ಹಿಮಾಲಯಕ್ಕೆ ಹೊರಟ ರಜನಿಕಾಂತ್ ಮಾಧ್ಯಮಕ್ಕೆ ಹೇಳಿದ್ದೇನು? ಅಚ್ಚರಿ ಹೇಳಿಕೆ ವೈರಲ್!

By Shriram BhatFirst Published May 29, 2024, 2:56 PM IST
Highlights

ನಟ ರಜನಿಕಾಂತ್ ಅವರು ಹಲವು ವರ್ಷಗಳಿಂದ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿದ್ದಾರೆ. ತಮ್ಮ ಗುರು ಬಾಬಾಜಿ ಅವರ ಬಳಿ ತೆರಳಿ ಅಲ್ಲಿ ಸರಿಸುಮಾರು ಹದಿನೈದು ದಿನಗಳ ಕಾಲ ಧ್ಯಾನ ಮಾಡಿ ಮನಸ್ಸು ಹಾಗೂ ದೇಹವನ್ನು ಹಗುರ ಮಾಡಿಕೊಳ್ಳುವುದು..

ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಮತ್ತೆ ಹಿಮಾಲಯದತ್ತ ತೆರಳಿದ್ದಾರೆ. ಅವರು ಪ್ರತಿವರ್ಷ ಹಿಮಾಲಯಕ್ಕೆ ಹೋಗಿ ಅಲ್ಲಿ ಬಾಬಾಜಿ ದರ್ಶನ್ ಪಡೆದು ಸ್ವಲ್ಪ ದಿಗಳ ಬಳಿಕ ಮರಳಿ ಬರುವುದು ಬಹಳಷ್ಟು ವರ್ಷಗಳಿಂದ ನಟ ರಜನಿಕಾಂತ್ ಜೀವನದ ರೀತಿನೀತಿಯೇ ಆಗಿದೆ. ಇದೀಗ ರಜನಿಕಾಂತ್ ತಮ್ಮ ಪೋಸ್ ಗಾರ್ಡನ್‌ನಿಂದ ಹಿಮಾಲಯಕ್ಕೆ ತೆರಳುತ್ತಿದ್ದಾರೆ. ಈ ವೇಳೆ ಮೀಡಿಯಾ ಜತೆ ಮಾತನಾಡಿದ ನಟ ರಜನಿ 'ಬಾಬಾಜಿ ಕೇವ್‌ಗೆ ಮತ್ತೆ ಹೊರಟಿದ್ದೇನೆ. ಆಗಾಗ ಆಧ್ಯಾತ್ಮಿಕ ಪ್ರಯಾಣ ಮಾಡುವುದು ಜೀವನದಲ್ಲಿ ರೀಫ್ರೆಶ್‌ಗೆ ಎಡೆಮಾಡಿಕೊಡುತ್ತದೆ. ಹಿಮಾಲಯದ ಬಾಬಾಜಿ ಗುಹೆಗೆ ತೆರಳುತ್ತಿದ್ದೇನೆ ಎಂದಿದ್ದಾರೆ' ಎಂದಿದ್ದಾರೆ. 

ಇದೇ ವೇಲೆ ಮೀಡಿಯಾ ಪ್ರಶ್ನೆಗೆ ಉತ್ತರಿಸಿದ ನಟ ರಜನಿಕಾಂತ್ 'ತಮಿಳು ಸಿನಿಮಾದಲ್ಲಿ ಬಲವಾದ ಒಂದು ಕಾಂಪಿಟೀಶನ್ ಇದೆ. ಅದೇನೆಂದರೆ,, ಯಾವುದೇ ಸಿನಿಮಾ ಅದು ಕಾವ್ಯವೇ ಅಥವಾ ಸಂಗೀತಮಯವೇ ಎಂಬುದು ಎಂದಿದ್ದಾರೆ. ಜತೆಗೆ, ಮತಯ್ತೊಂದು ಪ್ರಶ್ನೆಗೆ ಉತ್ತರಿಸಿದ ನಟ ರಜನಿಕಾಂತ್ ನಾನು ರಾಜಕೀಯ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಆದರೆ, ಈ ಸಾರಿ ಗೆಲ್ಲುವುದು ಮೋದಿಯೇ' ಎಂದು ಉತ್ತರಿಸಿದ್ದಾರೆ.

Latest Videos

ಭೂಗತಲೋಕದ ಜತೆ ನಟಿ ನಗ್ಮಾಗೆ ಲಿಂಕ್; ಅಸಲಿಗೆ ಏನಾಗ್ತಿದೆ ಈ ಒಂಟಿ ನಟಿಯ ಕಥೆ? 

ನಟ ರಜನಿಕಾಂತ್ ಅವರು ಹಲವು ವರ್ಷಗಳಿಂದ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿದ್ದಾರೆ. ತಮ್ಮ ಗುರು ಬಾಬಾಜಿ ಅವರ ಬಳಿ ತೆರಳಿ ಅಲ್ಲಿ ಸರಿಸುಮಾರು ಹದಿನೈದು ದಿನಗಳ ಕಾಲ ಧ್ಯಾನ ಮಾಡಿ ಮನಸ್ಸು ಹಾಗೂ ದೇಹವನ್ನು ಹಗುರ ಮಾಡಿಕೊಳ್ಳುವುದು ನಟ ರಜನಿಕಾಂತ್ ಅಭ್ಯಾಸ ಎನ್ನಲಾಗಿದೆ. ಈ ಮೂಲಕ ಆತ್ಮವನ್ನು ತಲುಪುವ ಹಲವು ವರ್ಷಗಳ ನಿರಂತರ ಪ್ರಯತ್ನದಲ್ಲಿ ನಟ ರಜನಿಕಾಂತ್ ಇದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡುತ್ತಾರೆ. 

