2 ನೇ ಚಾನ್ಸ್ ಕೊಟ್ಟ ಬದುಕಿಗೆ ನಾನು ಗ್ರೇಟ್‌ಫುಲ್‌; ಮನಿಶಾ ಕೊಯಿರಾಲಾ ಪೋಸ್ಟ್ ವೈರಲ್!

By Suvarna News  |  First Published Dec 2, 2019, 1:20 PM IST

ಕ್ಯಾನ್ಸರ್‌ ಎಂಬ ಶತ್ರುವನ್ನ ಗೆದ್ದ ದಿಟ್ಟೆ ಮನಿಶಾ ಕೋಯಿರಾಲಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದವರಿಗೆ ಆಗಾಗಾ ಇನ್ಸ್ಪೈರ್ ಆಗುವಂತಹ ಪೋಸ್ಟ್ ಹಾಕುತ್ತಿರುತ್ತಾರೆ. ಇದೀಗ ಅವರು ಹಾಕಿರುವ ಪೋಸ್ಟ್ ನೋಡಿದ್ರೆ ಬದುಕೇ ಬೇಡ ಎಂದವರಿಗೂ ಸ್ಫೂರ್ತಿ ಕೊಡುವಂತಿದೆ. 


ಮನಿಶಾ ಕೋಯಿರಾಲಾ ಕ್ಯಾನ್ಸರನ್ನು ಗೆದ್ದು ಬಂದ ದಿಟ್ಟೆ. ಕ್ಯಾನ್ಸರಂತ ಮಹಾಮಾರಿಗೆ ಸಡ್ಡು ಹೊಡೆದ ಛಲಗಾತಿ ಮನಿಶಾ ಲೈಫ್ ಕಹಾನಿ ನಿಜಕ್ಕೂ ಬೇರೆಯವರಿಗೆ ಮಾದರಿ.  ಆಗಾಗ ತಮ್ಮ ಕಹಾನಿಯನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಿರುತ್ತಾರೆ. 

ಇದೀಗ ಮನೀಶಾ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋ ಹಾಗೂ ಹಿಮಚ್ಛಾದಿತ ಬೆಟ್ಟದ ನಡುವೆ ನಿಂತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದು ಕಡೆ ಜೀವನ್ಮರಣದ ನಡುವಿನ ಹೋರಾಟ, ಇನ್ನೊಂದೆಡೆ ಹೊಸ ಇನ್ನಿಂಗ್ಸ್ ಶುರು ಮಾಡಿದ ಸಂಭ್ರಮ ಎರಡನ್ನೂ ನೋಡಬಹುದಾಗಿದೆ. 

Tap to resize

Latest Videos

undefined

ಅನ್ನದಾತನ ಧ್ವನಿ ಆದ ದಾಸ ದರ್ಶನ್..!

'ಶುಭೋದಯ ಸ್ನೇಹಿತರೇ, ಬದುಕಲು ಎರಡನೇ ಅವಕಾಶ ಕೊಟ್ಟಿದ್ದಕ್ಕೆ ಹೃದಯಪೂರ್ವಕ ಕೃತಜ್ಞತೆಗಳು. ಆರೋಗ್ಯಯುತವಾಗಿ, ಖುಷಿಖುಷಿಯಾಗಿ ಬದುಕಲು ಇದೊಂದು ಸದವಕಾಶ. ಲೈಫ್ ಜಿಂಗಾಲಾಲ' ಎಂದು ಬರೆದುಕೊಂಡಿದ್ದಾರೆ.  

 

Forever greatful for second chance to life 🙏🏻🙏🏻🙏🏻gm friends.. this is an amazing life and a chance to live a happy& healthy one 💖💖💖 pic.twitter.com/LzCL25mWVc

— Manisha Koirala (@mkoirala)

ಮನಿಶಾ ಹಿಂದೊಮ್ಮೆ ಮಾತನಾಡುವಾಗ, 'ನನ್ನ ಜೀವನದಲ್ಲಿ ಕ್ಯಾನ್ಸರ್ ಒಂದು ಗಿಫ್ಟ್ ಆಗಿ ಬಂತು. ನಾನು ಬದುಕನ್ನು ನೋಡುವ ದೃಷ್ಟಿಕೋನ ಬದಲಾಯಿತು. ಮನಸ್ಸು ಶುದ್ಧವಾಗಿದೆ. ಕೋಪ ತಣ್ಣಗಾಗಿಸಿಕೊಂಡಿದ್ದೇನೆ.  ಮನಸ್ಸು ಪ್ರಶಾಂತವಾಗಿದೆ' ಎಂದು ಹೇಳಿದ್ದರು. 

ಕ್ಯಾನ್ಸರ್‌ನಿಂದ ಗುಣಮುಖರಾದ ನಂತರ 'ಡಿಯರ್ ಮಾಯಾ' ಮೂಲಕ ಕಮ್ ಬ್ಯಾಕ್ ಮಾಡಿದರು. ಸಂಜಯ್ ದತ್ ಅವರ 'ಪ್ರಸ್ಥಾನಂ' ನಲ್ಲಿ ಕಾಣಿಸಿಕೊಂಡಿದ್ದಾರೆ. 

ರಚಿತಾ ರಾಮ್ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ; ಉಂಗುರ ಬದಲಾಯಿಸಿಕೊಂಡ ಜೋಡಿ!

ಕ್ಯಾನ್ಸರ್ ವಿರುದ್ಧ ಹೋರಾಡುವವರಿಗೆ ಆಗಾಗಾ ಇನ್ಸ್ಪೈರ್ ಆಗುವಂತಹ ಪೋಸ್ಟ್ ಹಾಕ್ತಾ ಇರ್ತಾರೆ. ಕೊಯಿರಾಲಾ ಹೆಚ್ಚೆಚ್ಚು ವಾಕ್ ಮಾಡುವುದನ್ನು, ನೇಪಾಳದ ಬೆಟ್ಟಗಳಲ್ಲಿ ಟ್ರಕ್ಕಿಂಗ್ ಮಾಡುವುದನ್ನು ಇಷ್ಟಪಡುತ್ತಾರೆ. 

click me!