
ಸಂಜಯ್ ಲೀಲಾ ಭನ್ಸಾಲಿ ಅವರ ಬಹುನಿರೀಕ್ಷಿತ ಗಂಗುಬಾಯಿ ಕಥಿಯಾವಾಡಿ ಸಿನಿಮಾಗೆ ತೊಂದರೆ ಎದುರಾಗಿದೆ. ಕಾಮಟಿಪುರದ ವೇಶ್ಯಾಗೃಹವೊಂದರ ಮೇಡಂನ ಜೀವನಕಥೆಯನ್ನು ಅದೇ ಹೆಸರಿನಲ್ಲಿ ಈ ಚಿತ್ರ ಗುರುತಿಸಿದೆ. ಗಂಗುಬಾಯಿಯ ಮಗ ಬಾಬುಜಿ ರಾವ್ಜಿ ಷಾ ಚಲನಚಿತ್ರ ನಿರ್ಮಾಪಕ ಹಾಗೂ ಆಲಿಯಾ ಭಟ್ ಮತ್ತು ಭನ್ಸಾಲಿ ಪ್ರೊಡಕ್ಷನ್ಸ್ ವಿರುದ್ಧ ಕೇಸು ದಾಖಲಿಸಿದ್ದಾರೆ.
ದಿ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಕಾದಂಬರಿ ಆಧಾರಿತ ಸಿನಿಮಾ ಆಗಿದೆ ಇದು. ಕಥೆ ಬರೆದ ಹುಸೈನ್ ಝೈದಿ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಈ ಕಾದಂಬರಿಯ ಭಾಗವಾಗಿದ್ದ ವರದಿಗಾರ ಜೇನ್ ಬೊರ್ಗೆಸ್ ಅವರ ಸಂಶೋಧನೆ ನಡೆಸಿದ್ದರು. ಅವರ ವಿರುದ್ಧವೂ ಕೇಸು ದಾಖಲಿಸಲಾಗಿದೆ.
ಅಲಿಯಾ ಜೊತೆ ಮದುವೆ: ಬಿಗ್ ಹಿಂಟ್ ಕೊಟ್ಟ ರಣಬೀರ್ ಕಪೂರ್
ಮುಂಬೈನ ಮಾಫಿಯಾ ಕ್ವೀನ್ಸ್‌ನ ಕೆಲವು ಭಾಗಗಳು ಮಾನಹಾನಿಕರ ಮತ್ತು ಗೌಪ್ಯತೆ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಬಾಬುಜಿ ಆರೋಪಿಸಿದ್ದಾರೆ. ಅವರು ಪುಸ್ತಕದ ಮುದ್ರಣ ಮತ್ತು ಪ್ರಸರಣದ ಶಾಶ್ವತ ನಿಲುಗಡೆ, ಗಂಗುಬೈ ಅವರ ಜೀವನಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಅಳಿಸುವುದು ಮತ್ತು ಚಲನಚಿತ್ರದ ನಿರ್ಮಾಣವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.
ಮುಂಬರುವ ವಾರದಲ್ಲಿ ಅವರು ಮಾನಹಾನಿ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ, ಮತ್ತು ಅಶ್ಲೀಲ ಮತ್ತು ಅಸಭ್ಯ ವಸ್ತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ತಂಡದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬಹುದು ಎಂದು ಬಾಬುಜಿಯ ವಕೀಲ ನರೇಂದ್ರ ದುಬೆ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.