
ಸ್ಯಾಂಡಲ್ ವುಡ್ ನ ಅದ್ದೂರಿ ಸಿನಿಮಾ, ಇಡೀ ವಿಶ್ವವೇ ಕಾತರ, ನಿರೀಕ್ಷೆಯಿಂದ ಕಾಯುತ್ತಿರುವ ಕೆಜಿಎಫ್-2 ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಭಾರತೀಯ ಸಿನಿಮಾರಂಗದ ಸ್ಟಾರ್ ಕಲಾವಿದರು ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ವಿಶೇಷ.
ಇನ್ನು ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಕನ್ನಡ ಟ್ರೈಲರ್ ಅನ್ನು ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. ಕಾರ್ಯಕ್ರಮದ ವಿಶೇಷ ಅತಿಥಿಯಾಗಿರುವ ಶಿವರಾಜ್ ಕುಮಾರ್ ಕನ್ನಡದ ಅದ್ದೂರಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭಹಾರೈಸಲಿದ್ದಾರೆ. ಈ ಕ್ಷಣಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದರು. ಇದೀಗ ಸುಂದರ ಕ್ಷಣವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಟ್ರೈಲರ್ ರಿಲೀಸ್ ಕಾರ್ಯಕ್ರಮವನ್ನು ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ. ಮೊದಲ ಬಾರಿಗೆ ಕರಣ್ ಜೋಹರ್ ಕನ್ನಡದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಲ್ಲದೆ ನಡೆಸಿಕೊಡುತ್ತಿರುವುದು ಕನ್ನಡ ಅಭಿಮಾನಿಗಳು ಸಹ ಸಖತ್ ಥ್ರಿಲ್ ಆಗಿದ್ದಾರೆ. ಈ ಸುಂದರ ಸಮಾರಂಭದಲ್ಲಿ ಇಡೀ ಕೆಜಿಎಫ್-2 ತಂಡ ಭಾಗಿಯಾಗಲಿದೆ. ಅಧೀರ ಪಾತ್ರದಲ್ಲಿ ಮಿಂಚಿರುವ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಇಡೀ ತಂಡ ಹಾಜರಿರಲಿದೆ.
ಕಾರ್ಯಕ್ರಮದ ವಿವರ
ಸಂಜೆ 6.30 ರಿಂದ ಕಾರ್ಯಕ್ರಮ ಶುರುವಾಗಲಿದೆ. ಸಚಿವ ಡಾ.ಸಿ ಅಶ್ವತ್ ನಾರಾಯಣ್ ಅವರ ಮಾತುಗಳಿಂದ ಕಾರ್ಯಕ್ರಮ ಶುರುವಾಗಲಿದೆ. 6.40ಕ್ಕೆ ಕನ್ನಡ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಲಾಂಚ್ ಮಾಡುತ್ತಿದ್ದಾರೆ. ಬಳಿಕ ಬ್ಯಾಕ್ ಟು ಬ್ಯಾಕ್ ನಾಲ್ಕು ಭಾಷೆಗಳ ಟ್ರೈಲರ್ ಗಳು ಬಿಡುಗಡೆಯಾಗಲಿದೆ. ಮಲಯಾಳಂ ಟ್ರೈಲರ್ ಅನ್ನು ನಟ ಪೃಥ್ವಿ ರಾಜ್ ಸುಕುಮಾರನ್ ಬಿಡುಗಡೆ ಮಾಡಿ ನಂತರ ಮಾತನಾಡಲಿದ್ದಾರೆ ಬಳಿಕ ಇಡಿ ಸಿನಿಮಾತಂಡ ಮಾತನಾಡಲಿದೆ. ರವಿನಾ ಟಂಡನ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವಿ ಬಸ್ರೂರ್, ಭೂವನ್ ಗೌಡ, ವಿಜಯ್ ಕಿರಗಂದೂರ್, ಪ್ರಶಾಂತ್ ನೀಲ್ ಕೊನೆದಾಗಿ ಯಶ್ ಮಾತನಾಡಲಿದ್ದಾರೆ.
KGF 2; ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಪುನೀತ್ ಮನೆಗೆ ಭೇಟಿ ನೀಡಿದ ಸಂಜಯ್ ದತ್
ಇನ್ನು ಕೆಜಿಎಫ್-2 ಚಿತ್ರದ ಟ್ರೈಲರ್ 5 ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಫರ್ಹಾನ್ ಅಖ್ತರ್ ಬಿಡುಗಡೆ ಮಾಡಲಿದ್ದಾರೆ, ತಮಿಳಿನಲ್ಲಿ ನಟ ಸೂರ್ಯ ರಿಲೀಸ್ ಮಾಡುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ರಾಮ್ ಚರಣ್ ಬಿಡುಗಡೆ ಮಾಡುತ್ತಿದ್ರೆ, ಮಲಯಾಳಂನಲ್ಲಿ ಪೃಥ್ವಿರಾಜ್ ಬಿಡುಗಡೆ ಮಾಡುತ್ತಿದ್ದಾರೆ.
KGF 2 VS Beast: ಕರ್ನಾಟಕದಲ್ಲಿ KGF 2 ಗೆ ಫೈಟ್ ನೀಡೋಕೆ ಬೀಸ್ಟ್ ಮಾಸ್ಟರ್ ಪ್ಲ್ಯಾನ್.!
ಬೇರೆ ಬೇರೆ ಭಾಷೆಯ ಟ್ರೈಲರ್ ಅನ್ನು ಅಯಾಯ ಭಾಷೆಯ ಸ್ಟಾರ್ ಕಲಾವಿದರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸುತ್ತಿದೆ. ಕೆಜಿಎಫ್-2 ಕನ್ನಡ ಮಾತ್ರವಲ್ಲದೇ ಇಡೀ ಭಾರತದ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಭಾರತದಾದ್ಯಂತ ಅಭಿಮಾನಿ ಬಳಗಹೊಂದಿರುವ ಯಶ್ ಅವರನ್ನು ಪಾರ್ಟ್-2ನಲ್ಲಿ ನೋಡಲು ಉಸಿರುಬಿಗಿ ಹಿಡಿದು ಕಾಯುತ್ತಿದ್ದಾರೆ.
ಪುನೀತ್ ಮನೆಗೆ ಭೇಟಿ ನೀಡಿದ ಸಂಜಯ್ ದತ್
ಬೆಂಗಳೂರಿನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಭಾಗಿಯಾಗಲು ಬಾಲಿವುಡ್ ನಟ ಸಂಜಯ್ ದತ್ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಬರುತ್ತಿದ್ದಂತೆ ದತ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಪುನೀತ್ ಅಗಲಿಕೆಯ ನೋವಿನಲ್ಲಿರುವ ರಾಜ್ ಕುಟುಂಬವನ್ನು ಸಂಜಯ್ ದತ್ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಪುನೀತ್ ಮನೆಗೆ ಭೇಟಿ ನೀಡಿದ ದತ್ ರಾಘವೇಂದ್ರ ರಾಜ್ ಕುಮಾರ್ ದಂಪತಿ ಮತ್ತು ಮಕ್ಕಳಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ ಕುಟುಂಬದ ಜೊತೆ ಸಂಜಯ್ ದತ್ ಕ್ಲಿಕ್ಕಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.