ಹೀಗೂ ಉಂಟೇ..! ರಾಮಾಯಣಕ್ಕೆ ಪಡೆದ ಭಾರೀ ಸಂಭಾವನೆಯನ್ನು ಏನ್ಮಾಡಿದಾರೆ ಯಶ್?

ನಟ ರಜನಿಕಾಂತ್ ಬಹಳಷ್ಟು ವಿಭಿನ್ನ ಹಾಗೂ ಮೆಚ್ಚತಕ್ಕಂಥ ವ್ಯಕ್ತಿತ್ವ ಹೊಂದಿದ್ದಾರೆ. ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲರೂ ಚಿಕ್ಕಮಕ್ಕಳನ್ನು ದತ್ತು ಪಡೆಯುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ನಟ ರಜನಿಕಾಂತ್ ಅವರು 83 ವರ್ಷದ ವ್ಯಕ್ತಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿ, ಅವರನ್ನು ವಿನಂತಿಸಿ ಪ್ರಯತ್ನಿಸಿದ್ದರು. ಇಳಿವಯಸ್ಸಿನ 'ಪಿ ಕಲ್ಯಾಣ ಸುಂದರಂ' (Kalyanasundaram) ಎಂಬ ವ್ಯಕ್ತಿಯನ್ನು ದತ್ತು ಪಡೆಯಲು ಬಯಸಿದ್ದ ರಜನಿಕಾಂತ್, ಆ ಬಗ್ಗೆ 'ದಯವಿಟ್ಟು ನೀವು ನನಗೆ ತಂದೆಯಾಗಿ ನಮ್ಮ ಮನೆಗೆ ಬನ್ನಿ' ಎಂದು ಕೇಳಿಕೊಂಡಿದ್ದರು.

ಆ್ಯಂಕರ್ ಅನುಶ್ರೀಗೆ ಆ ಗುಟ್ಟು ಹೇಳದ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದೇಕೆ?

ನಟ ರಜನಿಕಾಂತ್ ಅವರು ಒಂದು ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ್ದರು. ಅಲ್ಲಿ 'ಪಿ ಕಲ್ಯಾಣ ಸುಂದರಂ' ಎಂಬ ವ್ಯಕ್ತಿಯೊಬ್ಬರಿಗೆ 'ಮ್ಯಾನ್ ಆಫ್‌ ದಿ ಮಿಲೇನಿಯಮ್‌' ಪ್ರಶಸ್ತಿ ಕೊಡಲಾಗಿತ್ತು. ಅಲ್ಲಿ ಆಹ್ವಾನಿತರಾಗಿ ಕುಳಿತಿದ್ದ ನಟ ರಜನಿಕಾಂತ್ ಅವರು 'ಅವರ ದಾನ-ಧರ್ಮಗಳನ್ನು ನೋಡಿ ಮನಸೋತ ರಜನಿ, ನೀವ್ಯಾಕೆ ನಮ್ಮ ಮನೆಗೆ ತಂದೆಯಾಗಿ ಬರಬಾರ್ದು? ನನಗೆ ತಂದೆಯಿಲ್ಲ, ಮಕ್ಕಳಿದ್ದಾರೆ. ದಯವಿಟ್ಟು ತಂದೆಯಾಗಿರಿ ಎಂದುಬೇಡಿಕೊಂಡಿದ್ರಂತೆ. ಆದರೆ ಆ ವ್ಯಕ್ತಿ ಕಲ್ಯಾಣ ಸುಂದರಂ ಬರಲಿಲ್ಲ. ನಟ ರಜನಿಕಾಂತ್ ಈ ಬಗ್ಗೆ ಸಾಕಷ್ಟು ಸಮಾರಂಭಗಳಲ್ಲಿ, ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?

ಪಿ ಕಲ್ಯಾಣ ಸುಂದರಂ ಅವರು ಮಾನವೀಯತೆ ಹಾಗೂ ದಾನಧರ್ಮಗಳ ಬಗ್ಗೆ ಅರಿತ ನಟ ರಜನಿಕಾಂತ್, ಆ ಹಿರಿಯ ವ್ಯಕ್ತಿಯನ್ನು ತಂದೆಯಾಗಿ ದತ್ತು ಪಡೆಯಲು ನಿರ್ಧರಿಸಿ ಸಕಲ ಪ್ರಯತ್ನ ಮಾಡಿದ್ದರು. ಆದರೆ, ಅದು ಫಲ ಕೊಡಲಿಲ್ಲ. ಏಕೆಂದರೆ, ಈ ಪಿ ಕಲ್ಯಾಣ ಸುಂದರಂ ಅವರು ನಟ ರಜನಿಕಾಂತ್ ಅವರ ಕೋರಿಕೆಯನ್ನು ಒಪ್ಪಿ ಅವರ ಮನೆಗೆ ಬಂದು ಇರಲು ಮನಸ್ಸು ಮಾಡಲಿಲ್ಲ. 

ಸುಜಯ್ ಹೆಗಡೆ 'ಹೊಸ ಕಥೆಯೊಂದು ಶುರುವಾಗಿದೆ', ಪ್ರೇರಣಾಗೆ 'ಮನಸೆಲ್ಲಾ ನೀನೇ' ಅಂದಿದ್ದಾಯ್ತು..!

click me!