ಉದ್ಯಾನವನಕ್ಕೆ ಡಾ. ವಿಷ್ಣುವರ್ಧನ್ ನಾಮಕರಣಕ್ಕೆ ಧ್ವನಿ ಎತ್ತುವೆ; ಮೇಯರ್ ಶಿವಕುಮಾರ್

By Kannadaprabha NewsFirst Published Sep 19, 2022, 12:39 PM IST
Highlights
  • ಉದ್ಯಾನವನಕ್ಕೆ ಡಾ. ವಿಷ್ಣುವರ್ಧನ ನಾಮಕರಣಕ್ಕೆ ಧ್ವನಿ ಎತ್ತುವೆ
  • ಮೇಯರ್‌ ಶಿವಕುಮಾರ್‌ ಭರವಸೆ
  • ವಿಷ್ಣು ಭಾವಚಿತ್ರಕ್ಕೆ ಪುಷ್ಪನಮನ

ಮೈಸೂರು (ಸೆ.19) : ಉದ್ಯಾನವನಕ್ಕೆ ಡಾ. ವಿಷ್ಣುವರ್ಧನ ಎಂದು ನಾಮಕರಣ ಮಾಡುವ ವಿಚಾರವನ್ನು ನಗರ ಪಾಲಿಕೆಯ ಮುಂದಿನ ಕೌನ್ಸಿಲ್‌ನಲ್ಲಿ ನಾನೇ ಧ್ವನಿ ಎತ್ತಿ ಚರ್ಚಿಸಿ ಎಲ್ಲರ ಸಮ್ಮುಖದಲ್ಲಿ ಕ್ರಮ ಕೈಗೊಳ್ಳುವುದಾಗಿ ಮೇಯರ್‌ ಶಿವಕುಮಾರ್‌ ತಿಳಿಸಿದರು. ಸಾಹಸಸಿಂಹ ಡಾ. ವಿಷ್ಣು ಸೇನಾ ಬಳಗ ವತಿಯಿಂದ ಡಾ. ವಿಷ್ಣುವರ್ಧನ್‌ ಅವರ 72ನೇ ಜನ್ಮ ದಿನಾಚರಣೆಯ ಅಂಗವಾಗಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್‌ ಉದ್ಯಾನವನದಲ್ಲಿ ಅವರ ಭಾವಚಿತ್ರಕ್ಕೆ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಡಾ.ವಿಷ್ಣು, ಉಪೇಂದ್ರ, ಶ್ರುತಿಗೆ ಹುಟ್ಟುಹಬ್ಬ ಸಂಭ್ರಮ: ಚಿತ್ರರಂಗದ ಸಾಧಕರಿಗೆ ಅಭಿಮಾನಿಗಳ ಶುಭಾಶಯ

ಸಾಹಸ ಸಿಂಹ ಡಾ. ವಿಷ್ಣುವರ್ಧನ ಉದ್ಯಾನವನ ಎಂದು ಅಭಿಮಾನಿಗಳೇ ಹೆಸರಿಟ್ಟು, ಅಭಿಮಾನಿಗಳು ವಿಷ್ಣು ಅವರ ಪ್ರತಿಮೆ ಸ್ಥಾಪನೆ ಮತ್ತು ಉದ್ಯಾನವನಕ್ಕೆ ಹೆಸರಿಡಬೇಕೆಂದು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸುಪ್ರಿಂಕೋರ್ಚ್‌ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆ ವಿಚಾರ ಸೂಕ್ಷ್ಮವಾಗಿ ಕಾನೂನಿನ ನಿಯಮ ಪಾಲಿಸಬೇಕಾಗುತ್ತದೆ. ಆದರೆ, ಉದ್ಯಾನವನಕ್ಕೆ ಡಾ. ವಿಷ್ಣುವರ್ಧನ ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಹಸಸಿಂಹ ಡಾ. ವಿಷ್ಣು ಸೇನಾ ಬಳಗದ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ವಿಷ್ಣುವರ್ಧನ್‌ ಅವರ ಭಾವಚಿತ್ರವನ್ನು ಅಲಂಕರಿಸಬೇಕು ಹಾಗೂ ಜಂಬೂಸವಾರಿ ಮೆರವಣಿಗೆಯಲ್ಲಿ ಡಾ. ವಿಷ್ಣು ಅವರ ಶಬ್ದಚಿತ್ರ ಬರಬೇಕು. ಡಾ. ವಿಷ್ಣುವರ್ಧನ್‌ ಜಯಂತಿಯನ್ನು ರಾಜ್ಯ ಸರ್ಕಾರ ವತಿಯಿಂದ ಆಚರಿಸಿ, ಯುವ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರಬೇಕು ಎಂದು ಮನವಿ ಮಾಡಿದರು.

ಶ್ರೀ ಇಳೈ ಆಳ್ವಾರ್‌ ಸ್ವಾಮೀಜಿ, ನಗರ ಪಾಲಿಕೆ ಸದಸ್ಯ ಸತೀಶ್‌, ಕರ್ನಾಟಕ ವಿಪ್ರ ವೇದಿಕೆ ಅಧ್ಯಕ್ಷ ಅನಿಲ್‌ ಕುಮಾರ್‌, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್‌.ಎನ್‌. ರಾಜೇಶ್‌, ಮುಖಂಡರಾದ ಸುರೇಶ್‌, ವಿನಯ್‌ ಕಣಗಾಲ್‌, ರಾಕೇಶ್‌ ಕುಂಚಿಟಿಗ, ಬಸವರಾಜು, ಮಹದೇವ್‌, ಧನರಾಜ್‌, ನವೀನ್‌, ಮಧು ಮೊದಲಾದವರು ಇದ್ದರು. ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ; ಸ್ಯಾಂಡಲ್‌ವುಡ್ 'ಯಜಮಾನ'ನನ್ನು ಸ್ಮರಿಸಿದ ಅಭಿಮಾನಿಗಳು, ಗಣ್ಯರು

click me!