
ಬಾಲಿವುಡ್ ನಟಿ ಊರ್ವಶಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಸೈಫ್ ಅಲಿ ಖಾನ್ ಇರಿತದ ವಿಷಯದ ಬಗ್ಗೆ ಕೇಳಿದ್ರೆ, ತಮ್ಮ ಅಪ್ಪ-ಅಮ್ಮ ಕೊಡಿಸಿದ ವಜ್ರದ ವಾಚು, ಉಂಗುರದ ಬಗ್ಗೆ ಮಾತನಾಡಿ ಕೊನೆಗೆ ಕ್ಷಮೆ ಕೋರಿದ್ದ ನಟಿ, ಕೆಲ ಹಿಂದೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್ ಚಿನ್ನದ ಕೇಕ್ ಮಾಡಿಸಿ ಸದ್ದು ಮಾಡಿದ್ದರು. ಆದರೆ ಈಕೆ ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಒಂದು ಕಳೆದ ಜುಲೈನಲ್ಲಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಲ್‌ಚಲ್ ಸೃಷ್ಟಿಸಿತ್ತು. ಈ ವಿಡಿಯೋದಲ್ಲಿ ನಟಿ ಕೂದಲನ್ನು ಸರಿ ಮಾಡಿಕೊಂಡು ಬಾತ್‌ರೂಮ್‌ಗೆ ಹೋಗುವುದನ್ನು ನೋಡಬಹುದು. ಅಲ್ಲಿ ಬಟ್ಟೆ ತೆಗೆಯುವಂತೆ ಕೈಹಾಕಿದ್ದಾರೆ. ಅಷ್ಟರಲ್ಲಿ ವಿಡಿಯೋ ಕಟ್ ಆಗಿತ್ತು.
ಆ ಬಗ್ಗೆ ಆಗ ಕೇಳಿದಾಗ, ನಟಿ, ಇದು ನನ್ನದೇ ವಿಡಿಯೋ. ಆದರೆ ಹೇಗೆ ಲೀಕ್ ಆಯ್ತೋ ಗೊತ್ತಿಲ್ಲ. ಇಂಥ ಗೌಪ್ಯ ವಿಡಿಯೋಗಳು ಹೇಗೆ ಹೊರಬರುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇದು ವಿಷಾದನೀಯ ಘಟನೆ ಎಂದಿದ್ದರು. ಅಂಥ ಒಂದು ಘಟನೆ ಯಾವ ಹೆಣ್ಣಿಗೂ ಬರುವುದು ಬೇಡ ಎಂದಿದ್ದರು. ಆದರೆ, ಹಲವು ತಿಂಗಳುಗಳ ಬಳಿಕ ನಟಿ ಸತ್ಯವನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ. ಆ ಸ್ನಾನದ ದೃಶ್ಯಗಳನ್ನು ನಿರ್ಮಾಪಕರಿಗಾಗಿ ತಾವೇ ಲೀಕ್ ಮಾಡಿದ್ದು ಎನ್ನುವ ವಿಷಯವನ್ನು ಅವರು ಇದೀಗ ಬಾಲಿವುಡ್ ಬಬಲ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ಲೀಸ್ ಕ್ಷಮಿಸಿ, ಸೈಫ್ ಇರಿತದ ವಿಷ್ಯದಲ್ಲಿ ದೊಡ್ಡ ತಪ್ಪು ಮಾಡಿದೆ: ಅಂಗಲಾಚಿ ಕ್ಷಮೆ ಕೋರಿದ ನಟಿ ಊರ್ವಶಿ ರೌಟೇಲಾ!
