ರಂಜಾನ್ ಉಪವಾಸ ಮಾಡಲ್ಲ ಎಂದ ನಟಿ ಗೌಹರ್ ಖಾನ್; ಕಾರಣವೇನು?

By Shruthi Krishna  |  First Published Feb 26, 2023, 4:18 PM IST

ಬಾಲಿವುಡ್ ನಟಿ ಗೌಹರ್ ಖಾನ್ ಈ ಬಾರಿ ರಂಜಾನ್‌ಗೆ ಉಪವಾಸ ಮಾಡಲ್ಲ ಎಂದು ಹೇಳಿದ್ದಾರೆ. ಯಾಕೆ ಎಂದು ಕಾರಣ ಕೂಡ ಬಹಿರಂಗ ಪಡಿಸಿದ್ದಾರೆ. 


ರಂಜಾನ್ ಉಪವಾಸ ಪ್ರಾರಂಭವಾಗುತ್ತಿದೆ. ಇನ್ನೇನು ಕೆಲವೆ ದಿನಗಳು ಭಾಕಿ ಇದೆ. ಆದರೆ ನಟಿ ಗೌಹರ್ ಖಾನ್ ರಂಜಾನ್ ಉಪವಾಸ ಮಾಡಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಕಾರಣ ಕೂಡ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ನಟಿ ಗೌಹರ್ ಖಾನ್ ಉಪವಾಸ ಮಾಡದೇ ಇರುವ ನಿರ್ಧಾರ ತೆಗೆದುಕೊಂಡಿದ್ದು ಗರ್ಭಿಣಿ ಎನ್ನುವ ಕಾರಣಕ್ಕೆ. ಹೌದು ನಟಿ ಗೌಹರ್ ಖಾನ್ ಗರ್ಭಿಣಿಯಾಗಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ಗೌಹರ್ ಗರ್ಭಾವಸ್ಥೆಯ ದಿನಗಳನ್ನು ಆನಂದಿಸುತ್ತಿದ್ದಾರೆ. ಹಾಗಾಗಿ ಉಪವಾಸ ಮಾಡಲ್ಲ ಎಂದು ಹೇಳಿದ್ದಾರೆ. 

ಇತ್ತೀಚೆಗೆ ನಟಿ ಗೌಹರ್ ಖಾನ್ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದರು. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಆಗ ಅಭಿಮಾನಿಯೊಬ್ಬರು ರಂಜಾನ್ ಉಪವಾಸದ ಬಗ್ಗೆ ಕೇಳಿದ್ದಾರೆ. ಗರ್ಭಿಣಿ ಆಗಿದ್ದೀರಿ ಈಗ ಉಪವಾಸ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಗೊಹರ್ ಖಾನ್, 'ಇಲ್ಲ ನಾನು ಉಪವಾಸ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಆದರೆ ನಾನು ಇಬಾದತ್ ಮುಂದುವರೆಸುತ್ತೇನೆ. ರೋಜಾ ಸ್ಥಳಗಳಲ್ಲಿ ನಾನು ನಿರ್ಗತಿಕರಿಗೆ ಆಹಾರಾವನ್ನು ನೀಡುತ್ತೇನೆ. ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನನ್ನ ಕುಟುಂಬವನ್ನು ಸೇರಿಸಿಕೊಳ್ಳಿ' ಎಂದು ಹೇಳಿದ್ದಾರೆ.

Tap to resize

Latest Videos

 

ಲವ್, ಮದುವೆ ಬಗ್ಗೆ ಫ್ಯಾಮಿಲಿ ಪ್ಲ್ಯಾನಿಂಗ್‌ ಬಗ್ಗೆ ಸತ್ಯ ಹಂಚಿಕೊಂಡ ನಟಿ ಗೌಹರ್ ಖಾನ್!

ಗೌಹರ್ ಖಾನ್ ತಾಯಿ ಆಗುತ್ತಿರುವ ಬಗ್ಗೆ ಆಕೆಯ ಮಾವ ಬಹಿರಂಗ  ಪಡಿಸಿ ಮಾತನಾಡಿದ್ದರು. 'ಗೌಹರ್ ಮತ್ತು ಝೈದ್ ಪೋಷಕರಾಗಲಿದ್ದಾರೆ ಮತ್ತು ನಾನು ಮೊದಲ ಬಾರಿಗೆ ಅಜ್ಜನಾಗುತ್ತೇನೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಇದು ನಮ್ಮ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಸಂದರ್ಭವಾಗಿದೆ. ನಾನು ಆರೋಗ್ಯವಂತ ಮಗುವಿಗಾಗಿ ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದರೆ ಉತ್ತಮ ಜೀವನವನ್ನು ಹೊಂದಲು ಆಶೀರ್ವಾದ ಮತ್ತು ದುವಾ ಅತ್ಯಂತ ಮುಖ್ಯವಾಗಿದೆ, ಆದ್ದರಿಂದ ನನ್ನ ಮೊಮ್ಮಗು ಉತ್ತಮ ಜೀವನವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ' ಎಂದು ಬಹಿರಂಗ ಪಡಿಸಿ ಸಂತಸ ಹಂಚಿಕೊಂಡಿದ್ದರು. 

ನಾನು ಮುಸ್ಲಿಂ, ಭಾರತದಲ್ಲಿ ನನ್ನ ಹಕ್ಕುಗಳನ್ನು ಬ್ಯಾನ್‌ ಮಾಡಲಾಗದು: Gauhar Khan

ನಟಿ ಗೌಹರ್ 5 ತಿಂಗಳಾಗಿದ್ದಾಗ ಗರ್ಭಿಣಿ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದರು. ತನ್ನ ಪತಿ ಝೈದ್‌ ಜೊತೆ ಇರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ 5 ತಿಂಗಳ ಗರ್ಭಿಣಿ ಎಂದು ಹೇಳಿದ್ದರು. ಗೌಹರ್  ಏಪ್ರಿಲ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ನಟಿ ಗೌಹರ್ ಖಾನ್ ಅನೇಕ ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದಾರೆ. ಸಿನಿಮಾ, ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಗೌಹರ್ ಖಾನ್ ಮಿಂಚಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ಮೊದಲ ಭಾಗಿಯಾಗಿದ್ದ ಗೌಹರ್ ಖಾನ್ ಬಳಿಕ ಅನೇಕ ಸೀಸನ್ ಗಳಲ್ಲಿ ಕಾಣಿಸಿಕೊಂಡಿದ್ದರು. ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ. 

click me!