ಕರಾವಳಿ ಸುಂದರಿ ಪೂಜಾ ಹೆಗ್ಡೆಗೆ ದುಬಾರಿ ಕಾರ್ ಗಿಫ್ಟ್ ನೀಡಿದ ಸ್ಟಾರ್ ನಿರ್ದೇಶಕ

Published : Feb 26, 2023, 02:23 PM ISTUpdated : Feb 28, 2023, 11:17 AM IST
ಕರಾವಳಿ ಸುಂದರಿ ಪೂಜಾ ಹೆಗ್ಡೆಗೆ ದುಬಾರಿ ಕಾರ್ ಗಿಫ್ಟ್ ನೀಡಿದ ಸ್ಟಾರ್ ನಿರ್ದೇಶಕ

ಸಾರಾಂಶ

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ದುಬಾರಿ ಕಾರು ಗಿಫ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಕರಾವಳಿ ಸುಂದರಿ ಪೂಜಾ ಹೆಗ್ಡೆ ಭಾರತೀಯ ಸಿನಿಮಾರಂಗದ ಬೇಡಿಯ ನಟಿಯರಲ್ಲಿ ಒಬ್ಬರು. ಸೌತ್ ಮತ್ತು ಬಾಲಿವುಡ್ ಎರಡು ಕಡೆ ಮಿಂಚುತ್ತಿರುವ ಪೂಜಾ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ಸೂಪರ್ ಸಕ್ಸಸ್ ಸಿನಿಮಾಗಳನ್ನು ನೀಡಿರುವ ಪೂಜಾ ಹೆಗ್ಡೆ ಸದ್ಯ ಸತತ ಸೋಲಿನ ಸುಳಿಯಲ್ಲಿದ್ದಾರೆ. ಆದರೂ ಪೂಜಾ ಬೇಡಿಕೆ ಏನು ಕಡಿಮೆಯಾಗಿಲ್ಲ. ಕೋಟಿ ಕೋಟಿ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಕರಾವಳಿ ಸುಂದರಿಗೆ ಸ್ಟಾರ್ ನಿರ್ದೇಶಕರೊಬ್ಬರು ದುಬಾರಿ ಕಾರು ಗಿಫ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಅಷ್ಟಕ್ಕೂ ಪೂಜಾ ಹೆಗ್ಡೆಗೆ ದುಬಾರಿ ಕಾರನ್ನು ಗಿಫ್ಟ್ ಮಾಡಿದ್ದು ಮತ್ಯಾರು ಅಲ್ಲ ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್. ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ತಮ್ಮ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದರು. ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಮುಲೂ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಲಾ ವೈಕುಂಠಪುರಮುಲೂ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಇದೀಗ ಪೂಜಾ ಹೆಗ್ಡೆ ಅವರಿಗೆ 2 ಕೋಟಿ ರೂಪಾಯಿ ಬೆಲೆಬಾಳುವ ಕಾರನ್ನು ಗಿಫ್ಟ್ ಮಾಡಿದ್ದಾರೆ. ಈ ಸುದ್ದಿ ಈಗ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಗುಲ್ಲಾಗಿದೆ.  

ಸೀರೆ ಫೋಟೋ ಹಂಚಿಕೊಂಡ ಕರಾವಳಿ ಸುಂದರಿ; ಸಲ್ಮಾನ್ ಜೊತೆ ಡೇಟಿಂಗ್ ಮಾಡ್ತಿದ್ದೀರಾ ಎಂದ ನೆಟ್ಟಿಗರು

ತ್ರಿವಿಕ್ರಮ್ ಅವರ ಹೊಸ ಸಿನಿಮಾಗೂ ಪೂಜಾ ನಾಯಕಿಯಾಗಿ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಹೊಸ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಳಿಕ ತ್ರಿವಿಕ್ರಮ್ ನಟ ಅಲ್ಲು ಅರ್ಜುನ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾಗೂ ಪೂಜಾ ನಾಯಕಿ ಎನ್ನಲಾಗುತ್ತಿದೆ.

ಮಗಳ ವಯಸ್ಸು ಆಕೆಗೆ, ನಾಚಿಕೆ ಆಗ್ಬೇಕು; ಪೂಜಾ ಹೆಗ್ಡೆ ಜೊತೆ ಡೇಟಿಂಗ್ ವದಂತಿಗೆ ಸಲ್ಮಾನ್ ಸ್ನೇಹಿತನ ರಿಯಾಕ್ಷನ್

ಕಾರು ಗಿಫ್ಟ್ ಕೊಟ್ಟ ವಿಚಾರ ತಳ್ಳಿಹಾಕಿದ ತ್ರಿವಿಕ್ರಮ್ 

ತ್ರಿವಿಕ್ರಮ್ ಶ್ರೀನಿವಾಸ್ ಕಾರು ಗಿಫ್ಟ್ ಕೊಟ್ಟ ವಿಚಾರವನ್ನು ಅವರ ತಂಡ ತಳ್ಳಿ ಹಾಕಿದೆ. ಪೂಜಾ ಹೆಗ್ಡೆ ಅವರಿಗೆ ಹೋಟೆಲ್ ನಿಂದ ಸೆಟ್ ಗೆ ಬರಲು ಕಾರನ್ನು ನೀಡಿದ್ದಾರ ಅಷ್ಟೆ ಎಂದು ಹೇಳಿದ್ದಾರೆ. ಸಿನಿಮಾತಂಡವೇ ಕಾರು ಖರೀದಿಸಿದ್ದು ಅವದರಲ್ಲಿ ನಾಯಕಿಯನ್ನು ಸೆಟ್ ಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಸಿನಿಮಾತಂಡ ಹೇಳಿದೆ. ಅದು ಪೂಜಾ ಹೆಗ್ಡೆ ಅವರದ್ದು ಮಾತ್ರವಲ್ಲ ಎಲ್ಲರದ್ದೂ ಎಂದು ಸಿನಿಮಾತಂಡ ಸ್ಪಷ್ಟಪಡಿಸಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?