾಡಿ ಮಗಳು ಸುಹಾನಾ ಖಾನ್‌ಗೆ ಡೇಟಿಂಗ್ ಸಲಹೆ ಏನು ಕೊಡುತ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಗೌರಿ ಖಾನ್, 'ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟ್ ಮಾಡಬೇಡ' ಎಂದು ಹೇಳಿದ್ದಾರೆ.
Koffee with Karan; ಸೆಕ್ಸ್ ನನಗೆ ಮತ್ತಷ್ಟು ಯಂಗ್ ಭಾವನೆ ನೀಡುತ್ತೆ- ನಟ ಅನಿಲ್ ಕಪೂರ್
ಇದೇ ಸಮಯದಲ್ಲಿ ಗೌರಿ ಪತಿ ಶಾರುಖ್ ಅವರ ಬಗ್ಗೆಯೂ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರು ಯಾವ ವಿಚಾರಕ್ಕೆ ಹೆಚ್ಚು ಕಿರಿಕಿರಿ ಮಾಡುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸಿದರು. ಮನೆಯೊಳಗಿಂತ ಹೆಚ್ಚು ಸಮಯ ಹೊರಗೆ ಕಳೆಯುತ್ತಾರೆ ಅಂತ ಕೆಲವೊಮ್ಮೆ ಅನಿಸುತ್ತದೆ. ಅದರಲ್ಲೂ ಪಾರ್ಟಿ ಸಮಯದಲ್ಲಿ ಹೊರಗೆ ಇರುತ್ತಾರೆ. ಜನರು ಅವನನ್ನು ಹುಡುಕಲು ಪ್ರಾರಂಭಿಸುತ್ತಾರೆ. ನಾವು ಮನೆಯೊಳಗೆ ಪಾರ್ಟಿ ಮಾಡುವುದಕ್ಕಿಂತ ರಸ್ತೆಯಲ್ಲಿ ಹೊರಗೆ ಪಾರ್ಟಿ ಮಾಡುತ್ತಿದ್ದೇವೆ ಎಂದು ನನಗೆ ಅನಿಸುತ್ತದೆ' ಎಂದು ಹೇಳಿದರು.
ಬ್ರೇಕಪ್ ಬಗ್ಗೆ ಮೌನ ಮುರಿದ Karan Johar; ಒಂಟಿಯಾಗಿರುವ ಬಿಟ್ಟು ಬಿಡಿ
ಅನಿಲ್ ಕಪೂರ್ ಹೇಳಿಕೆ ವೈರಲ್
ಕಳೆದ ಸಂಚಿಕೆಯಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮತ್ತು ವರುಣ್ ಧವನ್ ಕಾಣಿಸಿಕೊಂಡಿದ್ದರು. ಅನಿಲ್ ಕುಪೂರ್ ಸೆಕ್ಸ್ ಬಗ್ಗೆ ಮಾತನಾಡಿದ್ದ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕರಣ್, ಅನಿಲ್ ಕಪೂರ್ ಅವರಿಗೆ ನಿಮ್ಮನ್ನು ಮತ್ತಷ್ಟು ಯಂಗ್ ಆಗಿ ಮಾಡುವ ಮೂರು ವಿಷಯ ಯಾವುದು ಎಂದು ಹೇಳಿ ಅಂತ ಕೇಳಿದರು. ಅನಿಲ್ ಕಪೂರ್ ತಕ್ಷಣ 'ಸೆಕ್ಸ್ ಸೆಕ್ಸ್ ಸೆಕ್ಸ್' ಎಂದು ಉತ್ತರಿಸಿದರು. ಅನಿಲ್ ಕಪೂರ್ ಅವರ ಈ ಉತ್ತರ ಪಕ್ಕದಲ್ಲೇ ಕುಳಿತಿದ್ದ ವರುಣ್ ಧವನ್‌ಗೆ ಅಚ್ಚರಿ ಮೂಡಿಸಿತು. ಕರಣ್ ಶೋನಲ್ಲಿ ಹೆಚ್ಚಾಗಿ ಸೆಕ್ಸ್ ಬಗ್ಗೆಯೇ ಮಾತನಾಡಲಾಗುತ್ತಿದೆ ಎನ್ನುವ ಆರೋಪ ಕೂಡ ಇದೆ. ಆದರೂ ಕರಣ್ ಶೋನಲ್ಲಿ ಹಾಟ್ ಅಂಡ್ ಸ್ಪೈಸಿ ವಿಚಾರಗಳ ಬಗ್ಗೆ ಹೆಚ್ಚು ಪ್ರಶ್ನೆ ಮಾಡುತ್ತಾರೆ.