ಪತಿ ರಣವೀರ್‌ ಜತೆ ನಟಿಸಲು ದೀಪಿಕಾ ನಕಾರ, ಕಾರಣವೂ ಬಹಿರಂಗ!

By Web Desk  |  First Published Dec 2, 2019, 10:15 AM IST

ಪತಿ ರಣವೀರ್‌ ಜತೆ ನಟಿಸಲು ದೀಪಿಕಾ ನಕಾರ| ಕಾರಣವೂ ಬಹಿರಂಗ| ದೀಪಿಕಾ ನೋ ಎಂದಿದ್ದೇಕೆ? ಇಲ್ಲಿದೆ ವಿವರ


ಮುಂಬೈ[ಜಡಿ.02]: ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‌ನ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು. ಸಿನಿಮಾದಲ್ಲಿ ಜೋಡಿಯಾಗಿದ್ದ ಇಬ್ಬರು ಈಗ ನಿಜ ಜೀವನದಲ್ಲೂ ಕೂಡ ಜೋಡಿಯಾಗಿದ್ದಾರೆ.

ಆದರೆ ಮದುವೆ ಬಳಿಕ ರಣವೀರ್‌ ಜತೆ ನಟಿಸಲು ಬಂದಿದ್ದ ಸತತ ಮೂರು ಆಫರ್‌ಗಳನ್ನು ತಿರಸ್ಕರಿಸಿದ್ದಾರೆ ಎನ್ನುವ ಅಚ್ಚರಿಯ ಸಂಗತಿಯನ್ನು ಪತ್ರಿಕೆಯೊಂದು ವರದಿ ಮಾಡಿದೆ.

Tap to resize

Latest Videos

ಸತಿ- ಪತಿ ಎನ್ನುವುದನ್ನು ಅತಿಯಾಗಿ ಬಿಂಬಿಸಲು ಇಷ್ಟವಿಲ್ಲದೇ ಇದ್ದುದ್ದರಿಂದ ಸತತ ಮೂರು ಸಿನಿಮಾಗಳನ್ನು ದೀಪಿಕಾ ತಿರಸ್ಕರಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ರಣವೀರ್‌ ಹಾಗೂ ದೀಪಿಕಾ ಜೋಡಿ ಬಾಜಿರಾವ್‌ ಮಸ್ತಾನಿ ಹಾಗೂ ಪದ್ಮಾವತ್‌ ಮುಂತಾದ ಸೂಪರ್‌ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

click me!