ಗೇಮ್ ಚೇಂಜರ್, ಪುಷ್ಪಾ-2 ನಿರ್ಮಾಪಕ ದಿಲ್‌ರಾಜು ನಿವಾಸದ ಮೇಲೆ ಐಟಿ ದಾಳಿ

Published : Jan 21, 2025, 12:56 PM IST
ಗೇಮ್ ಚೇಂಜರ್, ಪುಷ್ಪಾ-2 ನಿರ್ಮಾಪಕ ದಿಲ್‌ರಾಜು ನಿವಾಸದ ಮೇಲೆ ಐಟಿ ದಾಳಿ

ಸಾರಾಂಶ

ತೆಲುಗಿನ ಖ್ಯಾತ ನಿರ್ಮಾಪಕ ಹಾಗೂ  ಇತ್ತೀಚೆಗೆ ಬಿಡುಗಡೆಯಾದ ರಾಮ್‌ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾದ ನಿರ್ಮಾಪಕ ವಿತರಕ ದಿಲ್‌ರಾಜು ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆಲುಗಿನ ಖ್ಯಾತ ನಿರ್ಮಾಪಕ ಹಾಗೂ  ಇತ್ತೀಚೆಗೆ ಬಿಡುಗಡೆಯಾದ ರಾಮ್‌ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾದ ನಿರ್ಮಾಪಕ ವಿತರಕ ದಿಲ್‌ರಾಜು ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ದಿಲ್‌ರಾಜುಗೆ ಸಂಬಂಧಿಸಿದ ಹೈದರಾಬಾದ್‌ನಲ್ಲಿರುವ ಹಲವು ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ದಿಲ್‌ರಾಜು ಅವರು ಹೊಂದಿದ್ದಾರೆ. ದಿಲ್‌ರಾಜು ಅವರಿಗೆ ಸೇರಿದ ಮನೆ ಕಚೇರಿ ಸೇರಿದಂತೆ ಒಟ್ಟು 8 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ .

ದಿಲ್ ರಾಜು ಹೆಸರಿನಿಂದ ಫೇಮಸ್ ಆಗಿರುವ ಅವರ ನಿಜವಾದ ಹೆಸರು ವೇಲಂಕುಚ ವೆಂಕಟ ರಮಣ ರೆಡ್ಡಿಯಾಗಿದ್ದು, ತೆಲುಗಿನ ಖ್ಯಾತ ಚಲನಚಿತ್ರ ವಿತರಕರು ಮತ್ತು ನಿರ್ಮಾಪಕರಾಗಿದ್ದಾರೆ. ಜೊತೆಗೆ ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ಕಳೆದ ವರ್ಷಗಳಲ್ಲಿ ಅವರು ತಮಿಳಿನಲ್ಲಿ ವರಿಸು, ತೆಲುಗಿನ ಶಾಕುಂತಲಂ, ದಿ ಫ್ಯಾಮಿಲಿ ಸ್ಟಾರ್, ಗೇಮ್ ಚೇಂಜರ್ ಮತ್ತು ಸಂಕ್ರಾಂತಿಕಿ ವಸ್ತುನಂ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 

ಬಂಜಾರಹಿಲ್ಸ್, ಕೊಂಡಾಪುರ, ಜ್ಯುಬಿಲಿಹಿಲ್ಸ್, ಗಚ್ಚಿಬುಲಿ ಸೇರಿದಂತೆ ಇಂದು ಮುಂಜಾನೆಯಿಂದಲೇ ದಿಲ್‌ರಾಜು ಅವರಿಗೆ ಸಂಬಂಧಿಸಿದ 8 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ದಿಲ್ ರಾಜು ಅವರ ನಿವಾಸ ಮಾತ್ರವಲ್ಲದೇ, ಅವರ ವ್ಯವಹಾರ ಪಾಲುದಾರ ಮತ್ತು ಸಹ ನಿರ್ಮಾಪಕ ಸಿರೀಶ್ ಮತ್ತು ಅವರ ಪುತ್ರಿ ಹನ್ಸಿತಾ ರೆಡ್ಡಿ ಅವರ ಆಸ್ತಿಗಳಲ್ಲಿಯೂ ಸಹ ಐಟಿ ಇಲಾಖೆ ಪರಿಶೀಲಿಸುತ್ತಿದ್ದು, ಅವರ ಆಸ್ತಿಗಳನ್ನು ಶೋಧಿಸಲಾಗುತ್ತಿದೆ. ಇವರ ಜೊತೆಗೆ 'ಪುಷ್ಪ 2' ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರು ಸಹ ತನಿಖೆ ಎದುರಿಸುತ್ತಿದ್ದಾರೆ, ಐಟಿ  ಅಧಿಕಾರಿಗಳು ತೆಲುಗು ಚಲನಚಿತ್ರೋದ್ಯಮದಲ್ಲಿನ ಹಣಕಾಸಿನ ವಹಿವಾಟುಗಳು ಮತ್ತು ತೆರಿಗೆ ವ್ಯತ್ಯಾಸದ ನಂತರ ಈ ದಾಳಿ ನಡೆದಿದೆ.

ಈ ದಾಳಿಗಳು ಟಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದ್ದು, ಉನ್ನತ ಮಟ್ಟದ ಚಲನಚಿತ್ರ ನಿರ್ಮಾಪಕರು ನಡೆಸಿರು ಸಂಭಾವ್ಯ ಹಣಕಾಸಿನ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆದರೂ ಈ, ಹುಡುಕಾಟಗಳ ಫಲಿತಾಂಶಗಳ ಕುರಿತು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?