ಘುಸ್ಪೈಥಿಯಾ ಚಿತ್ರದಲ್ಲಿನ ದೃಶ್ಯ ಇದು. ಆ ಚಿತ್ರಕ್ಕಾಗಿ ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಶೂಟ್ ಮಾಡಲಾಗಿದೆ. ಅದನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿತ್ತು ಎಂದಿರುವ ನಟಿ, ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಚಿತ್ರದ ನಿರ್ಮಾಪಕರು ಹಣಕಾಸಿನ ತೊಂದರೆಯಲ್ಲಿದ್ದರು. ಚಿತ್ರ ನಿರ್ಮಾಪಕರಿಗೆ ಈ ದೃಶ್ಯ ಲೀಕ್ ಮಾಡುವುದು ಅನಿವಾರ್ಯವಾಗಿತ್ತು. ಏಕೆಂದರೆ, ನಿರ್ಮಾಪಕರು ನನ್ನ ಬಳಿಗೆ ಬಂದು ತಮ್ಮ ಚಿತ್ರವು ಲಾಸ್ನಲ್ಲಿ ಇದೆ. ಚಿತ್ರಕ್ಕಾಗಿ ಭೂಮಿಯನ್ನು ಮಾರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಅದಕ್ಕಾಗಿ ಬಾತ್ರೂಮ್ ವಿಡಿಯೋ ಲೀಕ್ ಮಾಡಿದರೆ,, ಮುಂದೆ ಪ್ರಯೋಜನ ಆಗಬಹುದು, ಚಿತ್ರ ಚೆನ್ನಾಗಿ ಓಡಬಹುದು ಎಂದು ಹೇಳಿದ್ದರು. ಆದ್ದರಿಂದ ನನ್ನ ಅನುಮತಿ ಮೇರೆಗೆ ಈ ದೃಶ್ಯಗಳನ್ನು ಲೀಕ್ ಮಾಡಲಾಗಿತ್ತು ಎಂದಿದ್ದಾರೆ ನಟಿ.
ಘುಸ್ಪೈಥಿಯ ಒಂದು ಅಪರಾಧ ಹಿನ್ನೆಲೆಯ ಸಿನಿಮಾ ಆಗಿದೆ. ಇದನ್ನು ಸುಸಿ ಗಣೇಶನ್ ಬರೆದು ನಿರ್ದೇಶಿಸಿದ್ದಾರೆ. ಊರ್ವಶಿ ರೌಟೇಲಾ, ವಿನೀತ್ ಕುಮಾರ್ ಸಿಂಗ್, ಗೋವಿಂದ್ ನಾಮ್ದೇವ್ ಮತ್ತು ಅಕ್ಷಯ್ ಒಬೆರಾಯ್ ನಟಿಸಿರುವ ತಮಿಳು ಚಿತ್ರ ತಿರುಟ್ಟು ಪಯಲೆ 2 (2017) ನ ಹಿಂದಿ ರಿಮೇಕ್ ಆಗಿದೆ. ಈ ಚಿತ್ರವು ಆಗಸ್ಟ್ 9, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇಷ್ಟೆಲ್ಲಾ ವಿಡಿಯೋ ಲೀಕ್ ಆದ ಮೇಲೂ ಚಿತ್ರ ಗಳಿಸಿದ್ದ 40 ಲಕ್ಷ ರೂಪಾಯಿ ಮಾತ್ರ! ಇನ್ನು ನಟಿ ಊರ್ವಶಿ ಇತ್ತೀಚೆಗೆ ಡಾಕು ಮಹಾರಾಜ್ ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ನಂದಮೂರಿ ಬಾಲಕೃಷ್ಣ ಮತ್ತು ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ, ವಿಶೇಷವಾಗಿ ದಬಿದಿ ದಿಬಿದಿ ಹಾಡಿಗೆ ವಿರೋಧದ ಹೊರತಾಗಿಯೂ, ಚಿತ್ರವು ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹100 ಕೋಟಿಗೂ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ. ಬಾಬಿ ಕೊಹ್ಲಿ ನಿರ್ದೇಶಿಸಿದ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ಪ್ರಕಾಶ್ ರಾಜ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನನ್ನ ಜಾತಕದಲ್ಲಿ ಕಟನಿ ಯೋಗ, ಮದ್ವೆಯಾದ್ರೆ ತೊಂದ್ರೆ ಎನ್ನುತ್ತಲೇ ನೋವು ಬಿಚ್ಚಿಟ್ಟ ಊರ್ವಶಿ ರೌಟೇಲಾ !
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.